HEALTH TIPS

ದೇಶಾದ್ಯಂತ ಶಾಲೆ ತೊರೆದ ಮಕ್ಕಳ ಸಂಖ್ಯೆ 12 ಲಕ್ಷಕ್ಕೂ ಅಧಿಕ!

 

ವದೆಹಲಿ: ದೇಶಾದ್ಯಂತ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆ ತೊರೆದ ಮಕ್ಕಳ ಸಂಖ್ಯೆ 12 ಲಕ್ಷಕ್ಕೂ ಅಧಿಕ ಎಂಬುದು ತಿಳಿದು ಬಂದಿದೆ. ಇಂಥದ್ದೊಂದು ಆತಂಕಕಾರಿ ಅಂಶ ಸಂಸತ್ತಿನಲ್ಲೇ ಬಹಿರಂಗಗೊಂಡಿದೆ.

ಬುಧವಾರ ಸಂಸತ್ತಿನಲ್ಲಿ ರಾಜ್ಯಸಭಾ ಸದಸ್ಯ ಬಿಕಾಶ್​ ರಂಜನ್ ಭಟ್ಟಾಚಾರ್ಯ ಮತ್ತು ಎ.ಎ.ರಹೀಂ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಈ ಮಾಹಿತಿ ಹೊರಬಿದ್ದಿದೆ.

ಶಾಲೆ ತೊರೆದ ಮಕ್ಕಳ ಅಂಕಿ-ಅಂಶ ಬಹಿರಂಗಪಡಿಸಿ ಎಂದು ಅವರು ಕೇಳಿದ್ದಕ್ಕೆ ರಾಜ್ಯ ಖಾತೆಯ ಶಿಕ್ಷಣ ಸಚಿವ ಸುಭಾಷ್ ಸರ್ಕಾರ್ ದೇಶದ ಎಲ್ಲ ಶಿಕ್ಷಣ ಇಲಾಖೆಗಳಿಂದ ಆನ್​​ಲೈನ್ ಮೂಲಕ ಮಾಹಿತಿ ಕ್ರೋಡೀಕರಿಸಿ ಸಂಸತ್ತಿನಲ್ಲಿ ತಿಳಿಸಿದ್ದಾರೆ.

ಆ ಪ್ರಕಾರ ದೇಶದಲ್ಲಿ 2022-23ರಲ್ಲಿ ಶಿಕ್ಷಣ ತೊರೆದ ಮಕ್ಕಳ ಸಂಖ್ಯೆ 12,53,019. ಇದರಲ್ಲಿ 6,97,121 ವಿದ್ಯಾರ್ಥಿಗಳು ಮತ್ತು 5,55,854 ವಿದ್ಯಾರ್ಥಿನಿಯರು ಹಾಗೂ 44 ಮಂದಿ ತೃತೀಯಲಿಂಗಿಗಳು. ಇವರಲ್ಲಿ 9,30,531 ಪ್ರಾಥಮಿಕ ಶಾಲೆಯವರಾಗಿದ್ದರೆ, 3,22,488 ಪ್ರೌಢ ಶಾಲೆಯವರು ಎಂದು ಅಂಕಿ-ಅಂಶದಲ್ಲಿ ತಿಳಿಸಲಾಗಿದೆ.

ಇನ್ನು ಶಾಲೆ ತೊರೆದ ಪ್ರಾಥಮಿಕ ಶಾಲೆಯವರ ಪೈಕಿ ಅತಿಹೆಚ್ಚು ಮಂದಿ ಉತ್ತರಪ್ರದೇಶದವರು. ಉತ್ತರಪ್ರದೇಶ- 3,96,655, ಬಿಹಾರ- 1,34,252, ಗುಜರಾತ್​-1,06,885, ಅಸ್ಸಾಂ- 80,739, ಹರಿಯಾಣ- 22,841) ಮತ್ತು ತಮಿಳುನಾಡಿನಲ್ಲಿ 20,352 ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆ ತೊರೆದಿದ್ದಾರೆ. ಹಾಗೆಯೇ ಮಧ್ಯಪ್ರದೇಶದ 84,788, ಒಡಿಶಾ-54,634, ಅಸ್ಸಾಂ- 48,795, ಗುಜರಾತ್​- 36,522 ಮತ್ತು ಆಂಧ್ರಪ್ರದೇಶದ 20,443 ವಿದ್ಯಾರ್ಥಿಗಳು ಪ್ರೌಢಶಾಲೆ ತೊರೆದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries