HEALTH TIPS

ಪಿ ಆರ್ ಡಿ ಪ್ರಿಸಂ ಯೋಜನೆಗೆ ಅರ್ಜಿಗಳ ಆಹ್ವಾನ: ಕೊನೆಯ ದಿನಾಂಕ ಫೆಬ್ರವರಿ 15



       ಕಾಸರಗೋಡು:ಮಾಹಿತಿ - ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯೋಜಿತ  ವಿಕಸನ ಸುದ್ದಿ ಶೃಂಖಲೆ (ಪ್ರಿಸಂ) ಯೋಜನೆಗೆ ಉಪ-ಸಂಪಾದಕರು, ವಿಷಯ ಸಂಪಾದಕ ಮತ್ತು ಮಾಹಿತಿ ಸಹಾಯಕರ ತಾತ್ಕಾಲಿಕ ಸಮಿತಿಯ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದಲ್ಲಿ  ಮೇಲೆ ಸಮಿತಿ (ಪ್ಯಾನಲ್) ಯನ್ನು ಸಿದ್ಧಪಡಿಸಲಾಗುತ್ತದೆ.  ಫೆಬ್ರವರಿ 15 ರವರೆಗೆ www.careers.cdit.org  ವೆಬ್ಸೈಟ್  ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.

         ಜಿಲ್ಲಾ ಆಧಾರದಲ್ಲಿ ಮತ್ತು ತಿರುವನಂತಪುರದಲ್ಲಿರುವ ಇಲಾಖೆಯ ನಿರ್ದೇಶನಾಲಯದಲ್ಲಿ  ಸಮಿತಿಯನ್ನು ರಚಿಸಲಾಗುತ್ತದೆ.  ಒಬ್ಬರು ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಉಪ ಸಂಪಾದಕ ಸಮಿತಿಗೆ  ಯಾವು ದಾದ ರೂ ವಿಷಯದಲ್ಲಿ ಅಂಗೀಕೃತ  ವಿಶ್ವ ವಿದ್ಯಾನಿಲಯದಿಂದ ಪಡೆದ ಪದವಿ, ಪತ್ರಿಕೋದ್ಯಮ / ಸಾರ್ವಜನಿಕ ಸಂಪರ್ಕ / ಸಮೂಹ ಸಂವಹನದಲ್ಲಿ ಡಿಪ್ಲೊಮಾ ಅಥವಾ ಪತ್ರಿಕೋದ್ಯಮ / ಸಾರ್ವಜನಿಕ ಸಂಪರ್ಕ / ಸಮೂಹ ಸಂವಹನದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಪದವಿ ಅಥವಾ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳು ಉಪ-ಸಂಪಾದಕರ ಸಮಿತಿಗೆ ಅರ್ಜಿ ಸಲ್ಲಿಸಬಹುದು.  ಮುದ್ರಣ ಮತ್ತು ದೃಶ್ಯ ಮಾಧ್ಯಮ ಅಥವಾ ಸುದ್ದಿ ಸಂಸ್ಥೆಗಳಲ್ಲಿ ಅಥವಾ ಸರಕಾರಿ/  ಅರೆ ಸರಕಾರಿ ಸಂಸ್ಥೆಗಳ ಪಿ  ಆರ್ ವಾರ್ತಾ ಇಲಾಖೆಗಳಲ್ಲಿ ಎರಡು ವರ್ಷಗಳ ಕೆಲಸದ ಅನುಭವ ಇರಬೇಕು. 


         ಯಾವುದೇ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಪಡೆದವರು, ವಿಷಯ ಸಂಪಾದನೆ ಮತ್ತು ವೀಡಿಯೊ ಸಂಪಾದನೆಯಲ್ಲಿ ಪರಿಣತಿಯನ್ನು ಹೊಂದಿರುವವರು ವಿಷಯ ಸಂಪಾದಕರ ಸಮಿತಿಗೆ ಅರ್ಜಿ ಸಲ್ಲಿಸಬಹುದು.  ವಿಡಿಯೊ ಎಡಿಟಿಂಗ್‌ನಲ್ಲಿ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು.  ಯಾವುದೇ ವಿಷಯದಲ್ಲಿ ಪದವಿ ಮತ್ತು ಪತ್ರಿಕೋದ್ಯಮ / ಸಾರ್ವಜನಿಕ ಸಂಪರ್ಕ / ಸಮೂಹ ಸಂವಹನದಲ್ಲಿ ಡಿಪ್ಲೊಮಾ ಅಥವಾ ಪತ್ರಿಕೋದ್ಯಮ / ಸಾರ್ವಜನಿಕ ಸಂಪರ್ಕ/ ಸಮೂಹ ಸಂವಹನದಲ್ಲಿ ಮಾನ್ಯತೆ ಪಡೆದಿರುವ ಅಭ್ಯರ್ಥಿಗಳು ಪತ್ರಿಕೆ, ದೃಶ್ಯ ಮಾಧ್ಯಮ, ಸುದ್ದಿ ಸಂಸ್ಥೆಗಳು, ಆನ್‌ಲೈನ್ ಮಾಧ್ಯಮ ಗಳಲ್ಲಿಯೋ ಸರಕ್ಕರಿ ಅಥವಾ ಅರೆ ಸರಕಾರಿ ಸಂಸ್ಥೆಗಳಲ್ಲಿ  ಪಿ ಆರ್ ವಾರ್ತಾ ಇಲಾಖೆಗಳಲ್ಲಿ ಒಂದು ವರ್ಷದ ಕೆಲಸದ ಅನುಭವವಿರುವವರಿಗೆ ಸಹಾಯಕ ಸಮಿತಿಗೆ ಅರ್ಜಿ ಸಲ್ಲಿಸಬಹುದು. ಮೂರು ಸಮಿತಿ  (ಪ್ಯಾನಲ್) ಗಳಿಗೂ ವಯಸ್ಸಿನ ಮಿತಿ 2023 ಜನವರಿ 1 ರಂದು 35 ವರ್ಷಗಳು ಮೀರಿರಬಾರದು.


         ಲಿಖಿತ ಪರೀಕ್ಷೆಯನ್ನು ಜಿಲ್ಲಾ ಆಧಾರದ ಮೇಲೆ ಮತ್ತು ಸಂದರ್ಶನವನ್ನು ವಲಯ ಆಧಾರದ ಮೇಲೆ ನಡೆಸಲಾಗುತ್ತದೆ.  ಸಮಿತಿಯ ಕಾಲಾವಧಿ ಒಂದು ವರ್ಷ.  ಉಪ- ಸಂಪಾದಕರು ಮತ್ತು ಮಾಹಿತಿ ಸಹಾಯಕ ಪ್ಯಾನೆಲ್‌ಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಅರ್ಹತೆಗಳನ್ನು ಹೊಂದಿದ್ದರೆ ವಿಷಯ ಸಂಪಾದಕ ಹುದ್ದೆಗೂ  ಅರ್ಜಿ ಸಲ್ಲಿಸಬಹುದು.  ಉಪ - ಸಂಪಾದಕರು ಮತ್ತು ಮಾಹಿತಿ ಸಹಾಯಕ ಪ್ಯಾನೆಲ್‌ಗಳಲ್ಲಿ ಯಾವುದಾದರೂ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದು. 

 ಹೆಚ್ಚಿನ ವಿವರಗಳಿಗಾಗಿ www.prd.kerala.gov.in  ಮತ್ತು www.careers.cdit.org  ಎಂಬ ವೆಬ್ಸೈಟ್ ನ್ನು ಸಂದರ್ಶಿಸಬಹುದು.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries