ಪೆರ್ಲ : ಶೇಣಿ ಬಾರೆದಳದಲ್ಲಿ ಕುಲಾಲ ಬಂಗೇರ ತರವಾಡು ಮನೆ ಗೃಹ ಪ್ರವೇಶ ಹಾಗೂ ದೈವಗಳ ಪ್ರತಿಷ್ಠಾ ಕಾರ್ಯಕ್ರಮ ಫೆ. 22ರಂದು ಜರಗಲಿದೆ. ಇದರ ಅಂಗವಾಗಿ ಇಂದು(ಫೆ.21) ರಾತ್ರಿ ರಾಕ್ಷೋಘ್ನ ಹೋಮ,ವಾಸ್ತುಹೋಮ,ವಾಸ್ತುಬಲಿ ಜರಗಲಿದೆ. ಫೆ.22ಕ್ಕೆ ಬೆಳಗ್ಗೆ 8.44ರಿಂದ 9 ಗಂಟೆಯ ಒಳಗೆ ನಡೆಯುವ ಮೀನ ಲಗ್ನ ಶುಭ ಮುಹೂರ್ತದಲ್ಲಿ ತರವಾಡು ಮನೆಯ ಗೃಹಪ್ರವೇಶ ಜರಗಲಿದೆ. 9 ಗಂಟೆಯಿಂದ ಶ್ರೀದೈವಗಳ ಪ್ರತಿμÉ್ಠ,ತಂಬಿಲ ಸೇವೆ, ಮಧ್ಯಾಹ್ನ ಮುಡಿಪು ಪೂಜೆ, ಶ್ರೀಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, ಸಂಜೆ 5ಗಂಟೆಯಿಂದ ತತ್ವಮಸಿ ಕುಣಿತ ಭಜನಾ ತಂಡ ಶೇಣಿ ಮಣಿಯಂಪಾರೆ ಇವರಿಂದ ಕುಣಿತ ಭಜನೆ, ರಾತ್ರಿ ದೈವಗಳಿಗೆ ತಂಬಿಲ ಕಾರ್ಯಕ್ರಮ ಜರಗಲಿದೆ.
ಫೆ.22ಕ್ಕೆ ಶೇಣಿ ಬಾರೆದಳದಲ್ಲಿ ಕುಲಾಲ ಬಂಗೇರ ತರವಾಡು ಮನೆ ಗೃಹ ಪ್ರವೇಶ ಹಾಗೂ ದೈವಗಳ ಪ್ರತಿಷ್ಠಾ ಕಾರ್ಯ
0
ಫೆಬ್ರವರಿ 20, 2023