ಪೆರ್ಲ : ರಾಜ್ಯ ಸರ್ಕಾರದ ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗೆ ಕಾಟುಕುಕ್ಕೆ ನಿವಾಸಿ ಯುವ ನ್ಯಾಯವಾದಿ ಚಂದ್ರಮೋಹನ್ ಆಯ್ಕೆಯಾಗಿದ್ದಾರೆ. ಕಾಸರಗೋಡಿನಲ್ಲಿ ಕಳೆದ 16 ವರ್ಷಗಳಿಂದ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಸಾಮಾಜಿಕ, ಸಾಂಸ್ಕøತಿಕ ರಂಗಗಳಲ್ಲಿ ಸಕ್ರಿಯರಾಗಿದ್ದರು.
ಕಾಟುಕುಕ್ಕೆಯ ಸುಂದರ ಮಣಿಯಾಣಿ- ಜಾನಕಿ ದಂಪತಿಗಳ ಪುತ್ರರಾದ ಚಂದ್ರಮೋಹನ್ ಪ್ರಾಥಮಿಕ ಶಿಕ್ಷಣವನ್ನು ಕಾಟುಕುಕ್ಕೆ ಬಾಲಪ್ರಭಾ ಎಯುಪಿ ಶಾಲೆಯಲ್ಲೂ, ಜಿಎಚ್ ಎಸ್ ಮುಳ್ಳೇರಿಯದಲ್ಲಿ ಪ್ರೌಢ ಶಿಕ್ಷಣ, ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸುಟು ಹಾಗೂ ಕಲ್ಲಿಕೋಟೆ ವಿವಿಯಲ್ಲಿ ಪದವಿ ಪಡೆದು ಕೆವಿಜಿ ಕಾನೂನು ಪದವಿ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದಿದ್ದರು. ಬಳಿಕ ಕಾಸರಗೋಡಿನ ಪ್ರಸಿದ್ಧ ವಕೀಲರಾದ ಕೆ.ಕುಮಾರನ್ ನಾಯರ್, ಎ.ಜಿ.ನಾಯರ್, ಮೊದಲಾದವರ ಬಳಿ ಕಾನೂನು ವೃತ್ತಿಪರ ಸೇವೆ ಕೈಗೊಂಡಿದ್ದು ಬಳಿಕ ಕಾಸರಗೋಡು ವಿದ್ಯಾನಗರದಲ್ಲಿ ಸ್ವಂತ ಕಚೇರಿ ಹೊಂದಿದರು. ಎಐಎಲ್ ಯು ಕಾಸರಗೋಡು ಘಟಕದ ಜತೆ ಕಾರ್ಯದರ್ಶಿಯಾಗಿ, ಕೇರಳ ತುಳು ಆಕಾಡೆಮಿ ಸದಸ್ಯರಾಗಿ, ರಂಗ ಸಂಗಮ ಕಾಟುಕುಕ್ಕೆಯ ಕಾರ್ಯದರ್ಶಿಯಾಗಿ, ಎಣ್ಮಕಜೆ ಪಬ್ಲಿಕ್ ವೆಲ್ಫೆರ್ ಕೋಆಪರೇಟಿವ್ ಬ್ಯಾಂಕಿನ ಸ್ಥಾಪಕ ಕಾರ್ಯದರ್ಶಿಯಾಗಿ, ಭಾಸ್ಕರ ಕುಂಬಳೆ ಲೈಬ್ರರಿಯ ಕಾರ್ಯದರ್ಶಿಯಾಗಿ, ಕಾಸರಗೋಡು ಲೈಬ್ರರಿ ಕೌನ್ಸಿಲ್ ನ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರು ಜನಾನುರಾಗಿಯಾಗಿದ್ದಾರೆ.
ಕೇರಳ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನ್ಯಾಯವಾದಿ ಚಂದ್ರಮೋಹನ್ ಕಾಟುಕುಕ್ಕೆ ಆಯ್ಕೆ
0
ಜನವರಿ 31, 2023
Tags