ಕಾಸರಗೋಡು: ಹಸಿರು ಕೇರಳ ಮಿಷನ್ ಚಟುವಟಿಕೆಗಳ ಮುಂದುವರಿದ ಭಾಗವಾಗಿ ಮಾರ್ಚ್ 15 ರೊಳಗೆ ಜಿಲ್ಲೆಯಲ್ಲಿ ಇನ್ನೂ 600 ಕೇಂದ್ರಗಳನ್ನು ತ್ಯಾಜ್ಯ ಮುಕ್ತಗೊಳಿಸಲು ಹಸಿರು ಕೇರಳ ಮಿಷನ್ ಜಿಲ್ಲಾ ಪರಿಸರ ಸಮಿತಿ ಸಭೆ ತೀರ್ಮಾನಿಸಿದೆ.
2023 ರ ಜನವರಿ 26 ರಿಂದ 30 ರವರೆಗೆ ನಡೆದ ಸಾರ್ವಜನಿಕ ಪ್ರದೇಶ ಸ್ವಚ್ಛತಾ ಅಭಿಯಾನದಲ್ಲಿ 38 ಗ್ರಾಮ ಪಂಚಾಯತ್ ಗಳು ಮತ್ತು ಮೂರು ನಗರಸಭೆಗಳಿಂದ 254 ಪ್ರದೇಶಗಳನ್ನು ಸ್ವಚ್ಛಗೊಳಿಸಲಾಗಿದೆ. 4156 ಕಾರ್ಮಿಕರು 60000 ಚದರ ಮೀಟರ್‍ಗಿಂತ ಹೆಚ್ಚು ಶುಚೀಕರಿಸಿ 73335 ಕೆಜಿ ತ್ಯಾಜ್ಯ ತೆರವುಗೊಳಿಸಿದ್ದಾರೆ.
ಮಂಗಲ್ಪಾಡಿಯಿಂದ ಮಾತ್ರ 60 ಟನ್ ತ್ಯಾಜ್ಯ ಸಂಗ್ರಹಿಸಲಗಿದೆ. ಪ್ರತಿ ವಾರ್ಡ್‍ಗೆ ಒಂದರಂತೆ ಕ್ಲಸ್ಟರ್‍ಗಳಲ್ಲಿ ಸಂಪೂರ್ಣ ಶುಚಿತ್ವ ಕಾಮಗಾರಿಯನ್ನು ಎರಡನೇ ಹಂತದಲ್ಲಿ ಎಪ್ರಿಲ್ 15ರೊಳಗೆ ಪೂರ್ಣಗೊಳಿಸಲು ಕಾರ್ಯಕ್ರಮ ಸಿದ್ಧಪಡಿಸಲಾಗಿದೆ. ಜಿಲ್ಲೆಯ 550 ಸಾರ್ವಜನಿಕ ಸಂಸ್ಥೆ ಗಳನ್ನು ಮೇ 30ರ ಮೊದಲು ಸ್ವಚ್ಛಗೊಳಿಸಿ ಹಸಿರು ಪ್ರಮಾಣ ಪತ್ರವನ್ನು ಪಡೆಯಬೇಕು. ಸರ್ಕಾರದ 100 ದಿನಗಳ ಕ್ರಿಯಾ ಯೋಜನೆಯಲ್ಲಿ ನೈರ್ಮಲ್ಯ ಕ್ಷೇತ್ರದಲ್ಲಿನ ಮಧ್ಯಸ್ಥಿಕೆಗಳಲ್ಲಿ ಇದೂ ಒಳಗೊಂಡಿದೆ. ನವಕೇರಳ ಮಿಷನ್ ಜಿಲ್ಲಾ ಕಛೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಎಲ್ ಎಸ್ ಜಿ ಡಿ ಜಂಟಿ ನಿರ್ದೇಶಕ ಜೈಸನ್ ಮ್ಯಾಥ್ಯೂ ವಹಿಸಿದ್ದರು. ನವಕೇರಳ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣನ್ ವರದಿ ಮಂಡಿಸಿದರು. ಉಪ ಜಿಲ್ಲಾ ಯೋಜನಾಧಿಕಾರಿ ನಿನೋಜ್ ಮೇಪಾಡಿಯಾತ್, ಎಲ್ ಎಸ್ ಜಿ ಡಿ ಉಪ ನಿರ್ದೇಶಕ ಕೆ. ವಿ. ಹರಿದಾಸ್, ಎ ಡಿ ಸಿ ಜನರಲ್ ಫಿಲಿಪ್ ಜೋಸೆಫ್ ಮತ್ತಿತರರು ಮಾತನಾಡಿದರು.
ಯಾವುದೇ ಶೀರ್ಷಿಕೆಯಿಲ್ಲ
0
ಫೆಬ್ರವರಿ 12, 2023
Tags