ನವದೆಹಲಿ: ಸರ್ಕಾರವು ಆಯೋಜಿಸುತ್ತಿರುವ 12 ವೆಬ್‌ನಾರ್‌ಗಳ ಸರಣಿಯ ಐದನೆ ಆವೃತ್ತಿ 'ತಂತ್ರಜ್ಞಾನವನ್ನು ಬಳಸಿಕೊಂಡು ಬದುಕಲು ಸುಲಭ ವಿಧಾನ' ವಿಷಯದ ಕುರಿತು ಬಜೆಟ್ ನಂತರದ ವೆಬ್‌ನಾರ್ ನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮಂಗಳವಾರ ಮಾತನಾಡಿದರು.
21ನೇ ಶತಮಾನದ ಭಾರತವು ತಂತ್ರಜ್ಞಾನದ ಬಳಕೆಯಿಂದ ತನ್ನ ನಾಗರಿಕರನ್ನು ನಿರಂತರವಾಗಿ ಸಬಲೀಕರಣಗೊಳಿಸುತ್ತಿದೆ. ತಂತ್ರಜ್ಞಾನದ ಸಹಾಯದಿಂದ ಜನರು ಸುಲಭವಾಗಿ ಬದುಕಬಹುದು ಎಂಬುದನ್ನು ಕಳೆದ ಕೆಲವು ವರ್ಷಗಳಲ್ಲಿ ಬಜೆಟ್ ನಲ್ಲಿ ತೋರಿಸಲಾಗಿದೆ.
ಕೇಂದ್ರ ಬಜೆಟ್ 2023 ರಲ್ಲಿ ಘೋಷಿಸಲಾದ ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಉಪಾಯಗಳು, ಸಲಹೆ ಪರಿಹಾರಗಳನ್ನು ಹುಡುಕುವುದು ವೆಬಿನಾರ್ ನಡೆಸುವ ಹಿಂದಿನ ಉದ್ದೇಶವಾಗಿದೆ ಎಂದರು.
ಒನ್ ನೇಷನ್ ಒನ್ ರೇಷನ್ ಕಾರ್ಡ್ ಮತ್ತು JAM (ಜನ್ ಧನ್-ಆಧಾರ್-ಮೊಬೈಲ್) ಟ್ರಿನಿಟಿ, ಆರೋಗ್ಯ ಸೇತು ಮತ್ತು ಕೋವಿನ್ ಆಪ್, ರೈಲ್ವೇ ಮೀಸಲಾತಿ ಮತ್ತು ಸಾಮಾನ್ಯ ಸೇವಾ ಕೇಂದ್ರಗಳ ಉದಾಹರಣೆಗಳನ್ನು ನೀಡುವ ಮೂಲಕ ಪ್ರಧಾನಿ ಮೋದಿ ಇದರಲ್ಲಿ ತಂತ್ರಜ್ಞಾನದ ಪಾತ್ರವನ್ನು ವಿವರಿಸಿದರು. ಈ ನಿರ್ಧಾರಗಳಿಂದ ಸರ್ಕಾರವು ನಾಗರಿಕರ ಜೀವನ ಸೌಕರ್ಯವನ್ನು ಹೆಚ್ಚಿಸಿದೆ ಎಂದು ಪ್ರಧಾನಿ ಹೇಳಿದರು.
ಪಿಎಂ ಮೋದಿ ಅವರು ಆದಾಯ ತೆರಿಗೆ ವ್ಯವಸ್ಥೆಗೆ ಸಂಬಂಧಿಸಿದ ಕುಂದುಕೊರತೆಗಳ ಮುಖರಹಿತ ಪರಿಹಾರದ ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ.
5ಜಿ ಮತ್ತು ಕೃತಕ ಬುದ್ಧಿಮತ್ತೆ ಮತ್ತು ಕೈಗಾರಿಕೆ, ಔಷಧ, ಶಿಕ್ಷಣ ಮತ್ತು ಕೃಷಿಯ ಮೇಲೆ ಅವುಗಳ ಪ್ರಭಾವವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು ಕೆಲವು ಗುರಿಗಳನ್ನು ನಿಗದಿಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು. ಸಾಮಾನ್ಯ ನಾಗರಿಕರ ಕಲ್ಯಾಣಕ್ಕಾಗಿ ಈ ತಂತ್ರಜ್ಞಾನಗಳನ್ನು ನಿಯೋಜಿಸಬಹುದಾದ ಮಧ್ಯಸ್ಥಗಾರರಿಗೆ ಮಾರ್ಗಗಳನ್ನು ಅವರು ಸೂಚಿಸಿದರು.
ಎಐ ಮೂಲಕ ಬಗೆಹರಿಸಬಹುದಾದ ಇಂತಹ 10 ಸಮಸ್ಯೆಗಳನ್ನು ಗುರುತಿಸಬಹುದೇ ಎಂದು ಪ್ರಧಾನಿ ವೆಬಿನಾರ್ ಸಂವಾದದಲ್ಲಿ ಭಾಗಿಯಾದವರನ್ನು ಕೇಳಿದರು.
ಇದಲ್ಲದೆ, ತಂತ್ರಜ್ಞಾನದ ಪಾತ್ರವನ್ನು ಎತ್ತಿ ತೋರಿಸುತ್ತಾ, ಜಾಗತಿಕ ಮಾರುಕಟ್ಟೆಯನ್ನು ಹಿಡಿಯಲು ಸಹಾಯ ಮಾಡುವ ಸಿದ್ಧಪಡಿಸಿದ ಉತ್ಪನ್ನವನ್ನು ರಚಿಸಲು ತಂತ್ರಜ್ಞಾನವು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.
ಮುಂದಿನ ಎರಡು ದಶಕದಲ್ಲಿ ಭಾರತ ಒಂದು ಮುಂದುವರಿದ ದೇಶವಾಗಲು ತಂತ್ರಜ್ಞಾನ ಸಹಾಯವಾಗುತ್ತದೆಯ ಭಾರತದಲ್ಲಿ ಡಿಜಿಟಲ್ ಕ್ರಾಂತಿಯ ಫಲ ಎಲ್ಲಾ ನಾಗರಿಕರಿಗೂ ಪ್ರಾಪ್ತವಾಗುವಂತಾಗಲು ಅಗಾಧ ಮತ್ತು ಅತ್ಯಾಧುನಿಕ ಡಿಜಿಟಲ್ ಸೌಕರ್ಯ ವ್ಯವಸ್ಥೆ ರೂಪಿಸಲಾಗುತ್ತಿರುವುದರ ಮಾಹಿತಿ ನೀಡಿದರು.
2047ರಷ್ಟರಲ್ಲಿ ಮುಂದುವರಿದ ದೇಶವಾಗಬೇಕೆನ್ನುವ ಭಾರತದ ಗುರಿಗೆ ತಂತ್ರಜ್ಞಾನ ನೆರವಾಗುತ್ತದೆ ಎಂದರು. ಜಿಟಲ್ ಇನ್ಫ್ರಾಸ್ಟ್ರಕ್ಚರ್ ಬಗ್ಗೆ ಇನ್ನಷ್ಟು ವಿವರ ನೀಡಿದ ಅವರು, ಸಣ್ಣ ಉದ್ಯಮಗಳ ಹೊಂದಾಣಿಕೆಯ ವೆಚ್ಚವನ್ನು (Cost of Compliances For Small Businesses) ಸರ್ಕಾರ ತಗ್ಗಿಸಬಯಸುತ್ತದೆ. ಯಾವ್ಯಾವ ನಿಯಮಾವಳಿಗಳನ್ನು ಕಡಿಮೆ ಮಾಡಬೇಕೆಂದು ಉದ್ಯಮದಿಂದ ಒಂದು ಪಟ್ಟಿ ಸಿದ್ಧವಾಗಲಿ ಎಂದೂ ಅವರು ಸಲಹೆ ನೀಡಿದರು.
ಸಣ್ಣ ಉದ್ಯಮಗಳು ನಿಯಮಗಳ ಹೊಂದಾಣಿಕೆಗೆ ಮಾಡುವ ವೆಚ್ಚ ಕಡಿಮೆ ಆಗಬೇಕು. ನೀವು ಅನಗತ್ಯವಾಗಿರುವ ನಿಯಮಾವಳಿಗಳನ್ನು ಇಳಿಸಿ ಒಂದು ಪಟ್ಟಿ ಸಿದ್ಧಪಡಿಸಬಹುದಾ ನೋಡಿ. ನಾವು 40 ಸಾವಿರದಷ್ಟು ನಿಯಮಾವಳಿಗಳನ್ನು ನಿಲ್ಲಿಸಿದ್ದೇವೆ ಎಂದು ಪೋಸ್ಟ್ ಬಜೆಟ್ ವೆಬಿನಾರ್ನಲ್ಲಿ ನರೇಂದ್ರ ಮೋದಿ ತಿಳಿಸಿದರು.