ನವದೆಹಲಿ : ವೆಚ್ಚ ಕಡಿತ ಹಾಗೂ ಮಾಧ್ಯಮ ಸೇವೆಯನ್ನು ಪುನರುಜ್ಜೀವನಗೊಳಿಸುವ ಎಲಾನ್ ಮಸ್ಕ್(Elon Musk) ಅವರ ಕಾರ್ಯಾಚರಣೆಯ ಭಾಗವಾಗಿ ಟ್ವಿಟರ್(Twitter) ಭಾರತದಲ್ಲಿದ್ದ ಮೂರು ಕಚೇರಿಗಳ ಪೈಕಿ ಎರಡನ್ನು ಮುಚ್ಚಿದ್ದು, ಸಿಬ್ಬಂದಿಗೆ ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಸೂಚಿಸಿದೆ.
ಕಳೆದ ವರ್ಷಾಂತ್ಯದಲ್ಲಿ ಟ್ವಿಟರ್ ಭಾರತದಲ್ಲಿರುವ ತನ್ನ ಸಿಬ್ಬಂದಿ ಪೈಕಿ 90ರಷ್ಟು ಅಂದರೆ 200ಕ್ಕೂ ಅಧಿಕ ಮಂದಿಯನ್ನು ವಜಾಗೊಳಿಸಿತ್ತು. ಹೊಸದಿಲ್ಲಿಯ ರಾಜಕೀಯ ಕೇಂದ್ರ ಹಾಗೂ ಮುಂಬೈ ಹಣಕಾಸು ಕೇಂದ್ರದಲ್ಲಿದ್ದ ತನ್ನ ಕಚೇರಿಯನ್ನು ಮುಚ್ಚಿತ್ತು. ಆದರೂ ಎಂಜಿನಿಯರ್ ಗಳೇ ನೆಲೆಸಿರುವ ಬೆಂಗಳೂರಿನ ಸೌಥರ್ನ್ ಟೆಕ್ ಹಬ್ ನಲ್ಲಿರುವ ಕಚೇರಿಗಳಲ್ಲಿ ಕಾರ್ಯಾಚರಣೆ ಮುಂದುವರಿಸಿದೆ ಎಂದು ಗುರುತು ಹೇಳಿಕೊಳ್ಳಲು ಇಚ್ಛಿಸಿದ ಜನರು ತಿಳಿಸಿದ್ದಾರೆ.
ಕೋಟ್ಯಧಿಪತಿ ಕಾರ್ಯನಿರ್ವಹಣಾಧಿಕಾರಿಯಾಗಿರುವ ಎಲಾನ್ ಮಸ್ಕ್ 2023ರ ಅಂತ್ಯದ ವೇಳೆ ಟ್ವಿಟರ್ ಗೆ ಆರ್ಥಿಕ ಸ್ಥಿರತೆ ತರುವ ಪ್ರಯತ್ನವಾಗಿ ಜಗತ್ತಿನಾದ್ಯಂತ ಇರುವ ತನ್ನ ಕಚೇರಿಗಳನ್ನು ಮುಚ್ಚಿದ್ದರು ಹಾಗೂ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದ್ದರು. ಈ ಬಗ್ಗೆ ಟ್ವಿಟರ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.