HEALTH TIPS

ಮಗುವಿನ ಚಿಕಿತ್ಸೆಗೆ ಅಪರಿಚಿತನಿಂದ 11.6 ಕೋಟಿ ರೂ. ನೆರವು: ಕೊನೆಗೂ ಸಿಕ್ತು ಪುಣ್ಯಾತ್ಮನ ಸುಳಿವು!

 

              ಪಲಕ್ಕಾಡ್​: ವಿರಾಳಾತಿವಿರಳ ಅನುವಂಶಿಯ ರೋಗದಿಂದ ಬಳಲುತ್ತಿರುವ ಕೇರಳ ಮೂಲದ ಒಂದೂವರೆ ವರ್ಷದ ಮಗುವಿನ ಚಿಕಿತ್ಸೆಗೆ ಬರೊಬ್ಬರಿ 11.6 ಕೋಟಿ ರೂಪಾಯಿ ನೆರವು ನೀಡಿದ ಪುಣ್ಯಾತ್ಮನ ಬಗ್ಗೆ ಕೊನೆಗೂ ಒಂದು ಸುಳಿವು ದೊರೆತಿದೆ.

                   ಅಂಗಮಾಲಿ ಅಟ್ಟಣಿ ಮೂಲದ ಅದಿತಿ ನಾಯರ್​ ಮತ್ತು ಪಲಕ್ಕಾಡ್​ನ ಕೂಟನಾಡ್ ಮೂಲದ ಸಾರಂಗ್​ ಮೆನನ್​ ದಂಪತಿಯ ಒಬ್ಬನೇ ಪುತ್ರ ನಿರ್ವಾಣ್, ಬೆನ್ನುಮೂಳೆಯ ಸ್ನಾಯು ಕ್ಷೀಣತೆ (ಎಸ್‌ಎಂಎ ಟೈಪ್ 2) ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಅದರ ಚಿಕಿತ್ಸೆಗೆ 17.5 ಕೋಟಿ ರೂ.

ಖರ್ಚಾಗುತ್ತದೆ. ಅಪರಿಚಿತ ವ್ಯಕ್ತಿಯೊಬ್ಬ ಕ್ರೌಡ್​ಫಂಡಿಂಗ್​ ಆಯಪ್​ ಮೂಲಕ ಮಗುವಿನ ಚಿಕಿತ್ಸೆಗೆ 1. 4 ಮಿಲಿಯನ್ ಡಾಲರ್ (ಸುಮಾರು 11. 6 ಕೋಟಿ ಭಾರತೀಯ ರೂಪಾಯಿ) ನೆರವು ನೀಡಿದ್ದಾರೆ. ಆ ಪುಣ್ಯಾತ್ಮ ಯಾರು? ಎಲ್ಲಿಯವನು ಎಂಬ ಮಾಹಿತಿ ಈವರೆಗೂ ಸಿಕ್ಕಿರಲಿಲ್ಲ. ಆತನ ಉದಾರತೆಯ ಬಗ್ಗೆ ತಿಳಿದು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿತ್ತು.

                  ಇದೀಗ ಅಷ್ಟೊಂದು ಹಣದ ನೆರವು ನೀಡಿದ ಪುಣ್ಯಾತ್ಮ ಅಮೆರಿಕ ಮೂಲದವರು ಎಂದು ತಿಳಿದುಬಂದಿದೆ. ಆದರೆ, ಅವರ ಹೆಸರು ಮಾತ್ರ ಬಹಿರಂಗವಾಗಿಲ್ಲ.

                ಮಾಧ್ಯಮದ ಮೂಲಕ ಮಗುವಿನ ಆರೋಗ್ಯ ಸ್ಥಿತಿ ತಿಳಿದಾಗ ಮನಸ್ಸಿಗೆ ತುಂಬಾ ನೋವಾಯಿತು. ಏನಾದರೂ ಸಹಾಯ ಮಾಡಬೇಕು ಅನಿಸಿರತು. ನಾನು ಖ್ಯಾತಿಗಾಗಿ ಹಣವನ್ನು ನೀಡಿಲ್ಲ. ಮಗುವಿನ ಪಾಲಕರಿಗೂ ಕೂಡ ನನ್ನ ಹೆಸರು ತಿಳಿದಿಲ್ಲ. ಇಲ್ಲಿ ಮಗುವಿನ ಜೀವನ ತುಂಬಾ ಮುಖ್ಯವೇ ಹೊರತು, ನನ್ನ ಹೆಸರಲ್ಲ ಎಂದು ಅಪರಿಚಿತ ವ್ಯಕ್ತಿ ಕ್ರೌಡ್​ಫಂಡಿಂಗ್​ ಏಜೆನ್ಸಿಗೆ ತಿಳಿಸಿದ್ದಾರೆ.

