ಕಾಸರಗೋಡು: ಜಿಲ್ಲೆಯ ಅಂಗೀಕೃತ ಶಿಶುಪಾಲನಾ ಸಂಸ್ಥೆಗಳಲ್ಲಿ ವಾಸಿಸುತ್ತಿರುವ ಮಕ್ಕಳನ್ನು ಬೇಸಿಗೆ ರಜೆಯಲ್ಲಿ ಪೋಷಿಸಲು ಆಸಕ್ತಿ ಹೊಂದಿರುವ ಪೋಷಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಶಿಶು ಸಂರಕ್ಷಣಾ ಸಂಸ್ಥೆಗಳಲ್ಲಿ ವಾಸಿಸುತ್ತಿರುವ ಮಕ್ಕಳಿಗೆ ರಜೆಯ ಅವಧಿಯಲ್ಲಿ ಕುಟುಂಬ ಪರಿಸರದಲ್ಲಿ ಸುರಕ್ಷಿತವಾಗಿ ಬೆಳೆಯುವ ಪರಿಸ್ಥಿತಿಗಳನ್ನು ಸೃಷ್ಟಿಸುವುದು ಯೋಜನೆಯ ಗುರಿಯಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾಡಳಿತ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಎಂಬಿವುಗಳ ಜಂಟಿ ಆಶ್ರಯದಲ್ಲಿ ವೆಕೇಶನ್ ಫಾಸ್ಟರ್ ಕೇರ್ ಯೋಜನೆ ಅನುಷ್ಠಾನಗೊಳಿಸಲಾಗುವುದು. ಮಕ್ಕಳ ಕಲ್ಯಾಣ ಸಮಿತಿಯ ಉಸ್ತುವಾರಿಯಲ್ಲಿರುವ ಸಂಸ್ಥೆಯಲ್ಲಿ ವಾಸಿಸುವ ಆರು ವರ್ಷಕ್ಕಿಂತ ಮೇಲ್ಪಟ್ಟ ಬಾಲಕರು ಮತ್ತು ಬಾಲಕಿಯರನ್ನು ಈ ಯೋಜನೆಯ ಪ್ರಕಾರ ಶಾಲಾ ರಜಾ ದಿನಗಳಾದ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಸೂಕ್ತವಾದ ಪೋಷಕರ ಮನೆಯಲ್ಲಿ ಬೆಳೆಸುವ ಅವಕಾಶ ನೀಡಲಾಗುತ್ತದೆ. ಮಕ್ಕಳನ್ನು ಸಂರಕ್ಷಿಸಲು ಸಿದ್ಧರಿರುವ 35 ವರ್ಷ ಮೇಲ್ಪಟ್ಟ ದಂಪತಿಗಳು ಈ ಯೋಜನೆಯ ಪ್ರಕಾರ ಅಪೇಕ್ಷಿಸಬಹುದು. ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಸಂರಕ್ಷಿಸಲು ಸಿದ್ಧರಿರುವ ಕುಟುಂಬಗಳಿಗೆ ಆದ್ಯತೆ. ಆಸಕ್ತಿ ಇರುವವರು ಕಾಸರಗೋಡು ವಿದ್ಯಾನಗರ ಸಿವಿಲ್ ಸ್ಟೇಷನ್ ನ 2ನೇ ಮಹಡಿಯಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದ ಕಛೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಂಬಂಧ ಪಟ್ಟ ಜಿಲ್ಲಾ ಶಿಶು ಸಂರಕ್ಷಣಾ ಘಟಕದ ಆಫೀಸ್ ಸಿವಿಲ್ ಸ್ಟೇಷನ್ ಡಿ-ಬ್ಲಾಕ್ 2ನೇ ಮಹಡಿ ವಿದ್ಯಾನಗರ ಕಾಸರಗೋಡು ಪಿನ್-671 123. ದೂರವಾಣಿ 04994 256990.
ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಸ್ನೇಹದ ನೆರಳು: ಪೊಕೇಶನ್ ಪೋಸ್ಟರ್ ಕೇರ್ 2023: ಅರ್ಜಿ ಆಹ್ವಾನ
0
ಫೆಬ್ರವರಿ 10, 2023