ತಿರುವನಂತಪುರಂ: ರಾಜ್ಯದಲ್ಲಿ ಕುಡಿಯುವ ನೀರಿನ ಬಲೆ ಏರಿಕೆಯಾಗಲಿದೆ. ಬೆಲೆ ಏರಿಕೆ ಸಂಬಂಧ ರಾಜ್ಯ ಸರ್ಕಾರದ ಆದೇಶ ಜಾರಿಗೆ ಬಂದಿದೆ.
ರಾಜ್ಯ ಸರ್ಕಾರ ಎಚ್ಚರಿಕೆ ನೀಡದೆ ಬೆಲೆ ಏರಿಸಿದೆ. ಪ್ರತಿ ಲೀಟರ್‍ಗೆ ಒಂದು ಪೈಸೆ ಹೆಚ್ಚುವರಿ ಏರಿಕೆಯಾಗಲಿದೆ. ಗೃಹ ಬಳಕೆದಾರರು ಇನ್ನು ಮುಂದೆ 1,000 ಲೀಟರ್‍ಗೆ 10 ರೂ. ಪಾವತಿಸಬೇಕು. ಪರಿಷ್ಕøತ ಬೆಲೆ ಏರಿಕೆ ಪ್ರಕಾರ, ಸಣ್ಣ ಕುಟುಂಬಕ್ಕೆ 200 ರಿಂದ 400 ರೂ. ಹೆಚ್ಚುವರಿ ಮೊತ್ತ ಬೀಳಲಿದೆ. ಬಿಪಿಎಲ್ ವರ್ಗಕ್ಕೆ ಹೆಚ್ಚಳ ಅನ್ವಯಿಸುವುದಿಲ್ಲ.
ರಾಜ್ಯದಲ್ಲಿ 27 ಲಕ್ಷ ಪೈಪ್‍ಲೈನ್ ಸಂಪರ್ಕಗಳಿವೆ. ಈ ಪೈಕಿ 22 ಲಕ್ಷ ಮಂದಿ ಗೃಹ ಬಳಕೆದಾರರು. ಈ ಮೂಲಕ ಹೆಚ್ಚುವರಿಯಾಗಿ 250 ಕೋಟಿ ಸಂಗ್ರಹಿಸಬಹುದು ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ. ಜಲ ಪ್ರಾಧಿಕಾರದ ಆರ್ಥಿಕ ನಷ್ಟವನ್ನು ಪರಿಹರಿಸುವುದು ಉದ್ದೇಶವಾಗಿದೆ ಎಂಬುದು ವಿವರಣೆ.
ಬಜೆಟ್‍ನಲ್ಲಿ ತೆರಿಗೆ ಮತ್ತು ಸುಂಕವನ್ನು ಹೆಚ್ಚಿಸಿದ ನಂತರ ರಾಜ್ಯ ಸರ್ಕಾರ ನೀರಿನ ಹೆಚ್ಚಿಸಿದೆ. ಇಂಧನ ಬೆಲೆ ಏರಿಕೆ ಸೇರಿದಂತೆ ಸರ್ಕಾರದ ಕ್ರಮಗಳ ವಿರುದ್ಧ ಜನರ ಪ್ರತಿರೋಧ ಪ್ರಬಲವಾಗುತ್ತಿದೆ.
ರಾಜ್ಯದಲ್ಲಿ ಬಿಸಿಯೇರಿ ಕುದಿಯ ತೊಡಗಿದ ನೀರು: ನೀರಿನ ಬೆಲೆ ಹೆಚ್ಚಿಸಿದ ಸರ್ಕಾರ: 200 ರಿಂದ 400 ರೂ. ಹೆಚ್ಚಳ
0
ಫೆಬ್ರವರಿ 06, 2023