ಕಾಸರಗೋಡು: ಕ್ಯಾಶ್ಯೂ ಕಾಪೆರ್Çರೇಷನ್ ಹಾಗು ಕ್ಯಾಪೆಕ್ಸ್ ವತಿಯಿಂದ ಗೇರು ಬೀಜ ಸಂಗ್ರಹಣಾ ಕಾರ್ಯ ನಡೆಯಲಿರುವುದು. ರಾಜ್ಯ ಸರ್ಕಾರ ನಿಶ್ಚೈಸಿದ ಬೆಲೆ ಪ್ರತಿ ಕೆಜಿಗೆ 114 ರೂಪಾಯಿ ನೀಡಿ ಗೇರುಬೀಜ ಖರೀದಿಸಲಾಗುತ್ತದೆ. ಕಳೆದ ವರ್ಷ ಸರ್ಕಾರ ನಿಗದಿಪಡಿಸಿದ ಬೆಲೆ 105 ರೂಪಾಯಿಗಳಾಗಿತ್ತು. ರೈತರಿಗೆ ನ್ಯಾಯಬೆಲೆ ಒದಗಿಸುವ ಹಾಗೂ ಊರ ಗೇರುಬೀಜ ಸಾರ್ವಜನಿಕರಿಗೆ ಲಭ್ಯವಗಿಸುವ ಉದ್ದೇಶದಿಂದ ಹೆಚ್ಚಿನ ಬೆಲೆ ನೀಡಿ ಗೋಡಂಬಿ ಸಂಗ್ರಹಿಸುತ್ತಿರುವವುದು. ತಿರುವನಂತಪುರ, ಕೊಲ್ಲಂ, ಆಲಪ್ಪುಳ, ತ್ರಿಶೂರ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿರುವ 40 ಕಾರ್ಖಾನೆಗಳಲ್ಲಿ ಗೋಡಂಬಿ ಸಂಗ್ರಹಿಸಲಾಗುತ್ತದೆ. ಗೇರುಬೀಜ ಖರೀದಿಸಲು ಆಸಕ್ತಿ ಇರುವ ಸಹಕಾರಿ ಸಂಘಗಳಿಂದ ಕ್ಯಾಶ್ಯೂ ಕಾಪೆರ್Çರೇಷನ್ ಹಾಗೂ ಕ್ಯಾಪೆಕ್ಸ್ ಖರೀದಿಸಲಿದೆ. ಈ ಬಗ್ಗೆ ಫೆಬ್ರವರಿ 27 ರಂದು ಕೊಲ್ಲಂ, ಮಾರ್ಚ್ 1 ರಂದು ಕಣ್ಣೂರು ಮತ್ತು ಮಾರ್ಚ್ 2 ರಂದು ಕಾಸರಗೋಡಿನಲ್ಲಿ ಸಭೆ ನಡೆಸಲಾಗುವುದು ಎಂದು ಕ್ಯಾಶ್ಯೂ ಕಾಪೆರ್Çರೇಷನ್ ಅಧ್ಯಕ್ಷ ಎಸ್. ಜಯಮೋಹನ್ ಮತ್ತು ಕ್ಯಾಪೆಕ್ಸ್ ಅಧ್ಯಕ್ಷ ಎಂ. ಶಿವಶಂಕರ ಪಿಳ್ಳೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗೇರುಬೀಜ ಸಂಗ್ರಹ: ಮಾ.2 ರಂದು ಕಾಸರಗೋಡಿನಲ್ಲಿ ಸಭೆ
0
ಫೆಬ್ರವರಿ 22, 2023
Tags