ಪೆರ್ಲ: ಪಡ್ರೆಚಂದು ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಪೆರ್ಲ ಇದರ 18ನೇ ವಾರ್ಷಿಕೋತ್ಸವ, ಹೊಸ ರಂಗವೇದಿಕೆಯ ಉದ್ಘಾಟನೆ, ಪ್ರಶಸ್ತಿಪ್ರದಾನ, ಷಷ್ಠ್ಯಬ್ದ ಕಾರ್ಯಕ್ರಮ ಹಾಗೂ ಯಕ್ಷಗಾನ ಬಯಲಾಟ ಫೆ.25 ಹಾಗೂ 26 ರಂದು ಪೆರ್ಲದ ಪಡ್ರೆಚಂದು ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರದ ಪರಿಸರದಲ್ಲಿ ನಡೆಯಲಿದೆ.
ಫೆ.25 ರಂದು ಬೆಳಿಗ್ಗೆ 9 ಕ್ಕೆ ಶ್ರೀಮಹಾಗಣಪತಿ ಹೋಮ, ಪೆರ್ವಡಿ ವಿವೇಕಾನಂದ ಸಾಂಸ್ಕøತಿಕ ಕೇಂದ್ರದವರಿಂದ ಭಜನಾ ಸಂಕೀರ್ತನೆ, 10 ರಿಂದ ಶ್ರೀಸತ್ಯನಾರಾಯಣ ಪೂಜೆ, 11 ರಿಂದ ನೂತನ ರಂಗಮಂದಿರದ ಉದ್ಘಾಟನೆ ನಡೆಯಲಿದೆ. ಈ ಸಂದರ್ಭ ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ದಿವ್ಯ ಉಪಸ್ಥಿತರಿರುವರು. ಕರ್ನಾಟಕ ಲೋಕಸೇವಾ ಆಯೋಗದ ನಿಕಟಪೂರ್ವಾಧ್ಯಕ್ಷ ಡಾ.ಟಿ.ಶಾಮ ಭಟ್ ಅಧ್ಯಕ್ಷತೆ ವಹಿಸಲಿರುವ ಸಮಾರಂಭದಲ್ಲಿ ಉದ್ಯಮಿ ಮಾವೆ ಶಂಕರ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿವರು. ಯಕ್ಷಪ್ರಭಾದ ¸ಂಪಾದಕ ಕೆ.ಎಲ್.ಕುಂಡಂತಾಯ, ಎಡನೀರು ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ನಾಟ್ಯ ತರಬೇತಿ ಕೇಂದ್ರದ ಗೌರವಾಧ್ಯಕ್ಷ ಎನ್.ಕೆ.ರಾಮಚಂದ್ರ ಭಟ್, ಯಕ್ಷಗಾನ ಭಾಗವತ ಸತ್ಯನಾರಾಯಣ ಪುಣಿಚಿತ್ತಾಯ ಪೆಲಧ ಉಪಸ್ಥಿತರಿದ್ದು ಶುಭಹಾರೈಸುವರು. ತೆಂಕುತಿಟ್ಟು ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆ ವಿಶೇಷ ಅತಿಥಿಗಳಾಗಿ ಉಪಸ್ಥಿತರಿರುವರು. ಈ ಸಂದರ್ಭ ಶಾಂತಾ ಕುಂಟಿನಿ ಅವರಿಗೆ ಸಾಹಿತ್ಯ ರತ್ನ ಪ್ರಶಸ್ತಿ, ಮಂಗೇಶ್ ಭಟ್ ವಿಟ್ಲ ಅವರಿಗೆ ಸನ್ಮಾನ ನಡೆಯಲಿದೆ. ಯಕ್ಷಗುರು ಪ್ರಾಚಾರ್ಯ ಸಬ್ಬಣಕೋಡಿ ರಾಮ ಭಟ್ ಅವರ ಷಷ್|ಠ್ಯಬ್ದ ಗುರುವಂದನೆ ಈ ಸಂದರ್ಭ ನಡೆಯಲಿದೆ. ಕಲಾವಿದರಾದ ಅನಿರುದ್ದ ವಾಸಿಷ್ಠ ಶರ್ಮಾ ಉಡುಪಮೂಲೆ, ಶ್ರೀಹರಿ ಎಡನೀರು, ಶಿವಾನಂದ ಬಜಕ್ಕೂಡ್ಲು, ಮನೋಜ್ ನಡುವಡ್ಕ ಅವರಿಗೆ ಗುರುಗಳಿಂದ ಶಿಷ್ಯರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. 12 ರಿಂದ ಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವರಂಗ, 1 ರಿಂದ ಕೇಂದ್ರದ ವಿದ್ಯಾರ್ಥಿಗಳಿಂದ ಗಾನ ವೈಭವ, 2 ರಿಂದ ಮಕ್ಕಳ ಯಕ್ಷಗಾನ ಬಯಲಾಟ, ಸಂಜೆ 6 ರಿಂದ ಶ್ರೀದುರ್ಗಾಪೂಜೆ ನಡೆಯಲಿದೆ.
