ಪತ್ತನಂತಿಟ್ಟ: ಶಬರಿಮಲೆಯಲ್ಲಿ ಸಂಗ್ರಹವಾದ ಕಾಣಿಕೆ ನಾಣ್ಯಗಳ ಎಣಿಕೆ ಕಾರ್ಯ ಪೂರ್ಣಗೊಂಡಿದೆ. 1,220 ಉದ್ಯೋಗಿಗಳು ನಾಣ್ಯಗಳನ್ನು ಎಣಿಸಲು ದಿನಗಳನ್ನು ಸವೆಸಿದ್ದರು. ಭಕ್ತರು ಹತ್ತು ಕೋಟಿ ಮೌಲ್ಯದ ನಾಣ್ಯಗಳನ್ನು ಸಮರ್ಪಿಸಿದ್ದರು.
ದೇಗುಲದ ಮುಂಭಾಗದ ಹುಂಡಿಗಳ ಸಹಿತ ಇತರೆಡೆಗಳಲ್ಲೂ ಸಂಗ್ರಹವಾಗಿದ್ದ ಹುಂಡಿಗಳಲ್ಲಿದ್ದ ಹಣವನ್ನೂ ಲೆಕ್ಕ ಹಾಕಲಾಯಿತು. ನೋಟುಗಳು ಹಾಳಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮೊದಲೇ ಎಣಿಕೆ ಮಾಡಲಾಗಿತ್ತು. ನೋಟುಗಳು, ನಾಣ್ಯಗಳನ್ನು ಪ್ರತ್ಯೇಕಿಸಿ ನಂತರ ನಾಣ್ಯಗಳನ್ನು ಎಣಿಸಲಾಯಿತು.
1,220 ಉದ್ಯೋಗಿಗಳ ಪ್ರಯತ್ನ ಫಲ ನೀಡಿತು: ಶಬರಿಮಲೆಯಲ್ಲಿ ಸಿಕ್ಕ ನಾಣ್ಯಗಳ ಎಣಿಕೆ ಪೂರ್ಣ
0
ಫೆಬ್ರವರಿ 12, 2023