ನವದೆಹಲಿ: ಒಂದನೇ ತರಗತಿ ಪ್ರವೇಶದ ಪ್ರಾಯಮಿತಿ ಆರು ವರ್ಷ ಮಾಡಬೇಕು ಎಂಬ ಕುರಿತು ವಿವರಣೆ ಕೇಳಿದ್ದರೂ ಕೇರಳ ಇನ್ನೂ ಸ್ಪಂದಿಸಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ರಾಜ್ಯ ಶಿಕ್ಷಣ ಇಲಾಖೆ ಸಚಿವ ವಿ. ಶಿವನಕುಟ್ಟಿ ಪ್ರತಿಕ್ರಿಯಿಸುವಂತೆ ತಿಳಿಸಿದ್ದರೂ ಇದನ್ನು ಶಿಕ್ಷಣ ಸಚಿವಾಲಯವೇ ತಿರಸ್ಕರಿಸಿದೆ ಎನ್ನಲಾಗಿದೆ.
ಒಂದನೇ ತರಗತಿಗೆ ಪ್ರವೇಶಕ್ಕೆ ಸಂಬಂಧಿಸಿದಂತೆ 2021ರಲ್ಲಿ ಆಯಾ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಆದರೆ ಕೇರಳ ಸೇರಿದಂತೆ ಎಂಟು ರಾಜ್ಯಗಳು ಈ ವಿಷಯಕ್ಕೆ ಸ್ಪಂದಿಸದ ಕಾರಣ ಸೂಚನೆಗಳನ್ನು ಮತ್ತೆ ಪುನರಾವರ್ತಿಸಲಾಗಿದೆ. ಈ ವರ್ಷ ಫೆಬ್ರವರಿ 9 ರಂದು ಕೇಂದ್ರವು ಸುತ್ತೋಲೆಯನ್ನು ಮರು ಹೊರಡಿಸಿದೆ.
ಕೇಂದ್ರ ಸರ್ಕಾರದ ನಿರ್ದೇಶನದ ಪ್ರಕಾರ ದೇಶದಲ್ಲಿ ಒಂದನೇ ತರಗತಿ ಪ್ರವೇಶಕ್ಕೆ ಕನಿಷ್ಠ ವಯೋಮಿತಿ ಆರು ವರ್ಷ ಇರಬೇಕು. ಇದನ್ನು ಕಡ್ಡಾಯಗೊಳಿಸುವಂತೆ ರಾಜ್ಯಗಳಿಗೆ ಕಳುಹಿಸಿರುವ ಪತ್ರದಲ್ಲಿಯೂ ಕೋರಲಾಗಿದೆ. ಪ್ರಿಸ್ಕೂಲ್ ಶಿಕ್ಷಣದಲ್ಲಿ ಡಿಪೆÇ್ಲಮಾ ಕೋರ್ಸ್ ಅನ್ನು ಪೂರ್ವ ಪ್ರಾಥಮಿಕ ಹಂತದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಬೇಕು ಮತ್ತು ಅನುಷ್ಠಾನಗೊಳಿಸಬೇಕು ಎಂದು ಕೇಂದ್ರವು ಸೂಚಿಸಿದೆ.
ಕೇಂದ್ರೀಯ ಶಾಲೆಗಳು ಮತ್ತು ಕೆಲವು ರಾಜ್ಯಗಳು ಕಳೆದ ವರ್ಷದಿಂದ ಒಂದನೇ ತರಗತಿ ಪ್ರವೇಶಕ್ಕಾಗಿ ಆರು ವರ್ಷಗಳ ಮಾನದಂಡವನ್ನು ಜಾರಿಗೆ ತಂದಿವೆ. ಆರಂಭದಲ್ಲಿ ಕೇರಳ ಸೇರಿದಂತೆ ಕೆಲ ರಾಜ್ಯಗಳು ಇದನ್ನು ಜಾರಿಗೆ ತರಲು ನಿರ್ಧರಿಸಿತ್ತಾದರೂ ನಂತರ ಅದರಿಂದ ಹಿಂದೆ ಸರಿದಿದ್ದವು. ಇದರೊಂದಿಗೆ ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿಯನ್ನು ಕಡ್ಡಾಯಗೊಳಿಸುವಂತೆ ಕೇಂದ್ರವು ರಾಜ್ಯಗಳಿಗೆ ಪತ್ರ ರವಾನಿಸಿದೆ.
ಮೊದಲ ಮೂರು ವರ್ಷ ಪ್ರಿ ಪ್ರೈಮರಿ (ನರ್ಸರಿ, ಎಲ್ ಕೆಜಿ, ಯುಕೆಜಿ) ಮತ್ತು ಮುಂದಿನ ಎರಡು ವರ್ಷಗಳು ಒಂದು ಮತ್ತು ಎರಡನೆ ತರಗತಿಗಳಲ್ಲಿ ಇರುವಂತೆ ಕೇಂದ್ರ ಸರ್ಕಾರ ಈ ಹಿಂದೆ ಸೂಚಿಸಿತ್ತು. ಎಲ್‍ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಪರಿಚಯಿಸಲು ಎಸ್‍ಸಿಇಆರ್‍ಟಿ ಡಿಪೆÇ್ಲಮಾ ಇನ್ ಪ್ರಿಸ್ಕೂಲ್ ಶಿಕ್ಷಣ ಕೋರ್ಸ್ ಅನ್ನು ವಿನ್ಯಾಸಗೊಳಿಸಬೇಕು ಎಂದು ಕೇಂದ್ರವು ಸೂಚಿಸಿದೆ.
ಮತ್ತೊಂದೆಡೆ ರಾಜ್ಯ ಶಿಕ್ಷಣ ಸಚಿವ ವಿ. ಶಿವಂಕುಟ್ಟಿ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರದ ಈ ಪ್ರಸ್ತಾವನೆಯನ್ನು ತಿರಸ್ಕರಿಸುವುದಿಲ್ಲ. ರಾಜ್ಯದಲ್ಲಿ ಸಮಾಲೋಚನೆಯ ನಂತರವೇ ಇದನ್ನು ಜಾರಿಗೊಳಿಸಲಾಗುವುದು. ಕೇಂದ್ರದ ನಿರ್ದೇಶನ ಜಾರಿಯಾಗಬೇಕಾದರೆ ಪಠ್ಯಪುಸ್ತಕಗಳಲ್ಲೂ ಬದಲಾವಣೆ ಆಗಬೇಕು. ಕೇರಳದ ಪರಿಸ್ಥಿತಿಯನ್ನೂ ಪರಿಗಣಿಸಲಾಗುವುದು. ಈ ಕುರಿತು ತಜ್ಞರ ಸಮಿತಿ ಹಾಗೂ ಶಿಕ್ಷಕರ ಪಾಲಕರ ಸಂಘಟನೆಗಳ ಜತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.
ಒಂದನೇ ತರಗತಿ ಪ್ರವೇಶದ ವಯೋಮಾನ ಆರಕ್ಕೆ ನಿಗದಿ: 2021 ರಲ್ಲಿ ನೀಡಿದ್ದ ಸೂಚನೆಗೆ ಕೇರಳ ಸೇರಿದಂತೆ ಎಂಟು ರಾಜ್ಯಗಳು ಪ್ರತಿಕ್ರಿಯಿಸಲಿಲ್ಲ: ಕೇಂದ್ರ ಸರ್ಕಾರ
0
ಫೆಬ್ರವರಿ 23, 2023