ಕಾಸರಗೋಡು: ಕೇರಳ ಕೃಷಿ ವಿಶ್ವವಿದ್ಯಾಲಯ ಉತ್ತರ ವಲಯ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರವು ಆಯೋಜಿಸಿರುವ ಪಿಲಿಕ್ಕೋಡ್ ಆರ್‍ಎಆರ್‍ಎಸ್ ಫಾರ್ಮ್ ಕಾರ್ನಿವಲ್ 'ಸಫಲಂ 2023'ಕಾರ್ಯಕ್ರಮವನ್ನು ಫೆಬ್ರವರಿ 20 ರಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣ ಇಲಾಖೆ ಸಚಿವ ಪಿ. ಪ್ರಸಾದ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶಾಸಕರಾದ ಎಂ. ರಾಜಗೋಪಾಲನ್, ಇ. ಚಂದ್ರಶೇಖರನ್, ಟಿ. ಐ. ಮಧುಸೂದನನ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಮತ್ತಿತರರು ಭಾಗವಹಿಸುವರು. ಫೆಬ್ರವರಿ 20 ರಿಂದ ಮಾರ್ಚ್ 1 ರವರೆಗೆ ಸಫಲಂ ಕಾರ್ನಿವಲ್ ನಡೆಯಲಿರುವುದು.
ವಿವಿಧ ಬೆಳೆಗಳ ಬಯೋಪಾರ್ಕ್‍ಗಳು, ವಿಜ್ಞಾನ ಮತ್ತು ತಂತ್ರಜ್ಞಾನದ ಕೃಷಿ ಪ್ರಾತ್ಯಕ್ಷಿಕೆ, ವಿವಿಧ ತರಬೇತಿಗಳು ಮತ್ತು ಕೃಷಿ ವಿಚಾರ ಸಂಕಿರಣ, ಬಯೋಫಾರ್ಮಸಿ, ಹೆಲ್ತ್ ಕಾರ್ನರ್, ಸೆಲ್ಫಿ ಪಾಯಿಂಟ್, ಮನರಂಜನಾ ಕಾರ್ನರ್, ವಿವಿಧ ಮೌಲ್ಯವರ್ಧಿತ ಉತ್ಪನ್ನಗಳ ಮಾರುಕಟ್ಟೆ, ಸಾವಯವ ಉತ್ಪನ್ನಗಳು, ಬೀಜ ಬಿತ್ತುವ ಉಪಕರಣಗಳು ಮತ್ತು ಇತರ ವಾಣಿಜ್ಯ ಉತ್ಪನ್ನಗಳ ಮಾರಾಟ, ಕೃಷಿ ಮಹೋತ್ಸವದ ಅಂಗವಾಗಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರದರ್ಶನ ಗೊಳ್ಳಲಿದೆ.
ಆರ್‍ಎಂಆರ್‍ಎಸ್ ಫಾರ್ಮ್ ಕಾರ್ನಿವಲ್ 'ಸಫಲಂ-2023'-ಫೆ. 20ರಂದು ಮುಖ್ಯಮಂತ್ರಿ ಉದ್ಘಾಟನೆ
0
ಫೆಬ್ರವರಿ 17, 2023
Tags