ನವದೆಹಲಿ: ಡಬ್ಲ್ಯುಎಫ್ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ವಿರುದ್ಧದ ಕುಸ್ತಿ ಪಟುಗಳ ಪ್ರತಿಭಟನೆಯನ್ನು ಕೇಂದ್ರ ಸಚಿವ ವಿಕೆ ಸಿಂಗ್, ಪ್ರತಿಭಟನೆಯಲ್ಲಿ ಬೇರೆ ಅಂಶಗಳು ಕಡಿಮೆ ಇದ್ದು ರಾಜಕೀಯ ಅಂಶವೇ ಹೆಚ್ಚಿದೆ ಎಂದು ಹೇಳಿದ್ದಾರೆ.
ಒಲಂಪಿಕ್ ಹಾಗೂ ಕಾಮನ್ ವೆಲ್ತ್ ಗೇಮ್ಸ್ (ಸಿಡಬ್ಲ್ಯುಜಿ) ಪದಕ ವಿಜೇತರೂ ಸೇರಿದಂತೆ ಕುಸ್ತಿ ಪಟುಗಳ ಪ್ರತಿಭಟನೆ ದೆಹಲಿಯಲ್ಲಿ ನಡೆಯುತ್ತಿದೆ.
ಮಹಿಳಾ ಕುಸ್ತಿಪಟುಗಳು ಡಬ್ಲ್ಯುಎಫ್ಅಐ ಅಧ್ಯಕ್ಷರು ಹಾಗೂ ತರಬೇತುದಾರರ ವಿರುದ್ಧ ಲೈಂಗಿಕ
ಕಿರುಕುಳ ಆರೋಪ ಹೊರಿಸಿದ್ದು, ಲೈಂಗಿಕ ಕಿರುಕುಳವನ್ನು ವಿರೋಧಿಸಿ ಹಾಗೂ ಫೆಡರೇಷನ್ ನ
ಅಸಮರ್ಪಕ ಕಾರ್ಯನಿರ್ವಹಣೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು.
"ಈ ವಿಷಯದ ಬಗ್ಗೆ ನಾನು ಮಾತನಾಡಲು ಇಚ್ಛಿಸುವುದಿಲ್ಲ. ನನ್ನ ವೈಯಕ್ತಿಕ ಅಭಿಪ್ರಾಯ ಏನೆಂದರೆ ಈ ಪ್ರತಿಭಟನೆಯಲ್ಲಿ ಕಡಿಮೆ ತಿಳಿದಿರುವ ಬೇರೆ ಆಯಾಮಗಳಿಗಿಂತಲೂ ರಾಜಕೀಯ ಹೆಚ್ಚು ಕಾಣಿಸುತ್ತಿದೆ ಎಂದು ಎಂಒಎಕ್ಸ್ ಜನರಲ್ (ನಿವೃತ್ತ) ವಿಕೆ ಸಿಂಗ್ ಹೇಳಿದ್ದಾರೆ.
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಸಮಿತಿಯಿಂದ ತನಿಖೆ ಪೂರ್ಣಗೊಳ್ಳುವವರೆಗೂ ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ಹೇಳಿದ ಬೆನ್ನಲ್ಲೇ ಕುಸ್ತಿ ಪಟುಗಳು ಪ್ರತಿಭಟನೆಯನ್ನು ಶನಿವಾರ ಬೆಳಿಗ್ಗೆ ವಾಪಸ್ ಪಡೆದಿದ್ದಾರೆ. ಡಬ್ಲ್ಯುಎಫ್ಐ ಅಧ್ಯಕ್ಷರ ವಿರುದ್ಧ ಕೇಳಿಬಂದಿರುವ ಆರೋಪದ ತನಿಖೆಗೆ ಮೇಲ್ವಿಚಾರಣಾ ಸಮಿತಿಯ ರಚನೆಯನ್ನು ಠಾಕೂರ್ ಘೋಷಿಸಿದ್ದು, ನಾಲ್ಕು ವಾರಗಳಲ್ಲಿ ನ್ಯಾಯ ಸಿಗಲಿದೆ ಎಂಬ ಭರವಸೆ ನೀಡಿದ್ದಾರೆ.