ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳಿಗೆ 2023 ಅತ್ಯಂತ ಕೆಟ್ಟ ವರ್ಷವಾಗುವ ಎಲ್ಲಾ ಸೂಚನೆಗಳಿವೆ. ಈ ವರ್ಷದ ಮೊದಲ ಎರಡು ತಿಂಗಳುಗಳಲ್ಲಿಯೇ 417 ಕಂಪೆನಿಗಳು ಜಾಗತಿಕವಾಗಿ 1.2 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಕೈಬಿಟ್ಟಿವೆ.
ಕಳೆದ ವರ್ಷ ದೊಡ್ಡ ತಂತ್ರಜ್ಞಾನ ಕಂಪೆನಿಗಳಿಂದ ಸ್ಟಾರ್ಟ್ ಅಪ್‌ಗಳ ತನಕ, 1,046 ಕಂಪೆನಿಗಳು 1.61 ಲಕ್ಷ ಉದ್ಯೋಗಿಗಳನ್ನು ಕೈಬಿಟ್ಟಿವೆ.
ಆದೆ ಈ ವರ್ಷ ಜನವರಿ ತಿಂಗಳಿನಲ್ಲಿಯೇ ಜಗತ್ತಿನಾದ್ಯಂತ ಸುಮಾರು ಒಂದು ಲಕ್ಷ ಟೆಕ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಲೇಆಫ್ ನಡೆಸಿದ ಸಂಸ್ಥೆಗಳಲ್ಲಿ ದೈತ್ಯ ಟೆಕ್ ಕಂಪೆನಿಗಳಾದ ಮೈಕ್ರೊಸಾಫ್ಟ್, ಗೂಗಲ್, ಸೇಲ್ಸ್‌ಫೋರ್ಸ್ ಮತ್ತು ಅಮೆಝಾನ್ ಸೇರಿವೆ.
2022 ರಿಂದ ಈ ವರ್ಷದ ಫೆಬ್ರವರಿ ತನಕ ಸುಮಾರು 3 ಲಕ್ಷ ಟೆಕ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.
ಇನ್ನೂ ಹಲವು ಕಂಪೆನಿಗಳು ಲೇಆಫ್ ನಡೆಸುವ ಸಾಧ್ಯತೆಯಿರುವುದರಿಂದ ಈ ವರ್ಷ್ ಟೆಕ್ ಉದ್ಯೋಗಿಗಳಿಗೆ ಅನಿಶ್ಚಿತತೆಯ ವಾತಾವರಣವಿರಲಿದೆ ಎಂದೇ ಹೇಳಲಾಗುತ್ತಿದೆ.