ತಿರುವನಂತಪುರ: ಆಹಾರ ಸುರಕ್ಷತಾ ಇಲಾಖೆಯ ವಿಶೇಷ ದಳವು ಕಳೆದ ಎರಡು ದಿನಗಳಲ್ಲಿ ರಾಜ್ಯದ 460 ಸಂಸ್ಥೆಗಳಲ್ಲಿ ತಪಾಸಣೆ ನಡೆಸಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಅದರಲ್ಲಿ 328 ಮೀನುಗಳನ್ನು ಪರೀಕ್ಷಿಸಲಾಯಿತು. ಆಹಾರ ಸುರಕ್ಷತೆ ಮೊಬೈಲ್ ಲ್ಯಾಬ್‍ನಲ್ಲಿ 110 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ತಜ್ಞರ ಪರೀಕ್ಷೆಗಾಗಿ 285 ಮಾದರಿಗಳನ್ನು ಸಂಗ್ರಹಿಸಲಾಗಿದೆ. 63 ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ. 253 ಕೆಜಿ ಹಾಳಾದ ಮೀನು ನಾಶಪಡಿಸಲಾಗಿದೆ. ಎರ್ನಾಕುಳಂ ಜಿಲ್ಲೆಯೊಂದರಲ್ಲೇ 130 ಕೆಜಿ ಮೀನು ವಶಪಡಿಸಿಕೊಂಡು ನಾಶಪಡಿಸಲಾಗಿದೆ. 5 ಸಂಸ್ಥೆಗಳನ್ನು ಮುಚ್ಚಲಾಗಿದೆ. ತಪಾಸಣೆ ಮುಂದುವರಿಯಲಿದೆ ಎಂದು ಸಚಿವರು ತಿಳಿಸಿರುವರು.
ಓಪರೇಷನ್ ಮತ್ಸ್ಯ: 253 ಕೆಜಿ ಮೀನು ನಾಶ: ಎರ್ನಾಕುಳಂ ನಲ್ಲಿ ಅತೀ ಹೆಚ್ಚು
0
ಫೆಬ್ರವರಿ 10, 2023