                 ಅಂದಹಾಗೆ ಸಾರಂಗ್​ ಓರ್ವ ಮರೀನ್​ (ಸಾಗರ) ಇಂಜಿನಿಯರ್. ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ. ತನ್ನ ಪತ್ನಿ ಅದಿತಿ ಜೊತೆ ಸಂತೋಷಕರ ಜೀವನ ನಡೆಸುತ್ತಿದ್ದರು. ಅದಿತಿ ಕೂಡ ಫ್ರೆಂಚ್​ ಐಟಿ ಕಂಪನಿಯ ಉದ್ಯೋಗಿ. ಮಗನಿಗೆ ಕಾಯಿಲೆ ಇರುವುದು ಗೊತ್ತಾದ ಬಳಿಕ ದಂಪತಿ ಜ.19ರಂದು ಭಾರತಕ್ಕೆ ಮರಳಿದರು. ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಜೋಲ್ಗೆನ್​ಸ್ಮಾ ಎಂಬ ಅಮೆರಿಕನ್ ಔಷಧಿ ಬಂದಾಗಲೆಲ್ಲ ಅವರು ಮುಂಬೈನ ಆಸ್ಪತ್ರೆಗೆ ಹೋಗುತ್ತಾರೆ. ಆ ಔಷಧಿಯನ್ನು ನೀಡುವ ಮೊದಲು ಹಲವಾರು ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಔಷಧಿ ಬಂದ ನಂತರ ಒಂದು ಬಾರಿ ಜೀನ್ ವರ್ಗಾವಣೆ ನಡೆಯುತ್ತದೆ.

                ಒಂದು ವರ್ಷದ ಮಗು ಕುಳಿತುಕೊಳ್ಳಲು ಮತ್ತು ನಿಲ್ಲಲು ಹಿಂದೇಟು ಹಾಕಿದಾಗ ಪರೀಕ್ಷೆ ಮಾಡಲಾಯಿತು. ಈ ವೇಳೆ ಮಗುವಿಗೆ ಎಸ್‌ಎಂಎ ಟೈಪ್ 2 ಇದೆ ಎಂದು ಹಿಂದೂಜಾ ಆಸ್ಪತ್ರೆ ದೃಢಪಡಿಸಿದೆ.

                ವೈದ್ಯಕೀಯ ನೆರವು ಸಂಗ್ರಹಿಸಲು ಆರಂಭಿಸಲಾದ ಕ್ರೌಡ್ ಫಂಡಿಂಗ್ ಆಯಪ್ ಮೂಲಕ ಸೋಮವಾರ 1. 4 ಮಿಲಿಯನ್ ಡಾಲರ್ (ಸುಮಾರು 11. 6 ಕೋಟಿ ಭಾರತೀಯ ರೂಪಾಯಿ) ಖಾತೆಗೆ ಜಮಾ ಮಾಡಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬರು ಇದೇ ತಿಂಗಳ 13 ರಿಂದ ನಿರ್ವಾಣ್​ ಅವರ ವೈದ್ಯಕೀಯ ಮಾಹಿತಿ ಮತ್ತು ದಾಖಲೆಗಳನ್ನು ಹುಡುಕುತ್ತಿದ್ದರು. ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್ ಮಿಲಾಪ್, ನಿರ್ವಾಣ್​ನನ್ನು ಹೇಗಾದರೂ ಬದುಕಬೇಕೆಂದು ಸೂಚಿಸಿತ್ತು ಎಂದು ವರದಿಯಾಗಿದೆ. ಇದೀಗ ವೈದ್ಯಕೀಯ ನೆರವು ನಿಧಿಯಲ್ಲಿ 16 ಕೋಟಿ ರೂ.ಗೂ ಹೆಚ್ಚು ಹಣವಿದೆ. ಕ್ರೌಡ್ ಫಂಡಿಂಗ್ ಏಜೆನ್ಸಿ ಮಿಲಾಪ್ ಮೂಲಕ 15 ಕೋಟಿ ಮತ್ತು ಗುರು ಏಜೆನ್ಸಿ ಮೂಲಕ 1.4 ಕೋಟಿ ರೂ. ಸಂಗ್ರಹವಾಗಿದೆ. ಒಂದು ರೂಪಾಯಿ ಕೊಡಲು ಯೋಚಿಸುವ ಈ ಕಾಲದಲ್ಲಿ ಇಷ್ಟೊಂದು ಹಣದ ನೆರವು ನೀಡಿರುವ ಆ ಪುಣ್ಯಾತ್ಮ ನಿಜಕ್ಕೂ ದೇವರ ಪ್ರತಿರೂಪ ಎಂದರೆ ತಪ್ಪಾಗಲಾರದು.

                  ಈ ಬಗ್ಗೆ ಭಾವುಕರಾಗಿ ಮಾತನಾಡಿರುವ ಸಾರಂಗ್​, ನನಗೆ ಏನು ಹೇಳಬೇಕೆಂದು ತಿಳಿಯುತ್ತಿಲ್ಲ, ಅಪರಿಚಿತನ ರೂಪದಲ್ಲಿ ದೇವರೇ ಇಳಿದು ಬಂದಿದ್ದಾನೆ ಎಂದು ಕಣ್ಣೀರಾಕಿದ ಸರಂಗ್​, ನಾನು ಆ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಲೇಬೇಕು. ಆದರೆ, ಅವರು ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿದ್ದಾರೆ. ನನಗೆ ಬೇರೆ ದಾರಿ ಕಾಣುತ್ತಿಲ್ಲ ಎಂದು ಸಾರಂಗ್​ ಭಾವುಕರಾದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries