ಪೆರ್ಲ: ಪೆರ್ಲ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ 18ನೇ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ, ನಾಟ್ಯ ಗುರುಗಳ ಷಷ್ಟ್ಯಬ್ದಿ ಕಾರ್ಯಕ್ರಮ ಹಾಗೂ ಮಕ್ಕಳ ಯಕ್ಷಗಾನ ಬಯಲಾಟ ತರಬೇತಿ ಕೇಂದ್ರ ಪರಿಸರದಲ್ಲಿ ನಡೆಯಿತು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೊಸ ರಂಗವೇದಿಕೆ ಉದ್ಘಾಟಿಸಿದರು. ಕರ್ನಾಟಕ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಅಧ್ಯಕ್ಷತೆ ವಹಿಸಿದರು.ದಿಗ್ವಿಜಯ ಗ್ರೂಪ್ ಕಂಪೆನಿ ಅಧ್ಯಕ್ಷ ಮಾವೆ ದಿನಕರ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ತೆಂಕುತಿಟ್ಟು ಹಿತರಕ್ಷಣಾ ವೇದಿಕೆ ಸುಳ್ಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆ ಅವರಿಗೆ ವಿಶೇಷ ಸಾಧನಾ ಪ್ರಶಸ್ತಿ, ಶಾಂತಾ ಕುಂಟಿನಿ ಅವರಿಗೆ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಲಾವಿದ ಮಂಗೇಶ್ ಭಟ್ ವಿಟ್ಲ ಅವರನ್ನು ಸನ್ಮಾನಿಸಲಾಯಿತು. ಯಕ್ಷಗುರು ಸಬ್ಬಣಕೋಡಿ ರಾಮ ಭಟ್ ಅವರ ಷಷ್ಟ್ಯಬ್ದಿ ಕಾರ್ಯಕ್ರಮದ ಪ್ರಾರಂಭದ ಅಂಗವಾಗಿ ಗುರುವಂದನೆ ಕಾರ್ಯಕ್ರಮ ನಡೆಯಿತು. ನಾಟ್ಯ ಗುರುಗಳು ಶಿಷ್ಯಂದಿರಾದ ಅನಿರುದ್ಧ ವಾಸಿಷ್ಠ ಶರ್ಮ ಉಡುಪಮೂಲೆ, ಶ್ರೀಹರಿ ಎಡನೀರು, ಕೀರ್ತನ್ ಮಹೇಶ್ ಕೀರಿಕ್ಕಾಡು, ಸ್ಮೃತಿ ಮಾಯಿಲೆಂಗಿ, ಶಿವಾನಂದ ಬಜಕೂಡ್ಲು, ಶಿವರಾಜ್ ಬಜಕೂಡ್ಲು, ಮನೋಜ್ ನಡುವಡ್ಕ, ಅಜಿತ್ ಪುತ್ತಿಗೆ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಿದರು.
ಯಕ್ಷಪ್ರಭಾ ಮಾಸ ಪತ್ರಿಕೆ ಸಂಪಾದಕ, ಕಲಾವಿದ ಕೆ.ಎಲ್.ಕುಂಡಂತಾಯ, ಎಡನೀರು ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ನಾಟ್ಯ ತರಬೇತಿ ಕೇಂದ್ರದ ಗೌರವಾಧ್ಯಕ್ಷ ಎನ್.ಕೆ.ರಾಮಚಂದ್ರ ಭಟ್, ಯಕ್ಷಗಾನ ಭಾಗವತ ಸತ್ಯನಾರಾಯಣ ಪುಣಿಂಚಿತ್ತಾಯ ಪೆರ್ಲ ಉಪಸ್ಥಿತರಿದ್ದರು. ಬೆಳಗ್ಗೆ ಶ್ರೀ ಮಹಾಗಣಪತಿ ಹವನ, ಭಜನೆ, ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ದುರ್ಗಾ ಪೂಜೆ ನೆರವೇರಿಸಲಾಯಿತು. ಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವರಂಗ, ಗಾನವೈಭವ, ಮಕ್ಕಳ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಯಕ್ಷ ದಿಗ್ಗಜರಿಗೆ ಪ್ರಶಸ್ತಿ:
ಪೆರ್ಲದ ಪಡ್ರೆ ಚಂದು ಸ್ವಾರಕ ಯಕ್ಷಗಾನ ತರಬೇತಿ ಕೇಂದ್ರದ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಬೆಳಗ್ಗೆ ಯಕ್ಷನೃತ್ಯ ರಂಗಪ್ರವೇಶ, ಪೂರ್ವರಂಗ, ರಂಗಪ್ರವೇಶ, ಮಧ್ಯಾಹ್ನ ಮೂಡುಬಿದಿರೆ ಧನಲಕ್ಷ್ಮಿ ಕ್ಯಾಶ್ಯೂ ಎಕ್ಸ್ ಪೆÇೀರ್ಟ್ ನ ಕೆ. ಶ್ರೀಪತಿ ಭಟ್ ಅಧ್ಯಕ್ಷತೆಯಲ್ಲಿ ಸಭೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.
ದಿ.ಬಲಿಪ ನಾರಾಯಣ ಭಾಗವತರಿಗೆ ಮರಣೋತ್ತರ ಚೇವಾರು ಕಾಮತ್ ಪ್ರಶಸ್ತಿ, ದಿ.ಬಲಿಪ ಪ್ರಸಾದ ಭಾಗವತರಿಗೆ ಮರಣೋತ್ತರ ಪಡ್ರೆ ಚಂದು ಪ್ರಶಸ್ತಿ, ಕುರಿಯ ಗಣಪತಿ ಶಾಸ್ತ್ರಿಗಳಿಗೆ ತೆಂಕಬೈಲು ಪ್ರಶಸ್ತಿ, ಬಲಿಪ ಶಿವಶಂಕರ ಭಟ್ ಅವರಿಗೆ ಅಡ್ಡಸ್ಥಳ ಪ್ರಶಸ್ತಿ, ಚೆನಪ್ಪ ಪೈವಳಿಕೆ ಅವರಿಗೆ ದೇವಕಾನ ಪ್ರಶಸ್ತಿ, ರಮೇಶ ಶೆಟ್ಟಿ ಬಾಯಾರು ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕೋಟೆ ರಾಮ ಭಟ್ ಅಭಿನಂದನಾ ಭಾಷಣ ಮಾಡಿದರು.ಹವ್ಯಾಸಿ ಯಕ್ಷಗಾನ ಕಲಾವಿದ ಎಸ್.ಮಾಧವ ಇಡಿಯಡ್ಕ ಅವರನ್ನು ಸನ್ಮಾನಿಸಲಾಯಿತು.ಪೆರ್ಲ ಹೈಸ್ಕೂಲ್ ಮುಖ್ಯ ಶಿಕ್ಷಕ ರಾಜೇಂದ್ರ ಬಿ., ಕರ್ನಾಟಕ ಬ್ಯಾಂಕ್ ನ ಜಗದೀಶ್ ಬಲ್ಲಾಳ್, ಎನ್.ಕೆ.ರಾಮಚಂದ್ರ ಭಟ್ ಪನೆಯಾಲ, ಸತ್ಯ ಶಾಂತಾ ಪ್ರತಿಷ್ಠಾನದ ಅಧ್ಯಕ್ಷೆ ಶಾಂತಾ ಕುಂಟಿನಿ ಮತ್ತಿತರರು ಉಪಸ್ಥಿತರಿದ್ದರು.ಸಬ್ಬಣಕೋಡಿ ರಾಮ ಭಟ್ ಸ್ವಾಗತಿಸಿದರು.ಉದಯಕುಮಾರ್ ಸ್ವರ್ಗ, ರಾಮ ಮಾಸ್ತರ್ ಕೊಜಪೆ ನಿರೂಪಿಸಿದರು.