ಮುಂಬೈ: ಜನವರಿ ತಿಂಗಳ ಸಗಟು ಬೆಲೆ ಆಧಾರಿತ ಹಣದುಬ್ಬರ ಶೇ.4.73 ಕ್ಕೆ ಇಳಿಕೆಯಾಗಿದ್ದು, ಸತತ 8 ನೇ ತಿಂಗಳು ಸಗಟು ಬೆಲೆ ಆಧಾರಿತ ಹಣದುಬ್ಬರ ಇಳಿಕೆ ಕಂಡಿದೆ.
ಉತ್ಪಾದಿತ ವಸ್ತುಗಳು ಹಾಗೂ ಇಂಧನ, ವಿದ್ಯುತ್ ಬೆಲೆಗಳಲ್ಲಿ ಕಡಿಮೆಯಾಗಿರುವುದರಿಂದ
ಸಗಟು ಬೆಲೆ ಆಧಾರಿತ ಹಣದುಬ್ಬರ ಇಳಿಕೆ ಕಂಡಿದೆ. ಡಬ್ಲ್ಯುಪಿಐ ಸೂಚ್ಯಂಕ ಆಧಾರಿತ
ಹಣದುಬ್ಬರ ಡಿಸೆಂಬರ್ ನಲ್ಲಿ 2022 ರಲ್ಲಿ ಶೇ.4.95 ರಷ್ಟಿತ್ತು. ಹಾಗೂ ಜನವರಿ 2022
ರಲ್ಲಿ ಇದು ಶೇ.13.68 ರಷ್ಟಿತ್ತು.
ಆಹಾರ ಪದಾರ್ಥಗಳ ಹಣದುಬ್ಬರ ಜನವರಿ ತಿಂಗಳಲ್ಲಿ ಶೇ.2.38 ಕ್ಕೆ ಏರಿಕೆಯಾಗಿದೆ.
ಜನವರಿ,2023 ರಲ್ಲಿ ಉಂಟಾಗಿರುವ ಕುಸಿತಕ್ಕೆ ಖನಿಜ ತೈಲಗಳು, ರಾಸಾಯನಿಕಗಳು ಮತ್ತು
ರಾಸಾಯನಿಕ ಉತ್ಪನ್ನಗಳು, ಜವಳಿ, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಜವಳಿ
ಮತ್ತು ಆಹಾರ ಉತ್ಪನ್ನಗಳಲ್ಲಿನ ಬೆಲೆ ಕಾರಣವಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ
ಸಚಿವಾಲಯ ಮಂಗಳವಾರ ತಿಳಿಸಿದೆ.
ಬೇಳೆಕಾಳುಗಳ ಹಣದುಬ್ಬರವು ಶೇಕಡಾ 2.41 ರಷ್ಟಿದ್ದರೆ, ತರಕಾರಿಗಳಲ್ಲಿ ಶೇ. (-) 26.48 ರಷ್ಟಿದೆ. ಎಣ್ಣೆ ಬೀಜಗಳ ಹಣದುಬ್ಬರವು ಜನವರಿ, 2023 ರಲ್ಲಿ (-) 4.22 ಶೇಕಡಾ ಆಗಿದೆ.
ಸೋಮವಾರ ಬಿಡುಗಡೆಯಾದ ಚಿಲ್ಲರೆ ಹಣದುಬ್ಬರ ದತ್ತಾಂಶಕ್ಕೆ ವ್ಯತಿರಿಕ್ತವಾಗಿ WPI ನಲ್ಲಿನ ಕುಸಿತ ಗ್ರಾಹಕರ ಬೆಲೆ ಸೂಚ್ಯಂಕ (CPI) ಅಥವಾ ಚಿಲ್ಲರೆ ಹಣದುಬ್ಬರ ಡಿಸೆಂಬರ್, 2022 ರಲ್ಲಿ 5.72 ಶೇಕಡಾದಿಂದ ಜನವರಿಯಲ್ಲಿ 6.52 ಶೇಕಡಾಕ್ಕೆ ಏರಿಕೆಯಾಗಿದೆ.