HEALTH TIPS

ವೆಳ್ಳಚ್ಚಾಲ್ ಎಮ್.ಆರ್.ಎಸ್‍ನಲ್ಲಿ 35 ವಿದ್ಯಾರ್ಥಿಗಳಿಗೆ ಉಚಿತ ಅಧ್ಯಯನ ಅವಕಾಶ




           ಕಾಸರಗೋಡು: ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿ ವೆಳ್ಳಚ್ಚಾಲ್ ನಲ್ಲಿ ಕಾರ್ಯ ನಿರ್ವಹಿಸುವ ಬಾಲಕರ ಮಾದರಿ ವಸತಿ ಶಾಲೆ ಪ್ರವೇಶಕ್ಕಾಗಿ ಫೆಬ್ರವರಿ 20ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ 35 ಬಾಲಕರಿಗೆ 5ನೇ ತರಗತಿಗೆ ಉಚಿತವಾಗಿ ವಸತಿಯೊಂದಿಗೆ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ.
         ಪೆÇೀಷಕರ ಆದಾಯ ಮಿತಿ 2 ಲಕ್ಷ ರೂ. ನಿಗದಿಪಡಿಸಲಾಗಿದ್ದು, ಮಾದರಿ ವಸತಿ ಶಾಲೆ,  ಜಿಲ್ಲಾ ಮತ್ತು ಬ್ಲಾಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಯನ್ನು ಪ್ರಸ್ತುತ ಕಚೇರಿಗಳಿಂದ ಅಥವಾ ಪ್ರಮೋಟರ್‍ಗಳಿಂದ ಪಡೆಯಬಹುದು. ಅರ್ಜಿಯೊಂದಿಗೆ ಜಾತಿ, ಕುಟುಂಬದ ವಾರ್ಷಿಕ ಆದಾಯ, ಕಲಿಯುವ ತರಗತಿಗೆ ಸಂಬಂಧಿಸಿದ ಸಾಕ್ಷ್ಯ ಪತ್ರ ಮತ್ತು ಭಾವಚಿತ್ರವನ್ನು ಸಲ್ಲಿಸಬೇಕು. ತಿತಿತಿ.sಣmಡಿs.iಟಿ ವೆಬ್‍ಸೈಟ್ ಮೂಲಕ ಆನ್‍ಲೈನ್‍ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ವರ್ಗ, ಪರಿಶಿಷ್ಟ ಜಾತಿಯವರನ್ನು ಹೊರತುಪಡಿಸಿ, ಇತರ ವಿಭಾಗದಿಂದ ಮೂರು ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ಮಾರ್ಚ್‍ನಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ.
                   ಇಲ್ಲಿಯವರೆಗೆ 15 ಎಸ್.ಎಸ್.ಎಲ್.ಸಿ ಬ್ಯಾಚ್‍ಗಳಲ್ಲಾಗಿ ಶೇ. ನೂರು ಯಶಸ್ಸನ್ನು ಸಾಧಿಸಿದ ವೆಳ್ಳಚ್ಚಾಲ್ ಎಮ್.ಆರ್.ಎಸ್ ನಲ್ಲಿ 5 ರಿಂದ 10 ನೇ ತರಗತಿಗಳಲ್ಲಾಗಿ 182 ವಿದ್ಯಾರ್ಥಿಗಳಿದ್ದಾರೆ.  ಶೀಘ್ರದಲ್ಲೇ ಇಲ್ಲಿ ಹೈಯರ್ ಸೆಕೆಂಡರಿ ಆರಂಭವಾಗಲಿದ್ದು,  ಎಲ್ಲರಿಗೂ ವಸತಿ, ಆಹಾರ ಮತ್ತು ಅಧ್ಯಯನ ಉಚಿತವಾಗಿರಲಿದೆ. ಟ್ಯೂಷನ್ ವ್ಯವಸ್ಥೆ, ಎಂಟ್ರೆನ್ಸ್ ಕೋಚಿಂಗ್, ಕ್ಯಾರಿಯರ್ ಗೈಡೆನ್ಸ್, ಕಲೆ-ಕ್ರೀಡಾ ತರಬೇತಿ ಇತ್ಯಾದಿ ಸೌಲಭ್ಯವಿದೆ. ತ್ರಿಕರಿಪುರ ಕೊಡಕ್ಕಾಡ್ ಗ್ರಾಮದಲ್ಲಿ 8.18 ಎಕರೆ ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿಗಳ ಮಾನಸಿಕ ಆನಂದಕ್ಕೆ ಪ್ರಯೋಜನವಾಗುವ ಸ್ಥಿತಿಯಲ್ಲಿ ಶಾಲೆ, ಹಾಸ್ಟೆಲ್‍ಗಳನ್ನು ಸಿದ್ಧಪಡಿಸಲಾಗಿದೆ. 13000 ಪುಸ್ತಕಗಳ ಗ್ರಂಥಾಲಯ ಮತ್ತು ಆಧುನಿಕ ಪ್ರಯೋಗಾಲಯಗಳನ್ನು ಸಜ್ಜುಗೊಳಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಸ್ಟೂಡೆಂಟ್ ಪೆÇಲೀಸ್ ಕೆಡೆಟ್ ತರಬೇತಿಯನ್ನು ಸಹ ನೀಡಲಾಗುತ್ತದೆ.
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries