ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರಿಗೂ ಸ್ವೀಟ್ ಅಂದ್ರೆ ತುಂಬಾನೇ ಇಷ್ಟ. ಸಿಹಿಯಾದ ಅಂಶವಿರೋ ವಸ್ತುಗಳನ್ನ ಇಷ್ಟ ಪಡದೇ ಇರೋರು ಭಹುಶಃ ತುಂಬಾನೇ ಕಡಿಮೆ ಅನ್ನಿಸುತ್ತೆ. ಆದ್ರೆ ಅತಿಯಾದ ಸಕ್ಕರೆ ಸೇವನೆ ಆರೋಗ್ಯಕ್ಕೆ ತುಂಬಾನೇ ಹಾನಿಕಾರಕ.
ಅದ್ರಲ್ಲೂ ಡಯಾಬಿಟೀಸ್ ಇರುವವರಿಗಂತೂ ಶುಗರ್ ಮುಟ್ಲೇ ಬಾರದು. ಹಾಗೇ ಸುಮ್ಮನೆ ಯೋಚಿಸಿ, ನಾವೇನಾದ್ರು ಸ್ವಲ್ಪ ದಿನಗಳ ಕಾಲ ಶುಗರ್‌ಗೆ ಗುಡ್‌ಬಾಯ್ ಹೇಳಿದ್ರೆ ಏನ್ ಆಗ್ಬಹುದು..? ಊಹಿಸಿಕೊಳ್ಳೋದು ಕಷ್ಟ ಅಲ್ವಾ..?
ಆದ್ರೆ ನಾವು ನಿಮಗೆ ಅಂತಹದ್ದೇ ಚಾಲೆಂಜ್ ಅನ್ನ ನೀಡ್ತಿದ್ದೀವಿ. ಈಗ ನಾವು ಹೇಳೋ
ಟಿಪ್ಸ್ ಅನ್ನ ನೀವೇನಾದ್ರು ಫಾಲೋ ಮಾಡಿದ್ರೆ ಖಂಡಿತ ಪ್ರಯೋಜನವಿದೆ. ಅದ್ರಲ್ಲೂ
ವೈಟ್‌ಲಾಸ್ ಆಗ್ಬೇಕು ಅನ್ಕೊಂಡವ್ರು ಈ ಸ್ಟೋರಿ ಓದಲೇಬೇಕು.
30 ದಿನ ಏನೆಲ್ಲಾ ತಿನ್ನಬಾರದು..!
ಅತಿಯಾದ್ರೆ ಅಮೃತವು ವಿಷ ಅಂತಾರಲ್ಲ ಹಾಗೇ ನಾವು ಪ್ರತಿನಿತ್ಯ ಸೇವಿಸೋ ಆಹಾರದಲ್ಲಿ ಅತೀ
ಹೆಚ್ಚಿನ ಸಕ್ಕರೆಯ ಅಂಶವಿದ್ದು ಅದು ನಿಧಾನವಾಗಿ ನಮ್ಮ ದೇಹವನ್ನ ಸೇರಿ ನಾನಾ ತರಹದ
ಸಮಸ್ಯೆಗಳಿಗೆ ಕಾರಣವಾಗ್ತಿದೆ. ಆದ್ರೆ ಮುಂದಿನ 30 ದಿನ ನಾವು ಹೇಳೋ ಆಹಾರಗಳನ್ನು ಅವೈಡ್
ಮಾಡಿದ್ರೆ ಖಂಡಿತ ನಿಮ್ಮ ಆರೋಗ್ಯಕರ ಡಯೇಟ್‌ಗೆ ಸಹಾಯವಾಗಲಿದೆ.
30 ದಿನಗಳಲ್ಲಿ ಏನೆಲ್ಲಾ ಸೇವಿಸಲೇಬೇಕು
:
ಪ್ರತಿಯೊಬ್ಬರಿಗೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಇದ್ದೇ ಇರುತ್ತದೆ. ಬರೀ 30 ದಿನಗಳಲ್ಲಿ
ಹೆಲ್ತ್ ಬೆನಿಫಿಟ್ ಬೇಕು ಅನ್ನೋರು ಈ ಫುಡ್ ಹಾಬಿಟ್‌ನ ಫಾಲೋ ಮಾಡಿ.
ಸಕ್ಕರೆ ಅಂಶವಿರೋ ಪದಾರ್ಥಗಳು : ಸಕ್ಕರೆ, ಜೇನುತುಪ್ಪ, ಕಾನ್೬ ಸಿರಪ್, ತೆಂಗಿನಕಾಯಿ
ಹಾಲು
ಸಕ್ಕರೆ ಅಂಶವಿರೋ ಪಾನಿಯ : ಸೋಡಾ, ಜ್ಯೂಸ್, ಕಾಫಿ, ಟೀ, ಸ್ಪೋಟ್ಸ್ ಡ್ರಿಂಕ್
ಕಾಂಡಿಮೆಂಟ್ಸ್ : ಕೆಚಪ್, ಸಾಸ್, ಕಾಫಿ ಕ್ರೀಮರ್
ಹಾಲಿನ ಉತ್ಪನ್ನಗಳು : ಐಸ್‌ಕ್ರೀಮ್, ಚಾಕಲೇಟ್ ಹಾಲು, ಫ್ಲೇವರ್ಡ್ ಮೊಸರು
ಸಕ್ಕರೆಯೊಂದಿಗೆ ಖರಿದ ಪದಾರ್ಥಗಳು : ಕುಕ್ಕೀಸ್, ಕೇಕ್, ಡೋನಟ್, ಸಕ್ಕರೆ ಅಂಶವಿರೋ
ಬ್ರೆಡ್
ಕ್ಯಾಂಡಿ : ಚಾಕಲೇಟ್, ಕ್ಯಾರಮಲ್
ಸಿಹಿಯಾದ ಮಧ್ಯಪಾನೀಯಗಳು : ಮಿಕ್ಸ್ಡ್ ಡ್ರಿಂಕ್, ಸಿಹಿಯಾದ ಲಿಕ್ಕರ್,
ದೇಹದ ತೂಕ ಸ್ಥಿರವಾಗಿರಲಿದೆ
:
ಸಾಮಾನ್ಯವಾಗಿ ನಾವು ತಿನ್ನೋ ಆಹಾರ ಹಾಗೂ ಕುಡಿಯುವ ಪಾನಿಯಗಳಲ್ಲಿ ಅತೀ ಹೆಚ್ಚಿನ
ಪ್ರಮಾಣದ ಕ್ಯಾಲೋರಿಗಳು ಇರುತ್ತದೆ. ಹಾಗೆಯೇ ಪ್ರೋಟೀನ್ ಮತ್ತು ಫೈಬರ್ ಅಂಶವು
ಅಧಿಕವಾಗಿರುತ್ತದೆ. ದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಾದಂತೆ ಒಳ ಅಂಗಾಂಗಗಳಲ್ಲಿ ಕೊಬ್ಬಿನ
ಅಂಶವು ಅಧಿಕವಾಗುತ್ತಾ ಸಾಗುತ್ತದೆ. ಇದರ ಬದಲಾಗಿ ನೀವೇನಾದ್ರು ಈ ಮೇಲೆ ನಾವು
ಸೂಚಿಸಿರುವ ಪದಾರ್ಥಗಳನ್ನು ಸೇವಿಸಿದರೆ ದೇಹದ ತೂಕ ಸ್ಥಿರವಾಗುವುದರ ಜೊತೆಗೆ ನಿಧಾನವಾಗಿ
ವೈಟ್‌ಲಾಸ್ ಆಗೋದಕ್ಕೂ ಸಹಾಯಕಾರಿಯಾಗಿದೆ.
ಪಿತ್ತ ಜನಕಾಂಗದ ಆರೋಗ್ಯ ಉತ್ತಮವಾಗಲಿದೆ:
ಒಂದು ಅಧ್ಯಯನದ ಪ್ರಕಾರ 6 ತಿಂಗಳುಗಳ ಕಾಲ ಪ್ರತಿನಿತ್ಯ 1 ಲೀಟರ್‌ನಷ್ಟು ಸಕ್ಕರೆ
ಅಂಶವನ್ನು ಬೇರೆ ಬೇರೆ ಆಹಾರ ಪದಾರ್ಥಗಳ ಮೂಲಕ ಸೇವಿಸಿದವರಲ್ಲಿ ಕಡಿಮೆ ಸಕ್ಕರೆ ಅಂಶವಿರೋ
ಪದಾರ್ಥಗಳನ್ನು ಸೇವಿಸಿದವರಿಗಿಂತ ಗಮನಾರ್ಹವಾಗಿ ಹೆಚ್ಚಾಳವಾಗಿದ್ಯಂತೆ. ಇದರಿಂದ
ಲಿವರ್ ಹಾಗೂ ಒಳ ಅಂಗಾಂಗಗಳಲ್ಲಿ ಕೊಬ್ಬು ತುಂಬಿಕೊಳ್ಳುತ್ತಂತೆ. ಈ ಸಂಶೋಧನೆಗಳು ಹೇಳೋ
ಪ್ರಕಾರ ಸಕ್ಕರೆಯನ್ನು ಕಡಿತಗೊಳಿಸಿ, ವಿಶೇಷವಾಗಿ ಹೆಚ್ಚಿನ ಫ್ರಕ್ಟೋಸ್ ಅಂಶವಿರುವ
ಕಾರ್ನ್ ಸಿರಪ್‌ಗಳು ಯಕೃತ್ತಿನ ಕೊಬ್ಬನ್ನು ಕಡಿಮೆ ಮಾಡಲು ಮತ್ತು ಯಕೃತ್ತಿನ
ಆರೋಗ್ಯವನ್ನು ಸುಧಾರಿಸುವ ಸಹಾಯವಾಗಲಿದ್ಯಂತೆ.
ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗುತ್ತದೆ:
ಸಾಂಪ್ರದಾಯಿಕ ಸಕ್ಕರೆಯನ್ನು ಕಂಪ್ಲೀಟ್ ಆಗಿ ಆಹಾರ ಕ್ರಮದಿಂದ ತೆಗೆದು ಹಾಕುವುದರಿಂದ
ಇದು ಬ್ಲಡ್ ಶಿಗರ್ ಮತ್ತು ಇನ್ಸುಲಿನ್ ಅಂಶವನ್ನು ಕಡಿಮೆ ಮಾಡುತ್ತದೆ. ಆದ್ರೆ ನೀವು ಈ
ಆಹಾರ ಕ್ರಮವನ್ನು ಕೆಲವೇ ದಿನಗಳ ಕಾಲ ಫಾಲೋ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಚಾಲೆಂಜ್
ಕೇವಲ 30 ದಿನ ಇದ್ರೂ ಕೂಡ ಉತ್ತಮ ರಿಸಲ್ಟ್ ಬರಬೇಕಾದ್ರೆ ನೀವು ಇದನ್ನ ಫಾಲೋ
ಮಾಡ್ಲೇಬೇಕು.