HEALTH TIPS

ಭೂಕಂಪನ ಪೀಡಿತ ಸಿರಿಯಾ-ಟರ್ಕಿಯಲ್ಲಿ 10 ಭಾರತೀಯರು ಸಿಲುಕಿದ್ದು ಸುರಕ್ಷಿತ, ಓರ್ವ ನಾಪತ್ತೆ: 11 ಸಾವಿರಕ್ಕೇರಿದ ಸಾವಿನ ಸಂಖ್ಯೆ

 

           ನವದೆಹಲಿ: ಭೂಕಂಪನ ಪೀಡಿತ ಸಿರಿಯಾ-ಟರ್ಕಿಯಲ್ಲಿ 10 ಭಾರತೀಯರು ಸಿಲುಕಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ ಮತ್ತು ಮತ್ತೋರ್ವ ಭಾರತೀಯ ನಾಪತ್ತೆಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ಮಾಹಿತಿ ನೀಡಿದೆ.

               ಟರ್ಕಿ ಮತ್ತು ಸಿರಿಯಾದಲ್ಲಿ ಇದೇ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪನದಿಂದ ಈ ವರೆಗೂ 11 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದು, ಮೃತರ ಸಂಖ್ಯೆ 12 ಸಾವಿರ ಗಡಿ ದಾಟುವ ಆತಂಕ ಎದುರಾಗಿದೆ. ಟರ್ಕಿ ಮತ್ತು ಸಿರಿಯಾ ಉಭಯ ದೇಶಗಳಲ್ಲಿ ಸಾವು–ನೋವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಏಕನ್ಮಧ್ಯೆ ಭಾರತ ಸರ್ಕಾರ ಕೂಡ ಭೂಕಂಪನ ಪೀಡಿತ ಸಿರಿಯಾ-ಟರ್ಕಿ ದೇಶಗಳಿಗೆ ಆಪರೇಷನ್ ದೋಸ್ತ್ ಕಾರ್ಯಾಚರಣೆಯಡಿಯಲ್ಲಿ ಸರ್ವಾಂಗೀಣ ನೆರವು ನೀಡುತ್ತಿದೆ.

                  ಈಗಾಗಲೇ ಭಾರತೀಯ ಸೇನೆ ವಿಮಾನಗಳು ಫೀಲ್ಡ್ ಆಸ್ಪತ್ರೆ, ಔಷಧಗಳು, ರಕ್ಷಣಾ ತಂಡಗಳು ಸೇರಿದಂತೆ  ಹಲವು ರಕ್ಷಣಾ ಮತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತು ಟರ್ಕಿ-ಸಿರಿಯಾಗೆ ಹಾರುತ್ತಿವೆ. ಇದರ ನಡುವೆ ಹಾಲಿ ಪರಿಸ್ಥಿತಿ ಕುರಿತು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದ್ದು, ಸಿರಿಯಾ-ಟರ್ಕಿಯಲ್ಲಿ 10 ಭಾರತೀಯರು ಸಿಲುಕಿದ್ದು, ಮತ್ತೋರ್ವ ಭಾರತೀಯ ನಾಪತ್ತೆಯಾಗಿದ್ದಾರೆ ಎಂದು ಹೇಳಿದೆ.

                  ಈ ಬಗ್ಗೆ ಮಾತನಾಡಿರುವ ಎಂಇಎ ಕಾರ್ಯದರ್ಶಿ (ಪಶ್ಚಿಮ) ಸಂಜಯ್ ವರ್ಮಾ ಅವರು, '10 ಭಾರತೀಯರು ಸಿಲುಕಿದ್ದು, ಮತ್ತೋರ್ವ ಭಾರತೀಯ ನಾಪತ್ತೆಯಾಗಿದ್ದಾರೆ. ಟರ್ಕಿಯೆಯಲ್ಲಿರುವ ಭಾರತೀಯರು ತುಲನಾತ್ಮಕವಾಗಿ ಸುರಕ್ಷಿತರಾಗಿದ್ದಾರೆ. ಟರ್ಕಿಯಲ್ಲಿ ನಾಪತ್ತೆಯಾಗಿರುವ ಭಾರತೀಯನ ಕುಟುಂಬದ ಸದಸ್ಯರೊಂದಿಗೆ ಸರ್ಕಾರ ಸಂಪರ್ಕದಲ್ಲಿದೆ. ಭಾರತವು ಈಗಾಗಲೇ ನಾಲ್ಕು ಮಿಲಿಟರಿ ಸಾರಿಗೆ ವಿಮಾನಗಳಲ್ಲಿ ತುರ್ಕಿಯೆಗೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ ಎಂದು ಹೇಳಿದ್ದಾರೆ.

                                    11 ಸಾವಿರಕ್ಕೇರಿದ ಸಾವಿನ ಸಂಖ್ಯೆ
                  7.3 ತೀವ್ರತೆಯ ಭೂಕಂಪದಿಂದಾಗಿ ಟರ್ಕಿ ಮತ್ತು ಸಿರಿಯಾದಲ್ಲಿ ಸತ್ತವರ ಸಂಖ್ಯೆ 11,000 ದಾಟಿದೆ. ಅಂತೆಯೇ ಸರಣಿ ಭೂಕಂಪನದಿಂದಾದಿ ಟರ್ಕಿ ಮತ್ತು ಸಿರಿಯಾದಲ್ಲಿ ಸುಮಾರು 6 ಸಾವಿರಕ್ಕೂ ಅಧಿಕ ಕಟ್ಟಡಗಳು ಧರೆಗುರುಳಿದ್ದು, ಅವಶೇಷಗಳಡಿಯಲ್ಲಿ ಸಿಲುಕಿರುವವರ ಹೊರತಗೆಯಲು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries