ಕಾಸರಗೋಡು: ಕೂಡ್ಲು ವಿವೇಕಾನಂದ ನಗರ ನಿವಾಸಿ ದಾಮೋದರನ್ ಎಂಬವರ ಪತ್ನಿ ತಾರಾ ಕೆ. ಎಂಬವರ ಬ್ಯಾಗಿನಲ್ಲಿದ್ದ 40ಸಾವಿರ ರಊ. ನಗದನ್ನು ಬಸ್ ಪ್ರಯಾಣದ ಮಧ್ಯೆ ಕಳವುಗೈದಿರುವ ಬಗ್ಗೆ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಜ. 27ರಂದು ಘಟನೆ ನಡೆದಿದೆ. ತಾರಾ ಅವರು ಬ್ಯಾಂಕಿನಿಂದ ಹಣ ಪಡೆದು, ಹೊಸ ಬಸ್ ನಿಲ್ದಾಣ ವಠಾರದಿಂದ ಕೆಲವೊಂದು ಸಾಮಗ್ರಿ ಖರೀದಿಸಿ ಮಧೂರು ರೂಟಿನ ಬಸ್ಸಿನಲ್ಲಿ ತೆರಳಿ ಮನೆ ಕಡೆ ತೆರಳುವ ಮಧ್ಯೆ ಬ್ಯಾಗಿನಲ್ಲಿದ್ದ ಹಣ ನಾಪತ್ತೆಯಾಗಿತ್ತು. ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಇವರು ಸಂಚರಿಸಿದ ಖಾಸಗಿ ಬಸ್‍ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ತಪಾಸಣೆ ನಡೆಸಿದಾಗ ಇವರ ಸನಿಹ ತಮಿಳ್ನಾಡು ಮೂಲದ ಮಹಿಳೆ ನಿಂತಿರುವುದನ್ನು ಗಮನಿಸಿದ್ದರು. ತಲಶ್ಯೇರಿಯಲ್ಲಿ ಬಸ್‍ಗಳಲ್ಲಿ ಕಳವು ನಡೆಸುವ ಕೆಲವು ಅಲೆಮಾರಿ ಮಹಿಳೆಯರ ಫೋಟೋ ವಿವಿಧ ಠಾಣೆಗಳಿಗೆ ರವಾನಿಸಿದ್ದು, ಇದರಲ್ಲಿ ತಾರಾ ಅವರು ಸಂಚರಿಸುವ ಬಸ್ಸನಲ್ಲಿದ್ದ ಮಹಿಳೆಯ ಚಿತ್ರವೂ ಒಳಗೊಂಡಿತ್ತೆನ್ನಲಾಗಿದೆ. ಇ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಲಾರಂಭಿಸಿದ್ದಾರೆ. ಬಸ್‍ಗಳಲ್ಲಿ ಬ್ಯಾಗಿನಿಂದ ಹಣ ಎಗರಿಸುವ ಮಹಿಳೆಯರ ತಂಡ ಸಕ್ರಿಯವಾಗಿದ್ದು, ಈ ಬಗ್ಗೆ ಜಾಗ್ರತೆ ಪಾಲಿಸುವಂತೆ ಪೊಲೀಸರೂ ಎಚ್ಚರಿಕೆ ನೀಡಿದ್ದಾರೆ.
ಬಸ್ ಪ್ರಯಾಣದ ಮಧ್ಯೆ ಮಹಿಳೆಯ 40ಸಾವಿರ ರೂ. ನಗದು ನಾಪತ್ತೆ-ದೂರು
0
ಫೆಬ್ರವರಿ 16, 2023
Tags