ನವದೆಹಲಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ್ದು, ಆ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ದೆಹಲಿಯಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ನೀಡಿದ್ದ 115 ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 4 ವಿಕೆಟ್ ಕಳೆದುಕೊಂಡು 118ರನ್ ಗಳಿಸಿ ಗುರಿ ಮುಟ್ಟಿತು.
ಆ ಮೂಲಕ 6 ವಿಕೆಟ್ ಗಳ ಅಂತರದಲ್ಲಿ 2ನೇಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದೆ. ಈ ಗೆಲುವಿನ ಮೂಲಕ ಭಾರತ ತಂಡ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಭಾರತಕ್ಕೂ ಆರಂಭಿಕ ಆಘಾತ
ಆಸ್ಟ್ರೇಲಿಯಾ ನೀಡಿದ್ದ 115 ರನ್ ಗಳ ಸಾಧಾರಣ ಗುರಿ ಬೆನ್ನು ಹತ್ತಿದ್ದ ಭಾರತ
ಕೂಡ ಆರಂಭಿಕ ಆಘಾತ ಎದುರಿಸಿತ್ತು. ಆರಂಭಿಕ ಆಟಗಾರ ರಾಹುಲ್ ಕೇವಲ 1 ರನ್ ಗಳಿ ಲಿಆನ್
ಬೌಲಿಂಗ್ ನಲ್ಲಿ ಔಟಾಗಿದ್ದರು. ಈ ಹಂತದಲ್ಲಿ ಪೂಜಾರ ಜೊತೆಗೂಡಿದ ರೋಹಿತ್ ಶರ್ಮಾ
ತಂಡವನನ್ನು ಆರಂಭಿಕ ಆಘಾತದಿಂದ ಹೊರತರುವ ಪ್ರಯತ್ನ ಮಾಡಿದರು. ರೋಹಿತ್ ಶರ್ಮಾ-ಪೂಜಾರ
ಜೋಡಿ ನಿಧಾನವಾಗಿ ರನ್ ಗಳಿಸಿ ತಂಡಕ್ಕೆ ಆಸರೆಯಾಗೂವ ಸೂಚನೆ ನೀಡಿದರಾದರೂ 31 ರನ್
ಗಳಿಸಿದ್ದ ವೇಳೆ ರೋಹಿತ್ ಶರ್ಮಾ ಅನಗತ್ಯವಾಗಿ ರನೌಟ್ ಗೆ ಬಲಿಯಾದರು. ಬಳಿಕ ಪೂಜಾರಾ
ಜೊತೆಗೂಡಿದ ವಿರಾಟ್ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದ 25 ಸಾವಿರ ರನ್
ಗಳಿಸಿದ ದಾಖಲೆ ಮಾಡಿದರು.
ಆದರೆ ಅವರೂ ಕೂಡ 20 ರನ್ ಗಳಿಸಿ ಮರ್ಫಿ ಬೌಲಿಂಗ್ ಔಟಾದರು. ಬಳಿಕ ಪೂಜಾರ ಜೊತೆಗೂಡಿದ ಶ್ರೇಯಸ್ ಅಯ್ಯರ್ 12 ಗಳಿಸಿ ಔಟಾದರೆ, ಪೂಜಾರ ಜೊತೆಗೂಡಿದ ಉದಯೋನ್ಮುಖ ಆಟಗಾರ ಶ್ರೀಕಾರ್ ಭರತ್ 23 ರನ್ ಗಳಿಸಿ ಗೆಲುವಿನ ಔಪಚಾರಿಕತೆ ಮುಗಿಸಿದರು. ಪೂಜಾರ 31 ರನ್ ಗಳಿಸಿ ಅಜೇಯರಾಗಿ ಉಳಿದರು.
ಆಸ್ಟ್ರೇಲಿಯಾ ಪರ ನಾಥನ್ ಲಯಾನ್ 2 ವಿಕೆಟ್ ಪಡೆದರೆ, ಮರ್ಫಿ 1 ವಿಕೆಟ್ ಪಡೆದರು.