ಫೆ.26 ರಂದು ಬೆಳಿಗ್ಗೆ 10 ರಿಂದ ರಂಗಪ್ರವೇಶ ಯಕ್ಷನೃತ್ಯ ಪ್ರದರ್ಶನ, 11.30 ರಿಂದ ಪೂರ್ವರಂಗ ಪ್ರದರ್ಶನ ನಡೆಯಲಿದೆ. 2.30 ರಿಂದ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸುವರು. ರಾಜೇಂದ್ರ ಬಿ, ಜಗದೀಶ ಬಲ್ಲಾಳ್, ಎನ್.ಕೆ.ರಾಮಚಂದ್ರ ಭಟ್ ಪನೆಯಾಲ, ರಾಜಗೋಪಾಲ ಕನ್ಯಾನ, ಕೃಷ್ಣ ಭಟ್ ದೇವಕಾನ, ಡಾ.ಎಸ್.ಎನ್.ಭಟ್ ಪೆರ್ಲ, ಡಾ.ಕೃಷ್ಣಪ್ರಸಾದ್ ಬರೆಕರೆ, ಶಂಕರ ಕಾಮತ್ ಚೇವಾರು, ಗೋವರ್ಧನ ಎಂ, ಅರವಿಂದ ಕೆ., ಡಾ.ಅಶ|ವಿನ್ ತೇಜಸ್ವಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಈ ಸಂದರ್ಭ ಬಲಿಪ ಪ್ರಸಾದ ಭಾಗವತರಿಗೆ ಪಡ್ರೆಚಂದು ಪ್ರಶಸ್ತಿ, ಕುರಿಯ ಗಣಪತಿ ಶಾಸ್ತ್ರಿಗಳಿಗೆ ತೆಂಕಬೈಲು ಪ್ರಶಸ್ತಿ, ಬಲಿಪ ಶಿವಶಂಕರ ಭಟ್ ಅವರಿಗೆ ಅಡ್ಕಸ್ಥಳ ಪ್ರಶಸ್ತಿ ಬಲಿಪ ನಾರಾಯಣ ಭಾಗವತರಿಗೆ ಚೇವಾರು ಕಾಮತ್ ಪ್ರಶಸ್ತಿ, ಚೆನ್ನಪ್ಪ ಪೈವಳಿಕೆ ಅವರಿಗೆ ದೇವಕಾನ ಪ್ರಶಸ್ತಿ, ರಮೇಶ ಶೆಟ್ಟಿ ಬಾಯಾರು ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕೋಟೆ ರಾಮ ಭಟ್ ಅಭಿನಂದನಾ ಭಾಷಣ ಮಾಡುವರು. ಎಸ್ ಮಾಧವ ಇಡಿಯಡ್ಕ ಅವರನ್ನೂ ಈ ಸಂದರ್ಭ ಅಭಿನಂದಿಸಿ ಗೌರವಿಸಲಾಗುವುದು. ಸಂಜೆ 4 ರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
ಪಡ್ರೆಚಂದು ನಾಟ್ಯ ತರಬೇತಿ ಕೇಂದ್ರ: ಹದಿನೆಂಟನೇ ವಾರ್ಷಿಕೋತ್ಸವ: ರಂಗವೇದಿಕೆ ಉದ್ಠಾಟನೆ: ಪ್ರಶಸ್ತಿ ಪ್ರದಾನ,ಬಯಲಾಟ: 25-26 ರಂದು
0
ಫೆಬ್ರವರಿ 12, 2023