ಕೊಚ್ಚಿ: ಮೂರೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪೂಜಾರಿಯೊಬ್ಬನಿಗೆ ನ್ಯಾಯಾಲಯವು 45 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿದೆ.
ಉದಯಂಪೇರೂರ್ ಮೂಲದ ಪುರುಷೋತ್ತಮನ್ (83) ಶಿಕ್ಷೆಗೆ ಗುರಿಯಾದ ಪೂಜಾರಿ.
45 ವರ್ಷಗಳ ಶಿಕ್ಷೆ ಮಾತ್ರವಲ್ಲದೆ, 80 ಸಾವಿರ ರೂ. ದಂಡವನ್ನು ಸಹ ವಿಧಿಸಲಾಗಿದೆ. ಎರ್ನಾಕುಲಂನ ಪ್ರಿನ್ಸಿಪಲ್ ಪೊಕ್ಸೊ ನ್ಯಾಯಾಲಯ ಮಹತ್ವದ ಆದೇಶವನ್ನು ಹೊರಡಿಸಿದೆ.
2019-2020ರಲ್ಲಿ ದೇವಸ್ಥಾನದ ಪೂಜಾರಿಯಾಗಿದ್ದ ಆರೋಪಿ ಪುರುಷೋತ್ತಮನ್, ಮೂರೂವರೆ ವರ್ಷದ ಮಗುವಿಗೆ ಸಕ್ಕರೆ ಮಿಠಾಯಿ ಮತ್ತು ದ್ರಾಕ್ಷಿ ಆಮಿಷವೊಡ್ಡಿ, ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. ಮಗುವಿನ ವರ್ತನೆಯಲ್ಲಿ ಬದಲಾವಣೆಗಳು ಕಂಡ ಬಳಿಕ, ತಪಾಸಣೆ ನಡೆಸಿದಾಗ ಆಕೆಯ ಮೇಲೆ ಆತ್ಯಾಚಾರ ನಡೆದಿರುವುದು ಬೆಳಿಕಿಗೆ ಬಂದಿತ್ತು.
ಮಗುವಿನ ಹೇಳಿಕೆ ಆಧಾರದ ಮೇಲೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಪುರುಷೋತ್ತಮನ್ನನ್ನು ಬಂಧಿಸಿದ್ದರು. ವಿಚಾರಣೆಯ ವೇಳೆ ಆರೋಪಿಯು ಪೊಕ್ಸೊ ಕಾಯ್ದೆ ಸೇರಿದಂತೆ ಹತ್ತು ಅಪರಾಧಗಳಲ್ಲಿ ತಪ್ಪಿತಸ್ಥ ಎಂದು ಸಾಬೀತಾದ ನಂತರ ತೀರ್ಪು ಹೊರಬಿದ್ದಿದೆ. ಮೊಮ್ಮಗಳ ವಯಸ್ಸಿನ ಮಗುವಿನ ಮೇಲೆ ಆತ ಮಾಡಿದ ಕೃತ್ಯವು ಕ್ರೂರವಾಗಿದ್ದು, ಯಾವುದೇ ಕರುಣೆಗೆ ಅರ್ಹವಾಗಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಆರೋಪಿಗಳಿಂದ ವಸೂಲಾದ ದಂಡದ ಮೊತ್ತವನ್ನು ಬಾಲಕಿಯ ಕುಟುಂಬಕ್ಕೆ ವರ್ಗಾಯಿಸುವಂತೆಯೂ ನ್ಯಾಯಾಲಯ ಸೂಚಿಸಿದೆ.