ಪೆರ್ಲ: ಬೆಂಗಳೂರಿನ ಕೇಂದ್ರೀಯ ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2021ನೇ ಸಾಲಿನ ವಿವಿಧ ದತ್ತಿಗಾಗಿ 49 ವಿಭಾಗಕ್ಕೆ ಕೃತಿಗಳ ಆಯ್ಕೆ ಮಾಡಲಾಗಿದ್ದು ಇದರಲ್ಲಿ ನಾಲ್ಕು ಮಂದಿ ಗಡಿನಾಡು ಕಾಸರಗೋಡಿನ ಸಾಹಿತಿಗಳ ಕೃತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರೀಯ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಸರಗೋಡಿನ ಕವಯತ್ರಿ, ಸಾಹಿತಿ ರಾಜಶ್ರೀ ಟಿ ರೈ.ಪೆರ್ಲ ಅವರ ಸಂಶೋಧನಾ ಕೃತಿ "ತುಳುನಾಡಿನ ಮೂರಿಗಳ ಆರಾಧನೆ", ಪತ್ರಕರ್ತ ಕವಿ ವಿಕ್ರಂ ಕಾಂತಿಕೆರೆ ಅವರ ಅನುವಾದ ಕೃತಿ "ಕಾವೇರಿ ತೀರದ ಪಯಣ", ಕವಯತ್ರಿ ಸ್ನೇಹಲತಾ ದಿವಾಕರ್ ಕುಂಬ್ಳೆ ಅವರ ಕಥಾಸಂಕಲನ "ಆಮೆ", ಸತ್ಯವತಿ ಎಸ್ ಭಟ್ ಕೊಳಚಪ್ಪು ಅವರ ಮಕ್ಕಳ ಸಾಹಿತ್ಯ ಕೃತಿ " ನವಿಲುಗರಿ" ಪ್ರಶಸ್ತಿಗೆ ಆಯ್ಕೆಯಾಗಿರುವುದಾಗಿ ಘೋಷಿಸಲಾಗಿದೆ.
2021ರ ಜನವರಿಯಿಂದ ಡಿಸೆಂಬರ್ ಅಂತ್ಯದ ವರೆಗೆ ಪ್ರಕಟಿತ ಕೃತಿಗಳನ್ನು ವಿವಿಧ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕೃತಿ ಪ್ರಶಸ್ತಿ ನಗದು ವಿವಿಧ ವಿಭಾಗಕ್ಕೆ ಹೊಂದಿಕೊಂಡು ಗರಿಷ್ಠ 10,000 ರೂಗಳವರೆಗೆ ನೀಡಲಾಗುತ್ತಿದ್ದು ಮಾರ್ಚ್ 12ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಶ್ರೀ ಕೃಷ್ಣ ರಾಜ ಪರಿಷತ್ತಿನ ಆವರಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ 2021ನೇ ಸಾಲಿನ ದತ್ತಿ ಪ್ರಶಸ್ತಿಗೆ ಕಾಸರಗೋಡಿನ ನಾಲ್ಕು ಕವಿಗಳ ಕೃತಿ ಆಯ್ಕೆ
0
ಫೆಬ್ರವರಿ 17, 2023