ಪೆರ್ಲ: ವಾರ್ಷಿಕೋತ್ಸವಗಳು ಶಾಲಾ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅನಾವರಣ ಮಾಡುವ ವೇದಿಕೆಯಾಗಿದೆ ಎಂದು ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ ಜೆ.ಎಸ್. ಅಭಿಪ್ರಾಯ ವ್ಯಕ್ತಪಡಿಸಿದರು.
ನಲ್ಕದ ವಾಗ್ದೇವಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರಾಥಮಿಕ ಶಿಕ್ಷಣಕ್ಕೆಂದು ಗ್ರಾಮ ಪಂಚಾಯತಿ ನೀಡುವ ಪ್ರೋತ್ಸಾಹವನ್ನು ಅವರು ತಿಳಿಸಿದರು. ವಾರ್ಡಿನ ಸದಸ್ಯೆ ಆಶಾಲತ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಪಂಚಾಯತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿಯ ಅಧ್ಯಕ್ಷೆ ಜಯಶ್ರೀ ಕುಲಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿದ್ಯಾಭ್ಯಾಸ ಕ್ಲಸ್ಟರಿನ ಸಂಯೋಜಕ ಸುರೇಶ, ವ್ಯವಸ್ಥಾಪಕ ಪ್ರತಿನಿಧಿ ಸತ್ಯನಾರಾಯಣ ವರ್ಮುಡಿ ಶುಭಾಶಂಶನೆಗೈದರು. ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹೇಶ ವರ್ಮುಡಿ, ಮಾತೃ ರಕ್ಷಕ ಮಂಡಳಿಯ ಸುಮಲತ ಕುದುಕ್ಕುಳಿ ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕ ಶ್ರೀಪತಿ.ಎನ್. ಸ್ವಾಗತಿಸಿ, ಮಮತಾ ವಂದಿಸಿದರು. ಉμÁದೇವಿ ಕಾರ್ಯಕ್ರಮ ನಿರೂಪಿಸಿದರು. ನಲ್ಕ, ಬಿರ್ಮೂಲೆ, ಅಡ್ಕಸ್ಥಳ ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿದವು. ನಳಿನಿ,ಮಶ್ ಹುದಾ, ಕಾವ್ಯ ಸಹಕರಿಸಿದರು. ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ತಿರುವಾದಿರ ನೃತ್ಯ, ಕಾವ್ಯ ವಾಚನ, ಸಂಗೀತ ರಸದೌತಣ, 'ಜಾಂಬವತಿ ಕಲ್ಯಾಣ ' ಪ್ರಸಂಗದ ಯಕ್ಷಗಾನ ಬಯಲಾಟ ಮೊದಲಾದ ಕಾರ್ಯಕ್ರಮಗಳು ಜನಮನ ರಂಜಿಸಿದವು.