ನವದೆಹಲಿ: ದೇಶದ ಆರು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 10 ಸೂಕ್ಷ್ಮ ಸ್ಥಳಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಹೇಳಿದೆಯಲ್ಲದೆ ಈ ಸ್ಥಳಗಳಲ್ಲಿನ ಚಟುವಟಿಕೆಗಳ ಯಾವುದೇ ಮಾಹಿತಿಯು ದೇಶದ ವೈರಿಗಳಿಗೆ ಸಹಕಾರಿಯಾಗಬಹುದು ಎಂದು ಹೇಳಿದೆ.
ಅಧಿಕೃತ ಗೌಪ್ಯತೆ ಕಾಯಿದೆಯನ್ವಯ ಕೇಂದ್ರ ಗೃಹ ಸಚಿವಾಲಯವು ಈ ಅಧಿಸೂಚನೆ ಹೊರಡಿಸಿ ತೆಲಂಗಾಣ, ರಾಜಸ್ಥಾನ, ಛತ್ತೀಸಗಢ, ಮಧ್ಯ ಪ್ರದೇಶ, ಬಿಹಾರ, ಕೇರಳ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿರುವ 10 ಸ್ಥಳಗಳಿಗೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ.
ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಬಿಹಾರದಲ್ಲಿ ಇಂತಹ ಎರಡು ಸ್ಥಳಗಳಿದ್ದರೆ ತೆಲಂಗಾಣ, ಛತ್ತೀಸಗಢ, ಕೇರಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಒಂದು ಸ್ಥಳವಿದೆ.