ನಾಗಪುರ: ನಾಗಪುರದಲ್ಲಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಂದ್ರ ಕಚೇರಿಗೆ ಭೇಟಿ ನೀಡಿದ ಕುಸ್ತಿ ಅಖಾಡದಲ್ಲಿ 'ದ ಗ್ರೇಟ್ ಖಲಿ' ಎಂದೇ ಖ್ಯಾತರಾಗಿರುವ ವೃತ್ತಿಪರ ಕುಸ್ತಿಪಟು ಹಾಗೂ ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (WWE) ಸ್ಟಾರ್ ದಿಲೀಪ್ ಸಿಂಗ್, ರೇಷಿಂಬಾಗ್‌ನಲ್ಲಿರುವ ಡಾ.
ಹೆಡ್ಗೆವಾರ್ ಸ್ಮೃತಿ ಮಂದಿರಕ್ಕೆ ತೆರಳಿ ಗೌರವ ಸಲ್ಲಿಸಿದ್ದಾರೆ ಎಂದು deccanherald.com ವರದಿ ಮಾಡಿದೆ.
ಆರೆಸ್ಸೆಸ್ ನ ಪ್ರಚಾರ ವಿಭಾಗವಾದ ವಿಶ್ವ ಸಂವಾದ ಕೇಂದ್ರವು ಈ ಮಾಹಿತಿಯನ್ನು ತನ್ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದು, "ಕುಸ್ತಿ ಪಟುವು ಆರೆಸ್ಸೆಸ್ ಮುಖ್ಯಸ್ಥರಾಗಿದ್ದ ಡಾ. ಕೇಶವ್ ಬಲಿರಾಂ ಹೆಡ್ಗೆವಾರ್ ಹಾಗೂ ಎಂ.ಎಸ್. ಗೋಳ್ವಾಲ್ಕರ್ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು" ಎಂದು ತಿಳಿಸಿದೆ.