ಕೋಝಿಕ್ಕೋಡ್: ಕೋಝಿಕ್ಕೋಡ್ ಬೀಚ್‍ನಲ್ಲಿ 24 ವರ್ಷಗಳ ಹಿಂದೆ ನಡೆದಿದÀ ಹಾಡಿನ ಹಬ್ಬದಲ್ಲಿ ಯೇಸುದಾಸ್ ಮತ್ತು ಚಿತ್ರಾ ಮೇಲೆ ಕಲ್ಲು ತೂರಾಟ ನಡೆಸಿದ ವ್ಯಕ್ತಿಯನ್ನು ಪೆÇಲೀಸರು ಬಂಧಿಸಿದ್ದಾರೆ.
24 ವರ್ಷಗಳ ನಂತರ ಬೇಪುರ ಮಾತೋಟ್ಟಂ ನಿವಾಸಿ ಪಣಿಕ್ಕರಮಠ ಎನ್.ವಿ. ಅಜೀಜ್ (56) ಎಂಬಾತನನ್ನು ಪೆÇಲೀಸರು ಬಂಧಿಸಿದ್ದಾರೆ. ಅಜೀಜ್ ರಸ್ತೆ ಬದಿ ಹಣ್ಣು ಮಾರುವ ವ್ಯಕ್ತಿ.
ಮಾಥೋಟ್ಟಂನಿಂದ ದೂರದಲ್ಲಿರುವ ಮಲಪ್ಪುರಂ ಜಿಲ್ಲೆಯ ಮುತುವಳ್ಳೂರಿನ ಪುಲಿಕ್ಕಲ್ಕುನ್ನತ್ ಮನೆಯಲ್ಲಿ ತಂಗಿದ್ದ ಅಜೀಜ್ ನನ್ನು ಬಂಧಿಸಲಾಗಿದೆ. ಮಾಥೋಟ್ಟಂನ ಸ್ಥಳೀಯ ನಿವಾಸಿಯೊಬ್ಬರು ನೀಡಿದ ಸುಳಿವು ಆಧರಿಸಿ, ಮಲಪ್ಪುರಂ ಜಿಲ್ಲೆಯ ಪೆÇಲೀಸರು ತನಿಖೆ ನಡೆಸುತ್ತಿದ್ದರು. ಘಟನೆ ನಡೆದ ದಿನ ಪೆÇಲೀಸ್ ಸಿಬ್ಬಂದಿಯ ವೈರ್ ಲೆಸ್ ಸೆಟ್ ಕೂಡ ಕಳೆದು ಹೋಗಿತ್ತು.
ಈ ಪ್ರಕರಣದಲ್ಲಿ ಕೋಝಿಕ್ಕೋಡ್ ಜುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟ್ ಬಂಧನ ವಾರಂಟ್ ಹೊರಡಿಸಿತ್ತು. ಅಜೀಜ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಸಂಬಂಧಿತ ಘಟನೆ ಫೆಬ್ರವರಿ 7, 1999 ರಂದು ನಡೆದಿತ್ತು.
24 ವರ್ಷಗಳ ನಂತರ ಆರೋಪಿಯ ಬಂಧನ: ಯೇಸುದಾಸ್ ಮತ್ತು ಚಿತ್ರಾ ಮೇಲೆ ಕಲ್ಲು ಎಸೆದ ವ್ಯಕ್ತಿಯನ್ನು ಕೊನೆಗೂ ಬಂಧಿಸಿದ ಪೋಲೀಸರು
0
ಫೆಬ್ರವರಿ 20, 2023