ನವದೆಹಲಿ: ಸಂಸತ್ತಿನ ಅತ್ಯುತ್ತಮ ಸದಸ್ಯರಿಗೆ ಸಂಸದ್ ರತ್ನ ಪ್ರಶಸ್ತಿ ನೀಡುವ ಪರಿಪಾಠವಿದ್ದು, ಪ್ರಸ್ತುತ ಸಾಲಿನಲ್ಲಿ 13 ಮಂದಿ ಸಮಸದರಿಗೆ ಪ್ರಶಸ್ತಿ ಒಲಿದುಬಂದಿದೆ.
ಲೋಕಸಭೆಯಿಂದ ಎಂಟು ಮತ್ತು ರಾಜ್ಯಸಭೆಯಿಂದ ಮೂವರನ್ನು ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಬಿದ್ಯುತ್ ಬರನ್ ಮಹತೋ ಬಿಜೆಪಿ (ಜಾಖರ್ಂಡ್), ಡಾ. ಸುಕಾಂತ ಮಜುಂದಾರ್ ಬಿಜೆಪಿ (ಪಶ್ಚಿಮ ಬಂಗಾಳ), ಕುಲದೀಪ್ ರಾಯ್ ಶರ್ಮಾ ಕಾಂಗ್ರೆಸ್ (ಅಂಡಮಾನ್ ಮತ್ತು ನಿಕೋಬಾರ್), ಡಾ. ಹೀನಾ ವಿಜಯಕುಮಾರ್ ಗವಿತಾ ಬಿಜೆಪಿ (ಮಹಾರಾಷ್ಟ್ರ), ಅಧೀರ್ ರಂಜನ್ ಚೌಧರಿ ಕಾಂಗ್ರೆಸ್ (ಪಶ್ಚಿಮ ಬಂಗಾಳ), ಗೋಪಾಲ್ ಚಿನಯ್ಯ ಶೆಟ್ಟಿ ಬಿಜೆಪಿ (ಮಹಾರಾಷ್ಟ್ರ), ಸುಧೀರ್ ಗುಪ್ತಾ ಬಿಜೆಪಿ (ಮಧ್ಯಪ್ರದೇಶ), ಡಾ. ಅಮೋಲ್ ರಾಮ್ ಸಿಂಗ್ ಕೋಲಿ ಎನ್‍ಸಿಪಿ (ಮಹಾರಾಷ್ಟ್ರ) ಲೋಕಸಭೆಯಿಂದ ಪ್ರಶಸ್ತಿ ಪಡೆದರು.
ಡಾ. ಜಾನ್ ಬ್ರಿಟಾಸ್ ಸಿಪಿಎಂ (ಕೇರಳ), ಡಾ. ಮನೋಜ್ ಕುಮಾರ್ ಝಾ ಆರ್‍ಜೆಡಿ (ಬಿಹಾರ) ಮತ್ತು ಫೌಜಿಯಾ ತಹಸೀನ್ ಅಹ್ಮದ್ ಖಾನ್ ಎನ್‍ಸಿಪಿ (ಮಹಾರಾಷ್ಟ್ರ) ಎಂಬವರು ರಾಜ್ಯಸಭೆಯಿಂದ ಪ್ರಶಸ್ತಿಯನ್ನು ಪಡೆದರು. ನಿವೃತ್ತ ರಾಜ್ಯಸಭಾ ಸದಸ್ಯರ ವಿಭಾಗದಲ್ಲಿ ವಿಶಂಭರ್ ಪ್ರಸಾದ್ ನಿಶಾದ್ ಎಸ್ಪಿ (ಉತ್ತರ ಪ್ರದೇಶ) ಮತ್ತು ಛಾಯಾ ವರ್ಮಾ ಕಾಂಗ್ರೆಸ್ (ಛತ್ತೀಸ್‍ಗಢ) ಸಹ ಪ್ರಶಸ್ತಿ ಪಡೆದಿದ್ದಾರೆ. ಡಾ. ಎಪಿಜೆ ಅಬ್ದುಲ್ ಕಲಾಂ ಜೀವಮಾನ ಸಾಧನೆ ಪ್ರಶಸ್ತಿಯನ್ನು ಮಾಜಿ ರಾಜ್ಯಸಭಾ ಸಂಸದ ಟಿ.ಕೆ. ರಂಗರಾಜನ್ (ಸಿಪಿಎಂ) ಅವರನ್ನು ಆಯ್ಕೆಮಾಡಲಾಗಿದೆ. ಲೋಕಸಭೆಯ ಹಣಕಾಸು ಸಮಿತಿ ಮತ್ತು ರಾಜ್ಯಸಭೆಯ ಸಾರಿಗೆ ಪ್ರವಾಸೋದ್ಯಮ ಸಾಂಸ್ಕøತಿಕ ಸಮಿತಿಗೂ ಪ್ರಶಸ್ತಿ ಲಭಿಸಿದೆ.
ಈ ಪ್ರಶಸ್ತಿಯು ಪ್ರಶ್ನೆಗಳು, ಖಾಸಗಿ ಮಸೂದೆಗಳು, ಚರ್ಚೆಗಳಲ್ಲಿ ಭಾಗವಹಿಸುವಿಕೆ ಮತ್ತು ಮಧ್ಯಸ್ಥಿಕೆ ಸೇರಿದಂತೆ ಸಂಸತ್ತಿನ ಕಲಾಪಗಳಲ್ಲಿನ ಶ್ರೇಷ್ಠತೆಯನ್ನು ಆಧರಿಸಿದೆ. ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರ ಅಧ್ಯಕ್ಷತೆಯ ತೀರ್ಪುಗಾರರ ಸಮಿತಿಯು ಪ್ರಶಸ್ತಿಯನ್ನು ಘೋಷಿಸಿತು. ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎಸ್. ಕೃಷ್ಣಮೂರ್ತಿ ಅಧ್ಯಕ್ಷ ರಾಗಿರುವರು. ಮಾರ್ಚ್ 25 ರಂದು ದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಗುವುದು.
13 ಮಂದಿಗೆ ಅತ್ಯುತ್ತಮ ಸಂಸದರಿರುವ ‘ಸಂಸದ್ ರತ್ನ ಪ್ರಶಸ್ತಿ’: ಕೇರಳಕ್ಕೆ ಒಲಿದ ಒಂದು ಪ್ರಶಸ್ತಿ
0
ಫೆಬ್ರವರಿ 20, 2023
Tags