ಕುಂಬಳೆ: ಅಧ್ಯಯನವು ವ್ಯಕ್ತಿತ್ವ ವಿಕಾಸದ ನಿರಂತರ ಹಾದಿಯಾಗಿದೆ. ಕಲಿಕೆಯು ಬದುಕಿನ ದಾರಿದೀಪ, ಗುರು ಹಿರಿಯರು, ಹೆತ್ತವರ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಮರ್ಪಣಾಭಾವ ತುಂಬಿರಬೇಕು ಎಂದು ನಿವೃತ್ತ ವಾಯು ಸೇನಾಕಾರಿ ಪ್ರಕಾಶ್ ಭಟ್ ಕುಕ್ಕಿಲ ನುಡಿದರು.
ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಪೂರ್ವಭಾವಿಯಾಗಿ ಕಲಿಕಾ ಸಿದ್ಧತೆಯ ವಿವಿಧ ಆಯಾಮಗಳ ಕುರಿತು ಧರ್ಮತ್ತಡ್ಕದ ಶ್ರೀದುರ್ಗಾಪರಮೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿ ತರಗತಿಯನ್ನು ನಡೆಸಿ ಅವರು ಮಾತನಾಡಿದರು.
ಜೊತೆಗೆ ಹತ್ತನೇ ತರಗತಿಯ ಕಲಿಕೆಯ ನಂತರ ಮುಂದಿನ ಶಿಕ್ಷಣದ ವಿವಿಧ ಸಾಧ್ಯತೆಯ ಬಗ್ಗೆಯೂ ಮಾಹಿತಿಯನ್ನು ನೀಡಿದರು. ಸುಮಾರು ಇನ್ನೂರಕ್ಕೂ ಅಕ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಶಾಲಾ ವ್ಯವಸ್ಥಾಪಕ ಎನ್. ಶಂಕರನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯೋಪಾಧ್ಯಾಯ ಇ. ಎಚ್. ಗೋವಿಂದ ಭಟ್ ಸ್ವಾಗತಿಸಿ, ಅಭ್ಯಾಗತರನ್ನು ಪರಿಚಯಿಸಿದರು. ಅಧ್ಯಾಪಕ ಪ್ರಶಾಂತ ಹೊಳ್ಳ ಎನ್. ಕಾರ್ಯಕ್ರಮ ನಿರೂಪಿಸಿದರು. ಸೂರ್ಯನಾರಾಯಣ ಭಟ್ ವಂದಿಸಿದರು.
ಇ. ಕೇಶವ ಪ್ರಸಾದ್ ಕಾರ್ಯಕ್ರಮವನ್ನು ಸಂಯೋಜಿಸಿದರು. ಶಿವಪ್ರಸಾದ್ ಸಿ. ಹಾಗೂ ದಿನೇಶ್ ಕೆ. ಸಹಕರಿಸಿದರು. ಶಾಲಾ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
ಧರ್ಮತ್ತಡ್ಕದಲ್ಲಿ ಪರೀಕ್ಷೆ - ನಿರೀಕ್ಷೆ 2022-23
0
ಫೆಬ್ರವರಿ 10, 2023