ನವದೆಹಲಿ: 'ಗುಜರಾತ್‌ನ ಮುಂದ್ರಾ ಬಂದರಿನಲ್ಲಿ 2021ರಲ್ಲಿ ಮಾದಕ ವಸ್ತು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 22 ಆರೋಪಿಗಳ ವಿರುದ್ಧ ಸೋಮವಾರ ಎನ್‌ಐಎ ಎರಡನೇ ಪೂರಕ ಆರೋಪ ಪಟ್ಟಿ ಸಲ್ಲಿಸಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಆರೋಪಿಗಳಲ್ಲಿ ಆರು ಆಫ್ಗನ್ ಪ್ರಜೆಗಳು ಹಾಗೂ ಏಳು ಸಂಸ್ಥೆಗಳ ಹೆಸರಿದೆ. ಭಾರತದಲ್ಲಿ ಮತ್ತಷ್ಟು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಹೆರಾಯಿನ್ ಮಾರಾಟ ಮಾಡಿ, ಆ ಹಣವನ್ನು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಕಾರ್ಯಕರ್ತರಿಗೆ ಒದಗಿಸಲಾಗಿದೆ ಎಂಬುದು ತನಿಖೆಯ ವೇಳೆ ದೃಢಪಟ್ಟಿದೆ' ಎಂದು ಎನ್‌ಐಎ ತಿಳಿಸಿದೆ.
2022ರ ಮಾರ್ಚ್ 14ರಂದು ಈ ಪ್ರಕರಣದ 16 ಆರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿತ್ತು. ಆ. 29ರಂದು ಇತರ 9 ಜನರ ವಿರುದ್ಧ ಮೊದಲ ಪೂರಕ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು.