ಕಾಸರಗೋಡು: ಕೇರಳ ರಾಜ್ಯ ಲಾಟರಿ ಏಜೆಂಟರು ಮತ್ತು ಮಾರಾಟಗಾರರ ಕಲ್ಯಾಣ ಮಂಡಳಿ ಸದಸ್ಯರಾದ ಬೀದಿ ಲಾಟರಿ ಟಿಕೆಟ್ ಮಾರಾಟಗಾರರಾಗಿರುವ ಕಲ್ಯಾಣ ನಿಧಿ ಸದಸ್ಯರಿಗೆ ಉಚಿತವಾಗಿ ಬೀಚ್ ಛತ್ರಿ ಹಸ್ತಾಂತರಿಸುವ ಜಿಲ್ಲಾ ಮಟ್ಟದ ವಿತರಣಾ ಯೋಜನೆಯ ಉದ್ಘಾಟನೆ ಫೆ. 22 ರಂದು ಮಧ್ಯಾಹ್ನ 3ಕ್ಕೆ ಜಿಲ್ಲಾಧಿಕಾರಿ ಕಚೇರಿ ಮಿನಿ ಕಾನ್ಫರೆನ್ಸ್ ಹಾಲ್ ನಲ್ಲಿ ಜರುಗಲಿದೆ. ಶಾಸಕ ಎನ್ ಎ ನೆಲ್ಲಿಕುನ್ನು ಬೀಚ್ ಛತ್ರಿ ಹಸ್ತಾಂತರಿಸುವ ಮೂಲಕ ವಿತರಣಾ ಉದ್ಘಾಟನೆ ನೆರವೇರಿಸುವರು. ಲಾಟರಿ ಕಲ್ಯಾಣ ನಿಧಿ ಮಂಡಳಿ ಸದಸ್ಯ ವಿ.ಬಾಲನ್ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಉಚಿತ ಬೀಚ್ ಅಂಬ್ರೆಲಾ ಯೋಜನೆ: 22ರಂದು ಜಿಲ್ಲಾ ಮಟ್ಟದ ವಿತರಣಾ ಉದ್ಘಾಟನೆ
0
ಫೆಬ್ರವರಿ 19, 2023
Tags