HEALTH TIPS

ರಾಜಸ್ಥಾನದ ಬಿಕಾನೆರ್‌ನಲ್ಲಿ ಫೆ. 25ರಿಂದ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವ

 

               ಜೈಪುರ: ಕೇಂದ್ರ ಸಂಸ್ಕೃತಿ ಸಚಿವಾಲಯದ ವತಿಯಿಂದ 14ನೇ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವವನ್ನು ಫೆಬ್ರುವರಿ 25 ರಿಂದ ಮಾರ್ಚ್ 5 ರವರೆಗೆ ಬಿಕಾನೇರ್‌ನ ಕರ್ಣಿ ಸಿಂಗ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

                ಫೆಬ್ರುವರಿ   27 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಲಿದ್ದಾರೆ.

9 ದಿನಗಳು ನಡೆಯಲಿರುವ ಈ ಸಾಂಸ್ಕೃತಿಕ ಸಂಭ್ರಮದಲ್ಲಿ ಭಾರತದಾದ್ಯಂತ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಉದಯಪುರದ ಪಶ್ಚಿಮ ವಲಯ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ಕಿರಣ್ ಸೋನಿ ಗುಪ್ತಾ ಹೇಳಿದರು.

                 ಉದ್ಘಾಟನಾ ಸಮಾರಂಭದಲ್ಲಿ ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ, ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವ ಮತ್ತು ಬಿಕಾನೆರ್ ಸಂಸದ ಅರ್ಜುನ್ ರಾಮ್ ಮೇಘವಾಲ್ ಮತ್ತು ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಭಾಗವಹಿಸಲಿದ್ದಾರೆ.

                 ಭಾರತದ ವಿವಿಧ ಕಲೆಗಳು, ಆಹಾರಪದ್ಧತಿಗಳು ಮತ್ತು ಕರಕುಶಲ ವಸ್ತುಗಳು ಒಂದೇ ಸೂರಿನಡಿ ಲಭ್ಯವಿರುತ್ತವೆ. ಈ ಉತ್ಸವವು ಒಂದು ಅನನ್ಯ ಪ್ರಯತ್ನವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

               ಸಾಂಸ್ಕೃತಿಕ ಕೇಂದ್ರದ ಸಂಚಾಲಕ ಗುಪ್ತಾ ಮಾತನಾಡಿ, ಈ ಉತ್ಸವದಲ್ಲಿ ನಾಡಿನ ಹೆಸರಾಂತ ಕಲಾವಿದರ ಜಾನಪದ ನೃತ್ಯ, ಸಂಗೀತ, ನಾಟಕಗಳು ಪ್ರಸ್ತುತಗೊಳ್ಳಲಿವೆ. ಮರಳು ಶಿಲ್ಪದ ಜೊತೆಗೆ, ಕರಕುಶಲ ಮತ್ತು ಇತರ ಕಲೆಗಳನ್ನು ಆಧರಿಸಿದ ಪ್ರದರ್ಶನವನ್ನೂ ಸಹ ಆಯೋಜಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

                  ಸಂಸ್ಕೃತಿ ಸಚಿವಾಲಯದ ಪ್ರಮುಖ ಉತ್ಸವವಾಗಿದ್ದು, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ, ಉತ್ತೇಜಿಸುವ ಮತ್ತು ಜನಪ್ರಿಯಗೊಳಿಸುವ ಗುರಿಯನ್ನು ಹೊಂದಿದೆ. ಇದರಿಂದ ಸ್ಥಳೀಯ ಪ್ರವಾಸೋದ್ಯಮಕ್ಕೆ ಮತ್ತಷ್ಟು ಮನ್ನಣೆ ಸಿಗಲಿದೆ ಎಂದು ಗುಪ್ತಾ ತಿಳಿಸಿದ್ದಾರೆ.

                    ಫೆಬ್ರುವರಿ 25 ರಂದು ಜುನಾಗಡ ಕೋಟೆಯಿಂದ ಮೆರವಣಿಗೆಯ ಉತ್ಸವವು ಪ್ರಾರಂಭವಾಗುತ್ತದೆ. ಬಳಿಕ ಕಲಾ ಪ್ರದರ್ಶನ ಉದ್ಘಾಟನೆ ಹಾಗೂ ಸಂಜೆ ಬಿದಿರು ವಾದ್ಯ ಆಧಾರಿತ ಸಂಗೀತ ಪ್ರಸ್ತುತ ಪಡಿಸಲಾಗುವುದು.

                     ಉತ್ಸವದ ಎರಡನೇ ದಿನ 'ಕಲಾದರ್ಶನಂ' ಕಲಾ ಶಿಬಿರಕ್ಕೆ ಚಾಲನೆ ನೀಡಲಾಗುವುದು. ಅಂದೇ ಪಂಜಾಬ್ ಪೊಲೀಸ್ ಕಲ್ಚರಲ್ ಟ್ರೂಪ್ ವತಿಯಿಂದ ಪ್ರದರ್ಶನ ನಡೆಯಲಿದೆ. ಜತೆಗೆ ಕೃಷ್ಣಾಯ ತುಭ್ಯ ನಮಃ ಎಂಬ ಆಕರ್ಷಕ ಪ್ರಸ್ತುತಿ ನಡೆಯಲಿದೆ. ಖ್ಯಾತ ಕಲಾವಿದ ಅನ್ವರ್ ಖಾನ್ ಅವರಿಂದ 'ಡೆಸರ್ಟ್ ಸಿಂಫನಿ' ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

                  ಕಾರ್ಯಕ್ರಮದಲ್ಲಿ ಪ್ರತಿ ದಿನ 50,000 ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries