ತಿರುವನಂತಪುರಂ: ಭೂಕಂಪದಿಂದ ತತ್ತರಿಸಿರುವ ಟರ್ಕಿ ಮತ್ತು ಸಿರಿಯಾ ದೇಶಗಳಿಗೆ ಕೇರಳ ಸರ್ಕಾರ ಪರಿಹಾರ ನೆರವು ನೀಡಲಿದೆÉ. ಇದಕ್ಕಾಗಿ 10 ಕೋಟಿ ಮಂಜೂರಾಗಿದೆ.
ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ಅವರು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ನೀಡಿದ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ.
ಕಳೆದ ಬಜೆಟ್ ನಲ್ಲಿ ವಿಶ್ವಶಾಂತಿಗಾಗಿ ಮೀಸಲಿಟ್ಟ ಎರಡು ಕೋಟಿ ರೂ. ನೆರವಿನ ನಿರ್ವಹಣೆ ಕುರಿತು ಚರ್ಚಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಎರ್ನಾಕುಳಂ ನಗರದಲ್ಲಿ ನೀರಿನ ಅಣೆಕಟ್ಟನ್ನು ನವೀಕರಣು 10 ಕೋಟಿ ಮತ್ತು ಅಷ್ಟಮುಡಿ ನದಿಯ ಶುದ್ಧೀಕರಣಕ್ಕೆ 5 ಕೋಟಿ ರೂ. ಮೀಸಲಿಡಲಾಗಿದೆ ಎಂದಿರುವರು.
ಪಂಚಾಯತ್ ಸ್ಪೋಟ್ರ್ಸ್ ಕೌನ್ಸಿಲ್ ಯೋಜನೆಯ ಅಂಗವಾಗಿ ಶಾಲೆಗಳಲ್ಲಿ ಕ್ರೀಡಾ ತರಬೇತಿಗಾಗಿ 3 ಕೋಟಿ ರೂ. ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೂ ವೇತನ ಬಾಕಿ ಮಂಜೂರಾಗಿದೆ. ಇದೇ ವೇಳೆ ಇಂಧನ ಸೆಸ್ ಸೇರಿದಂತೆ ರಾಜ್ಯ ಬಜೆಟ್ ನಲ್ಲಿ ಘೋಷಿಸಿರುವ ಯಾವುದೇ ತೆರಿಗೆಯನ್ನು ಕಡಿಮೆ ಮಾಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ವೆಚ್ಚವನ್ನು ಕಡಿತಗೊಳಿಸುವುದು ವಿದೇಶಕ್ಕೆ ತೆರಳುವ ಯುವ ಸಮೂಹವನ್ನು ಇಲ್ಲಿಯೇ ನೆಲೆಗೊಳಿಸಲುವ ಯತ್ನ ಮತ್ತು ಕಾರು ಖರೀದಿಸುವುದು ಅಲ್ಲ ಎಂದರು. ವೆಚ್ಚ ತಗ್ಗಿಸಲು ಯೋಜನೆಗಳಲ್ಲಿ ಪ್ರಾಯೋಗಿಕ ಹಾಗೂ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಲಾಗುತ್ತಿದೆ ಎಂದು ಬಾಲಗೋಪಾಲ್ ತಿಳಿಸಿದರು. ಇಂಧನ ಸೆಸ್ ಇಳಿಕೆಯಾಗಲಿದೆ ಎಂಬ ಮಾಧ್ಯಮಗಳ ವರದಿ ನೋಡಿ ಪ್ರತಿಪಕ್ಷಗಳು ಧರಣಿ ಆರಂಭಿಸಿವೆ ಎಂದು ಸಚಿವರು ಲೇವಡಿ ಮಾಡಿದರು.
ಟರ್ಕಿ ಸಿರಿಯಾ ಪರಿಹಾರಕ್ಕೆ ಕೇರಳದಿಂದ 10 ಕೋಟಿ ನೆರವು: ಹಣಕಾಸು ಸಚಿವ
0
ಫೆಬ್ರವರಿ 09, 2023