ಕಾಸರಗೋಡು :ಸಾರವರ್ಧಿತ
ಅಕ್ಕಿ ಬೇಯಿಸುವ ವಿಧಾನ ಹೇಗೆ ಎಂಬ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ವಿವಿಧ 12
ಕೇಂದ್ರಗಳಲ್ಲಿ ಫೆ.14ರಿಂದ 21ರವರೆಗೆ ಅಡುಗೆ ಪ್ರದರ್ಶನ ನಡೆಯಲಿದೆ.ಪ್ರದರ್ಶನದ
ಜಿಲ್ಲಾ ಮಟ್ಟದ ಉದ್ಘಾಟನೆ ಫೆ.14ರಂದು ಬೆಳಗ್ಗೆ 10.30ಗೆ ಮಂಜೇಶ್ವರ ಬ್ಲಾಕ್‌ನ
ಮಂಗಲ್ಪಾಡಿ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.
ನಂತರ ಮಧ್ಯಾಹ್ನ 2.30ಗೆ ಮಂಜೇಶ್ವರ
ಬ್ಲಾಕ್‌ನ ಅನಂತೇಶ್ವರ ದೇವಸ್ಥಾನದ ಪರಿಸರದಲ್ಲಿ, 15ರಂದು ಬೆಳಗ್ಗೆ 10.30ಗೆ ಕಾಸರಗೋಡು
ಬ್ಲಾಕ್‌ನ ಕುಂಬಳೆ ಬಸ್ ನಿಲ್ದಾಣ ಪರಿಸರದಲ್ಲಿ ನಡೆಯಲಿದೆ. ಮಧ್ಯಾಹ್ನ 2.30ಗೆ
ಚೆಂಗಳ-ಚೆರ್ಕಳ ಬಸ್ ನಿಲ್ದಾಣ ಪರಿಸರದಲ್ಲಿ,16ರಂದು ಬೆಳಗ್ಗೆ 10.30ಗೆ ಕಾರಡ್ಕ
ಬ್ಲಾಕ್‌ನ ಕುಟ್ಟಿಕೋಲ್ ಬಸ್ ನಿಲ್ದಾಣ ಪರಿಸರದಲ್ಲಿ,ಮಧ್ಯಾಹ್ನ 2.30ಗೆ ಬೇಡಡ್ಕ
ಪೇಟೆಯಲ್ಲಿ,17ರಂದು ಬೆಳಗ್ಗೆ 10.30ಗೆ ಪರಪ್ಪ ಬ್ಲಾಕ್‌ನ ಕೋಟೋಮ್ ಬೇಲೂರು ಪೇಟೆ
ಪರಿಸರದಲ್ಲಿ, ಮಧ್ಯಾಹ್ನ 2.30 ಗೆ ವೆಸ್ಟ್ ಎಳೇರಿ ಭೀಮನಡಿ ಬಸ್ ನಿಲ್ದಾಣ
ಪರಿಸರದಲ್ಲಿ,20 ರಂದು ಬೆಳಿಗ್ಗೆ 10.30ಗೆ ಕಾಞಂಗಾಡ್ ಬ್ಲಾಕ್‌ನ ಅಜಾನೂರು ಪಂಚಾಯತ್
ಸಭಾಂಗಣದಲ್ಲಿ,ಮಧ್ಯಾಹ್ನ 2.30 ಗೆ ಪಳ್ಳಿಕ್ಕರ ಪಂಚಾಯತ್ ಸಭಾಂಗಣದಲ್ಲಿ, 21ರಂದು
ಬೆಳಿಗ್ಗೆ 10.30 ಗೆ ನೀಲೇಶ್ವರ ಬ್ಲಾಕ್‌ನ ಪಿಲಿಕೋಡ್ ವಯೋಜನ ಕೇಂದ್ರದಲ್ಲಿ. ಮಧ್ಯಾಹ್ನ
2.30ಗೆ ತ್ರಿಕರಿಪುರದ ಟೌನ್ ಹಾಲ್ ನಲ್ಲಿ ಅಡುಗೆ ಪ್ರದರ್ಶನ ನಡೆಯಲಿದೆ.