ಕುಂಬಳೆ: ಜಿಲ್ಲಾ ಉದ್ಯೋಗ ವಿನಿಮಯ ಮತ್ತು ಉದ್ಯೋಗ ಕೇಂದ್ರದ ಆಶ್ರಯದಲ್ಲಿ ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಿಯುಕ್ತಿ 2022 ಮಿನಿ ಉದ್ಯೋಗ ಮೇಳ ನಡೆಯಿತು.
ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್ ಉದ್ಘಾಟಿಸಿದರು. ಉಪಾಧ್ಯಕ್ಷ ಅಬ್ದುಲ್ ನಾಸರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀಮಾ ಟೀಚರ್ ಉಪಸ್ಥಿತರಿದ್ದರು.
ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯೆ ಜಮೀಲಾ ಸಿದ್ದೀಕ್ ದಂಡೆಗೋಳಿ, ಕಾಸರಗೋಡು ಬ್ಲಾಕ್ ಪಂಚಾಯತಿ ಸದಸ್ಯೆ ಪ್ರೇಮಾ ಶೆಟ್ಟಿ, ಪಂಚಾಯತಿ ಅಭಿವೃದ್ಧಿ ಕಾರ್ಯಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಸಾಬೂರ, ಪಂಚಾಯತಿ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಹ್ಮಾನ್, ಕುಂಬಳೆ ಗ್ರಾಮ ಪಂಚಾಯತಿ ಸದಸ್ಯೆ ಪ್ರೇಮಾವತಿ, ಜಿಎಚ್ ಎಸ್ ಎಸ್ ಕುಂಬಳೆಯ ಪ್ರಾಂಶುಪಾಲ ಕೆ.ದಿವಾಕರನ್, ಮುಖ್ಯೋಪಾಧ್ಯಾಯಿನಿ ಡಿ.ಎಸ್.ಅಂಜು, ಪಿಟಿಎ ಅಧ್ಯಕ್ಷ ಎ.ಕೆ.ಆರೀಫ್, ಎನ್ ಎಸ್ ಎಸ್ ಸಂಯೋಜಕ ಸುಮೇಶ್ ಕತ್ತಿಲ್ ಮಾತನಾಡಿದರು. ಕಾಸರಗೋಡು ಜಿಲ್ಲಾ ಉದ್ಯೋಗಾಧಿಕಾರಿ ಕೆ.ಸಲೀಂ ಸ್ವಾಗತಿಸಿದರು. ಸಹಉದ್ಯೋಗಾಧಿಕಾರಿ ಪಿ.ಪವಿತ್ರನ್ ವಂದಿಸಿದರು.
ಉದ್ಯೋಗ ಮೇಳದಲ್ಲಿ 520 ಅಭ್ಯರ್ಥಿಗಳು ಮತ್ತು 22 ಉದ್ಯೋಗದಾತರು ಭಾಗವಹಿಸಿದ್ದರು, ವಿವಿಧ ವಿಭಾಗಗಳಲ್ಲಿ 98 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಯಿತು. ಮತ್ತು 323 ಅಭ್ಯರ್ಥಿಗಳನ್ನು ನೇಮಕಾತಿಗಾಗಿ ಶಾರ್ಟ್‍ಲಿಸ್ಟ್ ಮಾಡಲಾಗಿದೆ.
ಕುಂಬಳೆಯಲ್ಲಿ ನಿಯುಕ್ತಿ 2022 ಮಿನಿ ಉದ್ಯೋಗ ಮೇಳ: 323 ಮಂದಿ ಶಾರ್ಟ್‍ಲಿಸ್ಟ್ ಗೆ
0
ಫೆಬ್ರವರಿ 06, 2023
Tags