HEALTH TIPS

1.2 ಬಿಲಿಯನ್ ಡಾಲರ್ ಗೆ ವ್ಯವಹಾರ: ಅದಾನಿ ಸಮೂಹದ ತೆಕ್ಕೆಗೆ ಹೈಫಾ ಪೋರ್ಟ್- ಮೈಲಿಗಲ್ಲು ಎಂದ ಇಸ್ರೇಲ್ ಪ್ರಧಾನಿ

 

            ಹೈಫಾ: ಇಸ್ರೇಲಿನ ಆಯಕಟ್ಟಿನ ಹೈಫಾ ಪೋರ್ಟ್ ಪೋರ್ಟ್ ನ್ನು ಅದಾನಿ ಸಮೂಹ 1.2 ಬಿಲಿಯನ್ ಡಾಲರ್ ಗೆ ಪಡೆದಿದೆ.
 
                   ಟೆಲ್ ಅವೀವ್ ನಲ್ಲಿ ಕೃತಕ ಬುದ್ಧಿಮತ್ತೆ ಪ್ರಯೋಗಾಲಯವೂ ಸೇರಿದಂತೆ ಇಸ್ರೇಲ್ ನಲ್ಲಿನ ಹೂಡಿಕೆಯ ನಿರ್ಧಾರ ಭಾಗವಾಗಿ ಅದಾನಿ ಸಮೂಹ ಈ ಹೈಫಾ ಪೋರ್ಟ್ ನ ಒಪ್ಪಂದಕ್ಕೆ ಮುಂದಾಗಿದೆ. 

                      ಇತ್ತೀಚೆಗೆ ಅಮೇರಿಕಾದ ಶಾರ್ಟ್ ಸೆಲ್ಲರ್ ಹಿಂಡನ್ ಬರ್ಗ್ ರಿಸರ್ಚ್ ನ ವರದಿಯಲ್ಲಿ ಅದಾನಿ ಸಮೂಹದ ಬಗ್ಗೆ ಅಕ್ರಮಗಳ ಆರೋಪ ಕೇಳಿಬಂದಿತ್ತು. 

                ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ- ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಇಬ್ಬರೂ ಹೈಫಾ ಪೋರ್ಟ್ ಒಪ್ಪಂದಕ್ಕೆ ಸಹಿ ಮಾಡಿದ್ದು, ಹೂಡಿಕೆ ಅವಕಾಶಗಳ ಬಗ್ಗೆ ಮಾತನಾಡಿದ್ದಾರೆ. 

                   ಹೈಫಾ ಪೋರ್ಟ್ ಒಪ್ಪಂದದ ಬಗ್ಗೆ ಮಾತನಾಡಿರುವ ನೇತನ್ಯಾಹು ಅದಾನಿ ಸಮೂಹದ ಜೊತೆಗಿನ ಒಪ್ಪಂದವನ್ನು ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದು, ಹಲವು ವಿಧಗಳಲ್ಲಿ ಈ ಒಪ್ಪಂದ ಉಭಯ ರಾಷ್ಟ್ರಗಳ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ ಎಂದು ಹೇಳಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries