ಅಗರ್ತಲಾ: ಹತ್ತು ರೋಹಿಂಗ್ಯಾ ನಿರಾಶ್ರಿತರು, ಇಬ್ಬರು ಬಾಂಗ್ಲಾದೇಶೀಯರು ಮತ್ತು ಓರ್ವ 'ಭಾರತೀಯ ಹ್ಯಾಂಡ್ಲರ್' ನನ್ನು ಅಗರ್ತಲಾ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ವಿಚಾರಣೆಯ ನಂತರ ರೋಹಿಂಗ್ಯಾಗಳು ಬಾಂಗ್ಲಾದೇಶದ ಕಾಕ್ಸ್ ಬಜಾರ್ ಶಿಬಿರದಿಂದ ಓಡಿಬಂದಿದ್ದು, ಭಾರತವನ್ನು ಅಕ್ರಮವಾಗಿ ಪ್ರವೇಶಿಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿ ಹೇಳಿದ್ದಾರೆ.
ಈ ಎಲ್ಲಾ 13 ಮಂದಿ ಕೋಲ್ಕತ್ತಾಗೆ ಹೋಗಲು ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲಿಗಾಗಿ ಕಾಯುತ್ತಿದ್ದರು ಎಂದು ಜಿಆರ್‌ಪಿ ಪೊಲೀಸ್ ವರಿಷ್ಠಾಧಿಕಾರಿ ಅಮಿತಾಭ್ ಪಾಲ್ ಅವರು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ಅಗರ್ತಲಾ ರೈಲು ನಿಲ್ದಾಣದಲ್ಲಿ ಬಂಧಿತರಾದ ರೋಹಿಂಗ್ಯಾಗಳ ಒಟ್ಟು ಸಂಖ್ಯೆ ಈಗ 33ಕ್ಕೆ ಏರಿಕೆಯಾಗಿದೆ. ಅವರಲ್ಲಿ ಮೂವರು ಮಕ್ಕಳು ಸೇರಿದ್ದಾರೆ ಎಂದು ಪಾಲ್ ಹೇಳಿದ್ದಾರೆ.
"ನಿರ್ದಿಷ್ಟ ಮಾಹಿತಿ ಮೇರೆಗೆ, ಆರ್‌ಪಿಎಫ್ ಮತ್ತು ಜಿಆರ್‌ಪಿ ಸಿಬ್ಬಂದಿ ಶನಿವಾರ 10 ರೋಹಿಂಗ್ಯಾಗಳು, ಇಬ್ಬರು ಬಾಂಗ್ಲಾದೇಶಿಗಳು ಹಾಗೂ ಓರ್ವ ಭಾರತೀಯ ಹ್ಯಾಂಡ್ಲರ್ ನನ್ನು ಬಂಧಿಸಿದ್ದಾರೆ ಎಂದು ಪಾಲ್ ತಿಳಿಸಿದ್ದಾರೆ.