HEALTH TIPS

ನಿರುದ್ಯೋಗ ಹೆಚ್ಚಿರುವುದನ್ನು CMIE ತೋರಿಸಿದ ಬಳಿಕ ಖಾಸಗಿ ಸಂಸ್ಥೆಗಳ ಸಮೀಕ್ಷೆ ವಿರುದ್ಧ ಕೇಂದ್ರದ ಎಚ್ಚರಿಕೆ: ವರದಿ

                 ವದೆಹಲಿ : ಕೇಂದ್ರ ಕಾರ್ಮಿಕ ಸಚಿವಾಲಯವು ಖಾಸಗಿ ಸಂಸ್ಥೆಗಳಿಂದ ನಿರುದ್ಯೋಗ ಸಮೀಕ್ಷೆಗಳ ವಿರುದ್ಧ ಬುಧವಾರ ಎಚ್ಚರಿಕೆ ನೀಡಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (CMIE)ಯು ರವಿವಾರ ಬಿಡುಗಡೆಗೊಳಿಸಿದ್ದ ದತ್ತಾಂಶಗಳು ಭಾರತದಲ್ಲಿ ನಿರುದ್ಯೋಗ ದರವು ಡಿಸೆಂಬರ್ ನಲ್ಲಿ ಕಳೆದ 16 ತಿಂಗಳುಗಳಲ್ಲಿ ಗರಿಷ್ಠವಾದ ಶೇ.8.3ಕ್ಕೆ ಏರಿಕೆಯಾಗಿದೆ ಎನ್ನುವುದನ್ನು ತೋರಿಸಿತ್ತು.

                  ಇದರ ಬೆನ್ನಿಗೇ ಕಾರ್ಮಿಕ ಸಚಿವಾಲಯವು 'ನಿರುದ್ಯೋಗ ದರ ಕುರಿತು ಸುದ್ದಿಯ ನಿರಾಕರಣೆ' ಶೀರ್ಷಿಕೆಯಡಿ ಪತ್ರಿಕಾ ಹೇಳಿಕೆಯನ್ನು ಹೊರಡಿಸಿದೆ ಎಂದು scroll.in ವರದಿ ಮಾಡಿದೆ.

                 ಹಲವಾರು ಖಾಸಗಿ ಸಂಸ್ಥೆಗಳು ತಮ್ಮ ಕಾರ್ಯವಿಧಾನಗಳನ್ನು ಆಧರಿಸಿ ಇಂತಹ ಸಮೀಕ್ಷೆಗಳನ್ನು ನಡೆಸುತ್ತಿವೆ,ಇಂತಹ ಸಮೀಕ್ಷೆಗಳು ಸಾಮಾನ್ಯವಾಗಿ ವೈಜ್ಞಾನಿಕವಾಗಿರುವುದಿಲ್ಲ ಮತ್ತು ಅಂತರರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ ಮಾನದಂಡಗಳನ್ನು ಆಧರಿಸಿರುವುದಿಲ್ಲ ಎಂದು ಸರಕಾರವು ಹೇಳಿದೆ.

                    ಸಿಎಂಐಇ ದತ್ತಾಂಶಗಳಂತೆ ನವಂಬರ್ ನಲ್ಲಿ ದೇಶದಲ್ಲಿ ನಿರುದ್ಯೋಗ ದರವು ಶೇ.8ರಷ್ಟಿತ್ತು. ನಿರುದ್ಯೋಗ ಕುರಿತು ಅಧಿಕೃತ ಮಾಸಿಕ ಅಂಕಿಅಂಶಗಳ ಕೊರತೆಯಿಂದಾಗಿ ಆರ್ಥಿಕ ತಜ್ಞರು ಮತ್ತು ನೀತಿ ಸಂಶೋಧಕರು ಈ ದತ್ತಾಂಶಗಳನ್ನು ನೆಚ್ಚಿಕೊಳ್ಳುತ್ತಾರೆ.

                    ನರೇಂದ್ರ ಮೋದಿ ಸರಕಾರವು ಮಾರ್ಚ್ 2018ರ ಬಳಿಕ ಲೇಬರ್ ಬ್ಯೂರೋದಿಂದ ತ್ರೈಮಾಸಿಕ ಉದ್ಯಮಗಳ ಸಮೀಕ್ಷೆಗಳನ್ನು ಸ್ಥಗಿತಗೊಳಿಸಿತ್ತು. ವಾರ್ಷಿಕ ಉದ್ಯೋಗ-ನಿರುದ್ಯೋಗ ಸಮೀಕ್ಷೆಗಳನ್ನೂ 2017ರಲ್ಲಿ ರದ್ದುಗೊಳಿಸಲಾಗಿತ್ತು.

                    ಖಾಸಗಿ ಕಂಪನಿಯೊಂದು ನಡೆಸಿದ್ದ ಸಮೀಕ್ಷೆಯನ್ನು ಮಾಧ್ಯಮಗಳು ವರದಿ ಮಾಡಿವೆ ಎಂದು ಸಿಎಂಐಇಯ ನಿರುದ್ಯೋಗ ದರದ ಅಂದಾಜನ್ನು ನೇರವಾಗಿ ಪ್ರಸ್ತಾಪಿಸದೆ ಕೇಂದ್ರದ ಪತ್ರಿಕಾ ಟಿಪ್ಪಣಿಯು ಹೇಳಿದೆ.

                  ಈ ಕಂಪನಿಗಳು/ಸಂಸ್ಥೆಗಳು ಬಳಸುವ ಕಾರ್ಯವಿಧಾನಗಳು ತಮ್ಮದೇ ಆದ ಸ್ಯಾಂಪಲಿಂಗ್ ಪದ್ಧತಿ ಮತ್ತು ಉದ್ಯೋಗ/ನಿರುದ್ಯೋಗ ಕುರಿತು ಅಂಕಿಅಂಶ ಸಂಗ್ರಹಕ್ಕೆ ಬಳಸುವ ವ್ಯಾಖ್ಯೆಗಳಿಂದಾಗಿ ನಿರುದ್ಯೋಗವನ್ನು ಅತಿಯಾಗಿ ವರದಿ ಮಾಡುವ ಅಥವಾ ಉದ್ಯೋಗವನ್ನು ಕಡಿಮೆಯಾಗಿ ವರದಿ ಮಾಡುವ ಪಕ್ಷಪಾತ ಪ್ರವೃತ್ತಿಯನ್ನು ಹೊಂದಿವೆ. ಇಂತಹ ಸಮೀಕ್ಷೆಗಳ ಫಲಿತಾಂಶಗಳನ್ನು ಎಚ್ಚರಿಕೆಯಿಂದ ಬಳಸಬೇಕು ಎಂದು ಕಾರ್ಮಿಕ ಸಚಿವಾಲಯವು ಹೇಳಿದೆ.

                 ಸಿಎಂಐಇ ಭಾರತದಲ್ಲಿ ನಿರುದ್ಯೋಗ ದರವನ್ನು 1.78 ಲ.ಕ್ಕೂ ಅಧಿಕ ಕುಟುಂಬಗಳ ಸ್ಯಾಂಪಲ್ ಗಾತ್ರವನ್ನು ಆಧರಿಸಿ ಲೆಕ್ಕ ಹಾಕುತ್ತದೆ. ನವಂಬರ್ನಲ್ಲಿ ಶೇ.8.96 ರಷ್ಟಿದ್ದ ನಗರ ಪ್ರದೇಶಗಳಲ್ಲಿ ನಿರುದ್ಯೋಗ ದರವು ಡಿಸೆಂಬರ್ನಲ್ಲಿ ಶೇ.10.09ಕ್ಕೆ ಏರಿದೆ ಎಂದು ಅದು ತನ್ನ ಇತ್ತೀಚಿನ ದತ್ತಾಂಶಗಳಲ್ಲಿ ಬೆಟ್ಟು ಮಾಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ದರವು ನವಂಬರ್ನಲ್ಲಿದ್ದ ಶೇ.7.55ರಿಂದ ಡಿಸೆಂಬರ್ನಲ್ಲಿ ಶೇ.7.44ಕ್ಕೆ ತಗ್ಗಿದೆ.

                 ಈ ನಡುವೆ ಕಾರ್ಮಿಕ ಸಚಿವಾಲಯವು,ತ್ರೈಮಾಸಿಕ ನಿಯತಕಾಲಿಕ ಕಾರ್ಮಿಕ ಬಲ ಸಮೀಕ್ಷೆ (ಪಿಎಲ್‌ಎಫ್‌ಎಸ್)ಯ ಆಧಾರದಲ್ಲಿ ಅಂಕಿಅಂಶ ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯವು ಉದ್ಯೋಗ ಮತ್ತು ನಿರುದ್ಯೋಗ ಕುರಿತು ಅಧಿಕೃತ ದತ್ತಾಂಶಗಳನ್ನು ಬಿಡುಗಡೆಗೊಳಿಸುತ್ತದೆ. ಲಭ್ಯವಿರುವ ಪಿಎಲ್‌ಎಫ್‌ಎಸ್ ವರದಿಯಂತೆ ಕಾರ್ಮಿಕ ಜನಸಂಖ್ಯೆ ಅನುಪಾತ (15 ವರ್ಷ ಪ್ರಾಯದ ಮತ್ತು ಮೇಲ್ಪಟ್ಟವರಿಗೆ ಉದ್ಯೋಗ)ವು 2022 ಜುಲೈ-ಸೆಪ್ಟಂಬರ್ ತ್ರೈಮಾಸಿಕದಲ್ಲಿ ಶೇ.44.5ರಷ್ಟಿತ್ತು. 2019ರ ಇದೇ ಅವಧಿಯಲ್ಲಿ ಅದು ಶೇ.43.4ರಷ್ಟಿತ್ತು. 2019ರ ಜುಲೈ-ಸೆಪ್ಟಂಬರ್ ತ್ರೈಮಾಸಿಕದಲ್ಲಿದ್ದ ಶೇ.8.3ಕ್ಕೆ ಹೋಲಿಸಿದರೆ 2022ರ ಇದೇ ಅವಧಿಯಲ್ಲಿ ಶೇ.7.2ರಷ್ಟಿತ್ತು ಎಂದು ತಿಳಿಸಿದೆ.

              ಈ ದತ್ತಾಂಶಗಳನ್ನು ಉಲ್ಲೇಖಿಸಿ ಸಚಿವಾಲಯವು,ಉದ್ಯೋಗ ಮಾರುಕಟ್ಟೆಯು ಕೋವಿಡ್ ಬಿಕ್ಕಟ್ಟಿನ ಆಘಾತದಿಂದ ಚೇತರಿಸಿಕೊಂಡಿರುವುದು ಮಾತ್ರವಲ್ಲ,ಅದು ಸಾಂಕ್ರಾಮಿಕದ ಪೂರ್ವದ ಅವಧಿಗಿಂತ ಹೆಚ್ಚಿನ ಮಟ್ಟದಲ್ಲಿದೆ ಎಂದು ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries