HEALTH TIPS

ಕೋವಿಡ್​ಗೆ ಹೆದರಿದ ಮಹಿಳೆ; ಸತತ 3 ವರ್ಷ ಮನೆಯೊಳಗೆ ಲಾಕ್!

 

            ನವದೆಹಲಿ: ಕೋವಿಡ್ ವೈರಸ್ ಕಾಟಕ್ಕೆ ಸುಮಾರು ಎರಡು ವರ್ಷಗಳ ಕಾಲ ಜನರು ಲಾಕ್​ಡೌನ್ ಅನುಭವಿಸಿದ್ದರು. ಇದೀಗ ಜನರು ಮನೆಯಿಂದ ಹೊರ ಬಂದು ಮೊದಲಿನಂತೆ ಜೀವನ ನಡೆಸುತ್ತಿದ್ದಾರೆ. ಆದರೆ ಇಲ್ಲೊಬ್ಬಳು ಸೋಂಕಿಗೆ ಹೆದರಿ 2020 ರಿಂದ ಮನೆಯ ಹೊರಗೆ ಬಂದಿಲ್ಲ.

                   ಗುರುಗ್ರಾಮ್​ನ ಮಾರುತಿ ಕುಂಜ್ ನಗರ ನಿವಾಸಿ ಮುನ್ಮುನ್ ಮಾಝಿ 2020 ರಿಂದ ತಾನು ಹೊರಬಾರದೆ ತನ್ನ ಮಗನನ್ನು ಜೊತೆಗೆ ಇರಿಸಿಕೊಂಡಿದ್ದಳು. ಫೆಬ್ರವರಿ 21ರಂದು ಆರೋಗ್ಯ, ಪೊಲೀಸ್ ಮತ್ತು ಮಕ್ಕಳ ಸೇವಾ ಇಲಾಖೆಯ ಅಧಿಕಾರಿಗಳ ತಂಡ ತಾಯಿ, ಮಗುವನ್ನು ಗೃಹ ಬಂಧನದಿಂದ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.

                 ಈಕೆ ಪತಿ ಸುಜನ್ ಮಾಝಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. 2020 ರಲ್ಲಿ ಲಾಕ್​ಡೌನ್ ನಿಯಮ ಸಡಿಲಿಸಿದ ನಂತರ ಸುಜನ್ ಕೆಲಸಕ್ಕೆಂದು ತೆರಳಿ ಸಂಜೆ ಮನೆಗೆ ಮರಳುವಷ್ಟರಲ್ಲಿ ಮನೆ ಬಾಗಿಲನ್ನು ತೆಗಿಯದೇ ಮಹಿಳೆ ರಾದ್ದಂತ ಮಾಡಿದ್ದಳು. ಗಂಡನನ್ನು ಮನೆ ಒಳಗೆ ಬರಲು ಬಿಟ್ಟಿರಲಿಲ್ಲ. ಹೀಗಾಗಿ ಆಕೆ ಪತಿ ಬಾಡಿಗೆಗೆ ಮನೆಲಿ ವಾಸವಾಗಿದ್ದರು.

                    ಕಳೆದ ಮೂರು ವರ್ಷಗಳಿಂದ ಮುನ್ಮುನ್ ಮತ್ತು ಅವರ ಪುತ್ರನೊಂದಿಗೆ ವೀಡಿಯೋ ಕರೆ ಮೂಲಕ ಸಂಪರ್ಕದಲ್ಲಿದ್ದರು. ಅವರು ಬಾಡಿಗೆ, ವಿದ್ಯುತ್ ಬಿಲ್‌ಗಳು ಮತ್ತು ಮಗನ ಶಾಲಾ ಶುಲ್ಕವನ್ನು ಪಾವತಿಸಿದ್ದರು. ಪ್ರತಿ ನಿತ್ಯ ದಿನಸಿಗಳನ್ನು ಖರೀದಿಸಿ ಮನೆಯ ಬಾಗಿಲಿನ ಹೊರಗೆ ಇಟ್ಟು ಬರುತ್ತಿದ್ದರು. ಇಂಡಕ್ಷನ್‌ನಲ್ಲಿ ಅಡುಗೆ ಮಾಡುತ್ತಿದ್ದರು. ಆನ್‌ಲೈನ್ ತರಗತಿಗಳಿಗೆ ಹಾಜರಾಗಬೇಕಾಗಿರುವುದರಿಂದ ಅವರು ತಮ್ಮ ಮಗನಿಗೆ ಸ್ಮಾರ್ಟ್‌ಫೋನ್ ಬಳಸಲು ಅವಕಾಶ ನೀಡಿದ್ದರು.

                ಸುಜನ್ ಮನವೊಲಿಸಲು ಪ್ರಯತ್ನಿಸಿದರು ಮುನ್ಮುನ್ ಪ್ರತಿ ಬಾರಿಯೂ ಗಂಡನ ಮನವಿಯನ್ನು ತಿರಸ್ಕರಿಸಿದ್ದಳು. ಮಕ್ಕಳಿಗೆ COVID ಲಸಿಕೆ ಇದ್ದರೆ ತಮ್ಮ 10 ವರ್ಷದ ಮಗನೊಂದಿಗೆ ಮನೆ ಇಂದ ಹೊರಗೆ ಬರಲು ಒಪ್ಪುತ್ತೇನೆಂದು ಹೇಳುತ್ತಿದ್ದಳು ಎನ್ನಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries