ಕಾಸರಗೋಡು: ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೊಸಿಯೇಶನ್ ಆಫ್ ಕೇರಳ(ಸವಾಕ್) ಜಿಲ್ಲಾ ಕಲೋತ್ಸವ ಹಾಗೂ ಕುಟುಂಬ ಸಂಗಮ ಇಂದು(ಜ.29) ಬೇಕಲ ಸಮೀಪದ ಪಳ್ಳಿಕ್ಕೆರೆ ರೆಡ್ ಮೂನ್ ಅಡಿಟೊರಿಯಂನಲ್ಲಿ ಬೆಳಿಗ್ಗೆ 10 ರಿಂದ ನಡೆಯಲಿದೆ.
ಸಮಾರಂಭವನ್ನು ಉದುಮ ಶಾಸಕ ನ್ಯಾಯವಾದಿ .ಸಿ.ಎಚ್.ಕುಂಞಂಬು ಉದ್ಘಾಟಿಸುವರು. ಉದುಮ ಗ್ರಾ.ಪಂ.ಅಧ್ಯಕ್ಷ ಎಂ.ಕುಮಾರನ್, ಕೇರಳ ಪೋಕ್ ಲಾರ್ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯ, ಮಾಜಿ ಸದಸ್ಯ ಕೆ.ವಿ.ಕುಂಞÂರಾಮನ್, ಸವಾಕ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುದರ್ಶನ ವರ್ಣ, ರಾಜ್ಯ ಕೋಶಾಧಿಕಾರಿ ಎಂ.ಉಮೇಶ ಸಾಲ್ಯಾನ್, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಈ ಸಂದರ್ಭ ಗಾಯಕ ಮಾಧವ ಕಾಸರಗೋಡು, ತಿಡಂಬು ನೃತ್ಯ ಕಲಾವಿದ ಉಪೇಂದ್ರ ಅಗ್ಗಿತ್ತಾಯ, ಯಕ್ಷಗಾನ ಕಲಾವಿದ ಮಹಾಬಲ ಭಟ್ ಕೊಮ್ಮೆ, ಕಲಾ ಸಂಘಟಕ ಬಾಲಕೃಷ್ಣ ಪೊಸಳಿಗೆ, ತೆಯ್ಯಂ ಕಲಾವಿದ ರಾಜನ್ ಪಣಿಕ್ಕರ್ ಇವರಿಗೆ ಸವಾಕ್ ಕಲಾರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಸವಾಕ್ ಸದಸ್ಯರಿಂದ ವಿವಿಧ ಕಲಾಪ್ರದರ್ಶನ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಸನ್ನಿ ಅಗಸ್ಟಿನ್ ತಿಳಿಸಿದ್ದಾರೆ.
ಇಂದು ಸವಾಕ್ ಜಿಲ್ಲಾ ಕಲೋತ್ಸವ-ಕುಟುಂಬ ಸಂಗಮ; sಕಲಾರತ್ನ ಪ್ರಶಸ್ತಿ ಪ್ರದಾನÀ
0
ಜನವರಿ 28, 2023