HEALTH TIPS

ಪೊಲೀಸರ ಕೈಗೆ ಸಿಕ್ಕಿಬಿದ್ದ 16 ಪಾನಮತ್ತ ಬಸ್​ ಚಾಲಕರಿಗೆ ವಿಚಿತ್ರ ಶಿಕ್ಷೆ! 1000 ಬಾರಿ ಬರೆದ ಬಳಿಕ ಸಿಕ್ತು ಜಾಮೀನು

 

               ತಿರುವನಂತಪುರಂ: ಪಾನಮತ್ತ ಸ್ಥಿತಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ 16 ಬಸ್ ಚಾಲಕರಿಗೆ 'ನಾವು ಮತ್ತೆ ಮದ್ಯಪಾನ ಮಾಡಿ ವಾಹನ ಚಲಾಯಿಸುವುದಿಲ್ಲ' ಎಂದು 1000 ಬಾರಿ ಬರೆಸಿರುವ ಘಟನೆ ಕೇರಳದಲ್ಲಿ ನಡೆದಿದೆ.

                      ತೃಪ್ಪುಣಿತ್ರ ಬೆಟ್ಟದ ಅರಮನೆ ಠಾಣಾ ಇನ್​ಸ್ಪೆಕ್ಟರ್​​ ವಿ.ಗೋಪಕುಮಾರ್ ಬೆಳಗಿನ ಜಾವ 5 ಗಂಟೆಯಿಂದ 9 ಗಂಟೆಯವರೆಗೆ ಹಠಾತ್ ಶೋಧ ನಡೆಸಿದರು.

ಹುಡುಕಾಟದಲ್ಲಿ ಇಬ್ಬರು ಕೆಎಸ್‌ಆರ್‌ಟಿಸಿ ಬಸ್ ಚಾಲಕರು, 10 ಖಾಸಗಿ ಬಸ್ ಚಾಲಕರು ಮತ್ತು 4 ಶಾಲಾ ಬಸ್ ಚಾಲಕರು ಪಾನಮತ್ತ ಸಿಕ್ಕಿಬಿದ್ದಿದ್ದಾರೆ.

                   ಸಿಕ್ಕಿಬಿದ್ದ ಚಾಲಕರಿಂದ 1000 ಬಾರಿ ಮತ್ತೊಮ್ಮೆ ತಪ್ಪು ಮಾಡುವುದಿಲ್ಲ ಎಂದು ಬರೆಸಿದ ಬಳಿಕ ಚಾಲಕರಿಗೆ ಜಾಮೀನು ನೀಡಲಾಯಿತು. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಾಲಕರು ನೆಲದ ಮೇಲೆ ಕುಳಿತು ಬರೆಯುತ್ತಿರುವುದನ್ನು ತೋರಿಸುತ್ತದೆ.

                     ಕಾರ್ಯಾಚರಣೆ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಪೊಲೀಸರು ಮತ್ತೊಂದು ಬಸ್​ ವ್ಯವಸ್ಥೆ ಮಾಡಿ ಕಳುಹಿಸಿದರು. ಶಾಲಾ ಬಸ್‌ನಲ್ಲಿದ್ದ ಮಕ್ಕಳನ್ನು ಪೊಲೀಸ್ ಇಲಾಖೆಯ ಮತ್ತೊಂದು ಬಸ್‌ಗೆ ಸ್ಥಳಾಂತರಿಸಲಾಗಿಯಿತು. ಸಿಕ್ಕಿಬಿದ್ದ ಇಬ್ಬರು ಚಾಲಕರ ಬಗ್ಗೆ ಕೆಎಸ್‌ಆರ್‌ಟಿಸಿಗೆ ವಿಶೇಷ ವರದಿ ಹೋಗಲಿದೆ.

                       ಘಟನೆಯ ಬಗ್ಗೆ ತಹಸೀಲ್ದಾರ್​​ ವಿ.ಗೋಪಕುಮಾರ್ ಮಾತನಾಡಿ, ಕೃತ್ಯದಲ್ಲಿ ಸಿಕ್ಕಿಬಿದ್ದ ಚಾಲಕರ ಪರವಾನಗಿ ರದ್ದುಪಡಿಸಲು ಇಲಾಖೆ ಮುಂದಾಗಿದೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries