HEALTH TIPS

ನಳಂದ: 1200 ವರ್ಷಗಳಷ್ಟು ಹಳೆಯ ವಿಗ್ರಹಗಳು ಪತ್ತೆ

 

                ಪಟ್ನಾ: 'ಪುರಾತನ ನಳಂದಾ ವಿಶ್ವವಿದ್ಯಾಲಯ ಬಳಿಯಲ್ಲಿರುವ ಕೊಳದ ಹೂಳು ತೆಗೆಯುವ ವೇಳೆ ಸುಮಾರು 1,200 ವರ್ಷಗಳಷ್ಟು ಹಳೆಯದಾದ ಎರಡು ಕಲ್ಲಿನ ವಿಗ್ರಹಗಳು ಪತ್ತೆಯಾಗಿವೆ' ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

                  ಈ ವಾರದ ಆರಂಭದಲ್ಲಿ ನೀರನ್ನು ಸಂರಕ್ಷಿಸಲು ಆರಂಭಿಸಲಾದ 'ಜಲ್-ಜೀವನ್-ಹರಿಯಾಲಿ' ಯೋಜನೆಯಡಿಯಲ್ಲಿ ಕೊಳದ ಹೂಳು ತೆಗೆಯುವ ಸಂದರ್ಭದಲ್ಲಿ ಪ್ರಾಚೀನ ನಳಂದ ಮಹಾವೀರ ಸಮೀಪದ ಸರ್ಲಿಚಕ್ ಗ್ರಾಮದ ತಾರ್ಸಿನ್ಹ್ ಕೊಳದಿಂದಲ್ಲಿ ವಿಗ್ರಹಗಳು ಪತ್ತೆಯಾಗಿವೆ.

             ಈ ವಿಗ್ರಹಗಳ ಕುರಿತ ಮಾಹಿತಿನ್ನು ಎಎಸ್‌ಐ ಆಗಲೀ ಅಥವಾ ಆಡಳಿತವಾಗಲೀ ಬಹಿರಂಗಪಡಿಸಿಲ್ಲ.

                 'ಸರ್ಲಿಚಕ್ ಗ್ರಾಮಸ್ಥರು ಈ ವಿಗ್ರಹಗಳ ದೊರೆತ ಬಳಿಕ ಅವುಗಳಿಗೆ ದೇವಸ್ಥಾನ ಕಟ್ಟಿಸಲು ಮುಂದಾಗಿದ್ದರು. ಆ ಸ್ಥಳದಲ್ಲಿದ್ದ ನಮ್ಮ ಅಧಿಕಾರಿಗಳಿಗೆ ಈ ವಿಷಯ ತಿಳಿದ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಎರಡೂ ವಿಗ್ರಹಗಳನ್ನು ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಈ ವಿಗ್ರಹಗಳು ಈಗ ಸ್ಥಳೀಯ ಪೊಲೀಸರ ವಶದಲ್ಲಿವೆ' ಎಂದು ಅಧೀಕ್ಷಕ ಪುರಾತತ್ವಶಾಸ್ತ್ರಜ್ಞೆ ಗೌತಮಿ ಭಟ್ಟಾಚಾರ್ಯ (ಎಎಸ್‌ಐ ಪಟ್ನಾ ವಲಯ) ಅವರು ತಿಳಿಸಿದ್ದಾರೆ.

              ' ಈ ವಿಗ್ರಹಗಳನ್ನು ನಳಂದ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲು ನಾವು ಬಯಸಿದ್ದೇವೆ. ಇಂಡಿಯನ್‌ ಟ್ರೆಷರ್‌ ಟ್ರೋವ್‌ ಆಯಕ್ಟ್‌ 1878ರ ನಿಬಂಧನೆಗಳ ಪ್ರಕಾರ ವಿಗ್ರಹಗಳನ್ನು ಕೂಡಲೇ ಇಲಾಖೆಗೆ ಹಸ್ತಾಂತರಿಸುವಂತೆ ರಾಜ್ಯ ಸರ್ಕಾರಕ್ಕೆ ನಾನು ಮನವಿ ಮಾಡಿದ್ದೇನೆ' ಎಂದೂ ಅವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries