ಕಾಸರಗೋಡು: ಹೋಟೆಲ್, ಬೇಕರಿ ಮತ್ತು ಆಹಾರವನ್ನು ತಯಾರಿಸುವ ಮತ್ತು ವಿತರಿಸುವ ಇತರ ಉತ್ಪಾದನಾ ಘಟಕಗಳಂತಹ ಸಂಸ್ಥೆಗಳಲ್ಲಿ ದುಡಿಯುವವರಿಗೆ ಆರೋಗ್ಯ ಕಾರ್ಡ್ ಕಡ್ಡಾಯಗೊಳಿಸುವ ಆದೇಶವನ್ನು ಮಾರ್ಚ್ 31 ರವರೆಗೆ ವಿಸ್ತರಿಸುವಂತೆ ವ್ಯಾಪಾರಿ ವ್ಯಸಾಯಿ ಏಕೋಪನಾ ಸಮಿತಿ ರಾಜ್ಯಾಧ್ಯಕ್ಷ ರಾಜು ಅಪ್ಸರಾ ಆಗ್ರಹಿಸಿದ್ದಾರೆ. ಖಾಸಗಿ ಪ್ರಯೋಗಾಲಯಗಳು ಹೆಲ್ತ್ ಕಾರ್ಡ್ ಪಡೆಯಲು ವಿಧಿಸುವ ದುಬಾರಿ ಶುಲ್ಕವನ್ನು ಕಡಿತಗೊಳಿಸಬೇಕು. ಸರ್ಕಾರ ಫೆ. 1ಕ್ಕೆ ಆರೋಗ್ಯ ಕಾರ್ಡು ಪಡೆಯಲು ದಿನಾಂಕ ನಿಗದಿಪಡಿಸಿದ್ದು, ಈ ದಿನದಂದು ಎಲ್ಲಾ ಕಾರ್ಮಿಕರಿಗೆ ಕಾರ್ಡ್ ಪಡೆಯಲು ಸಾಧ್ಯವಾಗದೆ, ಹೋಟೆಲ್ ಮತ್ತು ಬೇಕರಿ ವಲಯದ ಕಾರ್ಯಾಚರಣೆಗೆ ತಡೆಯಾಗುವ ಸಾಧ್ಯತೆಯಿದ್ದು, ಇದನ್ನು ತಪ್ಪಿಸಲು ಮತ್ತು ಆದೇಶ ದಿನಾಂಕವನ್ನು 2023 ರ ಮಾರ್ಚ್ 31 ರವರೆಗೆ ವಿಸ್ತರಿಸುವಂತೆ ಒತ್ತಾಯಿಸಿದರು. ಈ ಬಗ್ಗೆ ಮಾನ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಆರೋಗ್ಯ ಸಚಿವೆ ವೀಣಾ ಜಾರ್ಜ್ ಮತ್ತು ಸ್ಥಳೀಯಾಡಳಿತ ಖಾತೆ ಸಚಿವ ಎಂ.ಬಿ.ರಾಜೇಶ್ ಅವರಿಗೆ ಮನವಿ ಸಲ್ಲಿಸಿರುವುದಾಗಿಯೂ ರಾಜು ಅಪ್ಸರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೋಟೆಲ್ ಸಿಬ್ಬಂದಿಗೆ ಆರೋಗ್ಯ ಕಾರ್ಡು-ದಿನಾಂಕ ವಿಸ್ತರಿಸಿ ನೀಡುವಂತೆ ಆಗ್ರಹ
0
ಜನವರಿ 31, 2023
Tags