HEALTH TIPS

ತಂದೆಯ ವಿರುದ್ಧವೇ ದೂರು ನೀಡಿದ ಮಗ; ವಿಚಾರಣೆ ನಡೆಸಿದ ಪೊಲೀಸ್​ಗೆ ಕಾದಿತ್ತು ಅಚ್ಚರಿ!

 

              ಕೊಚ್ಚಿ: ಮಕ್ಕಳಿಗೆ ಪೊಲೀಸರೆಂದರೆ ಬಾಲ್ಯದಿಂದಲೂ ಕೊಂಚ ಭಯ ಇದ್ದೇ ಇರುತ್ತದೆ. ಸಣ್ಣ ವಯಸ್ಸಿನಲ್ಲಿ ಮಕ್ಕಳನ್ನು ಹೆದರಿಸಲು ಪೋಷಕರು ಪೊಲೀಸರನ್ನು ಉಲ್ಲೇಖಿಸುತ್ತಾರೆ. ಹೀಗಾಗಿ ಸಹಜವಾಗಿಯೇ ಮಕ್ಕಳಿಗೆ ಪೊಲೀಸರ ಬಗ್ಗೆ ಭಯ ಇರುತ್ತದೆ. ಆದರೆ ಈ ಬಾಲಕ ಮಾತ್ರ ಸ್ವಲ್ಪವೂ ಅಂಜದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

            ತನ್ನ ತಂದೆಯ ವಿರುದ್ಧ ಹಣ ವಿಚಾರವಾಗಿ ದೂರು ನೀಡಿ ಬಂದಿದ್ದಾನೆ. ಈ ಘಟನೆ ನಡೆದಿರುವುದು ಕೇರಳದ ಇಡುಕ್ಕಿ ಜಿಲ್ಲೆಯ ನೆಡುಂಕಂಡಂ ಎಂಬಲ್ಲಿ.

                                              ಏನಿದು ಘಟನೆ?
               9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗೆ ಮನೆಯಲ್ಲಿ ಅಜ್ಜಿ 'ಪಾಕೆಟ್ ಮನಿ' ಎಂದು 300 ರೂಪಾಯಿ ನೀಡಿದ್ದರು. ಬಾಲಕ ಈ ಹಣವನ್ನು ತನ್ನಿಷ್ಟದಂತೆ ಖರ್ಷು ಮಾಡಲು ಜೋಪಾನವಾಗಿ ಇಟ್ಟಿದ್ದ. ಅದೊಂದು ದಿನ ತಂದೆ ಮಗನ ಪಾಕೆಟ್ ಮನಿ ಹಣವನ್ನು ಕೇಳಿದ್ದರು. ತಂದೆಯೇ ಕೇಳಿದ್ದರಿಂದ ಮಗ ತಾನು ಸಂಗ್ರಹಿಸಿಟ್ಟುಕೊಂಡಿದ್ದ 300 ರೂಪಾಯಿಯನ್ನು ನೀಡಿದ್ದ. ಈ ವೇಳೆ ತಂದೆ ಮರಳಿ ಹಣವನ್ನು ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದರು.

           ದಿನ ಕಳೆಯುತ್ತಿದ್ದಂತೆ ತಂದೆ ನೀಡಿದ ಭರವಸೆ ಸುಳ್ಳಾಗಿದೆ. ಮಗ ಎಷ್ಟೇ ಕೇಳಿದರೂ ತಂದೆ ಮಾತ್ರ ಹಣ ಹಿಂತಿರುಗಿಸಲೇ ಇಲ್ಲ. ಇದರಿಂದ ಬೇಸತ್ತ ಮಗ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ, ತಂದೆಯ ವಿರುದ್ಧವೇ ದೂರು ನೀಡಿದ್ದಾನೆ.

                   ವಿದ್ಯಾರ್ಥಿ ನೀಡಿದ ದೂರಿನಿಂದ ಒಂದು ಕ್ಷಣ ಪೊಲೀಸರೇ ಗೊಂದಲಕ್ಕೊಳಗಾಗಿದ್ದಾರೆ. ಪೊಲೀಸರು ಸಮಾಧಾನದಿಂದ ವಿದ್ಯಾರ್ಥಿಯನ್ನು ಮಾತನಾಡಿಸಿ, ಘಟನೆಯ ಬಗ್ಗೆ ತಿಳಿದುಕೊಂಡಿದ್ದಾರೆ. ನಂತರ ವಿದ್ಯಾರ್ಥಿಯನ್ನು ಮನವೋಲಿಸಿದ ಪೊಲೀಸರು, ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿ ಮನೆಗೆ ಕಳುಹಿಸಿದ್ದಾರೆ.

                 ಈ ವೇಳೆ ಪೊಲೀಸರು ವಿದ್ಯಾರ್ಥಿಯಲ್ಲಿ ನಿನಗೆ ಹಣ ಯಾಕೆ ಬೇಕು ಎಂದು ಕೇಳಿದ್ದಾರೆ. ಈ ವೇಳೆ ವಿದ್ಯಾರ್ಥಿ ನನಗೆ ತಮಿಳು ನಟ ವಿಜಯ್ ಅಭಿನಯದ ಸಿನಿಮಾ ನೋಡಬೇಕಾಗಿದೆ. ಹೀಗಾಗಿ ಹಣದ ಅವಶ್ಯಕತೆ ಇದೆ ಎಂದು ಹೇಳಿಕೊಂಡಿದ್ದಾನೆ.

           ಘಟನೆಯ ಬಗ್ಗೆ ಠಾಣಾಧಿಕಾರಿ ಬಿ.ಎಸ್​.ಬಿನು ವಿದ್ಯಾರ್ಥಿಯ ಪೋಷಕರೊಮದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿದ್ದಾರೆ. ನಿನ್ನ ತಂದೆ ಒಳ್ಳೆಯವರು, ಅವರನ್ನು ಪೊಲೀಸ್ ಠಾಣೆಗೆ ಕರೆಸುವುದು ಬೇಡ. ನಿನ್ನ ಹಣವನ್ನು ಹಿಂತಿರುಗಿಸಲು ಸೂಚಿಸಿದ್ದೇನೆ ಎಂದು ಹೇಳಿ ಠಾಣಾಧಿಕಾರಿ ತಂದೆ ಮಗನ ಆರ್ಥಿಕ ವ್ಯವಹಾರದ ಭಿನ್ನಾಭಿಪ್ರಾಯವನ್ನು ಇತ್ಯರ್ಥಗೊಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries