ಕಾಸರಗೋಡು: ಮಹಿಳಾ ಸಮಾನತೆಗಾಗಿ ಸಾಂಸ್ಕೃತಿಕ ಮುನ್ನಡೆ ಎಂಬ ಸಂದೇಶದೊಂದಿಗೆ ಸಂಸ್ಕೃತಿ ಇಲಾಖೆ, ಕೇರಳ ಭಾಷಾ ಸಂಸ್ಥೆ ಹಾಗೂ ಕಾಸರಗೋಡು ಜಿಲ್ಲಾ ಪಂಚಾಯಿತಿ ಜಂಟಿಯಾಗಿ ಆಯೋಜಿಸಿರುವ 'ಸಮಂ ಸಾಂಸ್ಕತಿಕೋತ್ಸವ'ವು ಫೆಬ್ರವರಿ 23ರಿಂದ 26ರ ವರೆಗೆ ಬೇಡಡ್ಕ ಗ್ರಾಮ ಪಂಚಾಯಿತಿಯ ಮುನ್ನಾಡ್ ಪೀಪಲ್ಸ್ ಕಾಲೇಜು ಆವರಣದ ಇಎಂಎಸ್ ಅಕ್ಷರ ಗ್ರಾಮದಲ್ಲಿ ನಡೆಯಲಿದೆ.
ಎರಡು ವೇದಿಕೆಗಳಲ್ಲಿ ಮೂರು ದಿನಗಳ ಕಾಲ ದೃಶ್ಯ ವಿಸ್ಮಯ ನಡೆಯಲಿದ್ದು, ಗಝಲ್, ನಾಟಕ, ಚಿತ್ರಗಾರರ ಸಂಗಮ, ಏಕಪಾತ್ರ ಅಭಿನಯ, "ಪಾಟ್ಟುಂ ಚುಟ್ಟುಂ" ಜಾನಪದ ಕಲಾ ಸಂಗಮ, ಗಾನ ಮೇಳ ಹಾಗೂ ಮೆಗಾ ಶೋ ಕಾರ್ಯಕ್ರಮ ನಡೆಯಲಿದೆ. ಕೇರಳದ ಪ್ರಮುಖ ಸಾಂಸ್ಕೃತಿಕ ಪ್ರತಿಭೆಗಳು ಭಾಗವಹಿಸುವ ಕಾರ್ಯಕ್ರಮಗಳು, ವಿವಿಧ ಕ್ಷೇತ್ರಗಳ ಮಹಿಳೆಯರನ್ನು ಸಮಂ ಪ್ರಶಸ್ತಿ ನೀಡಿ ಗೌರವಿಸಲಾಗುವುದು, ಕವನ ವಾಚನ ಸ್ಪರ್ಧೆ, ಶೈಕ್ಷಣಿಕ ವಿಚಾರ ಸಂಕಿರಣ ಮುಂತಾದವುಗಳು ನಡೆಯಲಿದೆ.
ಸಮಂ ಸಾಂಸ್ಕೃತಿಕ ಉತ್ಸವದ ಘೋಷಣೆಯಾಗಿ ಫೆಬ್ರವರಿ 23ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಜಿಲ್ಲೆಯ ಪ್ರಮುಖ ಚಿತ್ರಕಲಾವಿದರಿಂದ ಚಿತ್ರ ರಚನೆ ನಡೆಯಲಿದೆ.
24ರ ಬೆಳಗ್ಗೆ 10.30ಕ್ಕೆ ಮುನ್ನಾಡ್ ಪೀಪಲ್ಸ್ ಎಂಬಿಎ ಕಾಲೇಜಿನ ಪಿ ಆರ್ ಸ್ಮಾರಕ ಸಭಾಂಗಣದಲ್ಲಿ ಶೈಕ್ಷಣಿಕ ವಿಚಾರ ಸಂಕಿರಣ, ಸಾಂಸ್ಕೃತಿಕ ಮೆರವಣಿಗೆ, ಸಿಂಗಾರಿ ಮೇಳ, ಉದ್ಘಾಟನಾ ಸಮಾರಂಭ, ಸಮಂ ವನಿತಾ ಪುರಸ್ಕಾರ ನಡೆಯಲಿದೆ. ಸಂಜೆ 7ರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. 26ರಂದು ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯುವುದು.
ಮುನ್ನಾಡ್ ಇಎಂಎಸ್ ಅಕ್ಷರ ಗ್ರಾಮದಲ್ಲಿ 23ರಿಂದ 'ಸಮಂ ಸಾಂಸ್ಕøತಿಕೋತ್ಸವ'
0
ಫೆಬ್ರವರಿ 16, 2023