HEALTH TIPS

ಬಹುತೇಕ ರಾಜಕೀಯ ಪಕ್ಷಗಳ ವಿರೋಧ: RVM ಪ್ರಾತ್ಯಕ್ಷಿಕೆ ಮುಂದೂಡಿದ ಚುನಾವಣಾ ಆಯೋಗ

             ನವದೆಹಲಿ  :ದೂರ ಪ್ರದೇಶದಿಂದಲೇ ಇದ್ದುಕೊಂಡು,ತಮ್ಮ ಸ್ವಕ್ಷೇತ್ರದಲ್ಲಿ ಹೇಗೆ ಮತಚಲಾಯಿಸಬಹುದೆಂಬುದರ ಕುರಿತು ನಡೆಸಲುದ್ದೇಶಿಸಿದ್ದ ಪ್ರಾತ್ಯಕ್ಷಿಕೆಯನ್ನು ಚುನಾವಣಾ ಆಯೋಗವು ಸೋಮವಾರ ಮುಂದೂಡಿದೆ. ಚುನಾವಣೆಗಳಲ್ಲಿ ರಿಮೋಟ್ವೋಟಿಂಗ್ ಮೆಶಿನ್ (RVM) ಬಳಕೆಯ ಪ್ರಸ್ತಾಪದ ಬಗ್ಗೆ ಬಹುತೇಕ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರಾತ್ಯಕ್ಷಿತೆಯನ್ನು ಮುಂದೂಡಲಾಗಿದೆಯೆಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

          ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಚುನಾವಣಾ ಆಯೋಗವು ದೂರಗಾಮಿ ಮತಯಂತ್ರ (RVM)ದ ಮೂಲ ಮಾದರಿಯ ಪ್ರಾತ್ಯಕ್ಷಿತೆಯನ್ನು ಎಂಟು ರಾಜಕೀಯ ಪಕ್ಷಗಳಿಗೆ ಪ್ರದರ್ಶಿಸಲು ಸಿದ್ಧತೆ ನಡೆಸಿತ್ತು. ಆದರೆ ವಿವಿಧ ರಾಜಕೀಯ ಪಕ್ಷಗಳು ಈ ವಿಷಯವಾಗಿ ಇನ್ನಷ್ಟು ವಿಸ್ತೃತವಾದ ಚರ್ಚೆಯನ್ನು ನಡೆಸಲು ಕೋರಿದ್ದರಿಂದ ಪ್ರಾತ್ಯಕ್ಷಿಕೆಯನ್ನು ನಡೆಸಲಾಗಲಿಲ್ಲವೆಂದು ಎಂದು ಗುರುತುಬಹಿರಂಗಪಡಿಸಲು ಇಚ್ಚಿಸದ ಅಧಿಕಾರಿಗಳು ತಿಳಿಸಿದ್ದಾರೆ.

            ತಮ್ಮ ತವರು ಕ್ಷೇತ್ರಗಳಿಗೆ ಪ್ರಯಾಣಿಸದೆ ಚುನಾವಣೆಗಳಲ್ಲಿ ಮತಚಲಾಯಿಸಲು ದೇಶೀಯ ವಲಸಿಗರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ RVM ಯಂತ್ರವನ್ನು ರೂಪಿಸಲಾಗಿದೆಯೆಂದು ಚುನಾವಣಾ ಆಯೋಗವು ತಿಳಿಸಿದೆ.

             ಈ ಪ್ರಸ್ತಾವನೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಜನವರಿ 31ರೊಳಗೆ ಸಲ್ಲಿಸುವಂತೆ ಚುನಾವಣಾ ಆಯೋಗವು ಈ ಹಿಂದೆ ರಾಜಕೀಯ ಪಕ್ಷಗಳಿಗೆ ಸೂಚಿಸಿತ್ತು. ಸೋಮವಾರದಂದು ಅದು ಈ ದಿನಾಂಕವನ್ನು ಫೆಬ್ರವರಿ 28ರವರೆಗೆ ಮುಂದೂಡಿತ್ತು.

               ಚುನಾವಣಾ ಆಯೋಗದ ಸಭೆಗೆ ಪೂರ್ವಭಾವಿಯಾಗಿ ಕಾಂಗ್ರೆಸ್ ಪಕ್ಷವು ಮತತಯಂತ್ರಗಳ ಕುರಿತ ಆತಂಕಗಳ ಬಗ್ಗೆಚರ್ಚಿಸಲು ಪ್ರತಿಪಕ್ಷಗಳ ಸಭೆಯನ್ನು ಕರೆದಿತ್ತು. ಆದರೆ ಸಭೆಯಲ್ಲಿ ಬಹುತೇಕ ಮಂದಿ ಚುನಾವಣಾ ಆಯೋಗದ ಪ್ರಸ್ತಾವನೆಯ ಪರವಾಗಿರಲಿಲ್ಲವೆಂದು ಕಾಂಗ್ರೆಸ್ ಪಕ್ಷದ ನಾಯಕ ದಿಗ್ವಿಜಯ್ ಸಿಂಗ್ ತಿಳಿಸಿದ್ದಾರೆ.

          ಸೋಮವಾರ ನಡೆದ ಚುನಾವಣಾ ಆಯೋಗದ ಸಭೆಯಲ್ಲಿ ಪಾಲ್ಗೊಂಡ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಮತದಾನದ ಪ್ರಮಾಣವನ್ನು ಹೆಚ್ಚಿಸುವ ವಿಸ್ತೃತವಾದ ಉದ್ದೇಶದೊಂದಿಗೆ ಕೆಲಸ ಮಾಡಲು ರಾಜಕೀಯ ಪಕ್ಷಗಳು ಸಮ್ಮತಿ ವ್ಯಕ್ತಪಡಿಸಿದ್ದವು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

              ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲವು ರಾಜಕೀಯ ಪಕ್ಷಗಳು ಮತಯಂತ್ರಗಳ ಪ್ರದರ್ಶನವನ್ನು ರಾಜ್ಯಗಳಲ್ಲಿ ನಡೆಸುವಂತೆ ಆಗ್ರಹಿಸಿದರೆ, ಇನ್ನು ಕೆಲವು ಪಕ್ಷಗಳು ದೇಶೀಯ ವಲಸಿಗರ ಪರಿಕಲ್ಪನೆಯನ್ನು ವ್ಯಾಖ್ಯಾನಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries